ಕಾಸರಗೋಡು: ಬೈಕ್ ಮತ್ತು ಜೀಪು ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಜಾಲ್ಸೂರು ಚೆರ್ಕಳ ರಸ್ತೆಯ ಬೋವಿಕ್ಕಾನದಲ್ಲಿ ಗುರುವಾರ ರಾತ್ರಿ ನಡೆದಿದೆ.
ಮಲ್ಲ ಕಲ್ಲುಕಂಡದ ಅಖಿಲ್ (22) ಮೃತಪಟ್ಟ ಯುವಕ. ಬೋವಿಕ್ಕಾನದಿಂದ ಕಲ್ಲು ಕಂಡದ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದ್ದು, ಅಖಿಲ್ ಎಸ್ಎಫ್ಐ ಕಾರ್ಯಕರ್ತನಾಗಿದ್ದನು.
https://bcsuddi.com/%e0%b2%b6%e0%b3%8d%e0%b2%b0%e0%b3%80%e0%b2%a8%e0%b2%97%e0%b2%b0-%e0%b2%85%e0%b2%ae%e0%b2%b0%e0%b2%a8%e0%b2%be%e0%b2%a5-%e0%b2%af%e0%b2%be%e0%b2%a4%e0%b3%8d%e0%b2%b0%e0%b3%86-%e0%b2%a4%e0%b2%be/
ಇನ್ನು ಗಂಭೀರ ಗಾಯಗೊಂಡ ಅಖಿಲ್‌ನನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.