E-PAPER
17 Nov 2026, 12:22:41 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಿತ್ತೂರು ರಾಣಿ ಚನ್ನಮ್ಮಗೆ ಸಾಮ್ರಾಜ್ಯ ಶಾಹಿ ಮನೋಭಾವ ಇರಲಿಲ್ಲ :- ಡಾ. ಗಜಾನನ ನಾಯ್ಕ

  1. ಬೆಳಗಾವಿ-29:ದಿನಾಂಕ:- 29/02/2024 ಗುರುವಾರ ಮ.ನ. ರ. ಸಂಘದ ಮಹಾಂತ ಭವನದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ಸಂಘದ ಅಡಿಯಲ್ಲಿ 2023 - 24 ನೇ ಯ ವಿಶೇಷ ಸರಣಿ ಉಪನ್ಯಾಸಗಳ ಮಾಲಿಕೆಯಲ್ಲಿ 7 ನೇ ವಿಶೇಷ ಉಪನ್ಯಾಸ ಕಿತ್ತೂರು ರಾಣಿ ಚನ್ನಮ್ಮ : ಮಹಿಳಾ ವ್ಯಕ್ತಿತ್ವದ ಚಾರಿತ್ರಿಕ ಅನಾವರಣ ಎಂಬ ವಿಷಯದ ಮೇಲೆ ಏರ್ಪಡಿಸಲಾಗಿತ್ತು . ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಡಾ.ಗಜಾನನ ನಾಯ್ಕ ರವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಸ್ಥಳೀಯ ಇತಿಹಾಸದ ನಾಯಕರನ್ನು ಓದುವ ಬದಲಾಗಿ ಪಠ್ಯದಲ್ಲಿ ವಿದೇಶದ ಇತಿಹಾಸದ ನಾಯಕರನ್ನ ಪಠ್ಯದಲ್ಲಿ ಓದುತ್ತಿರುವುದು ದುರಂತ . ಸರಿಯಾದ ಆಕರಗಳ ಲಭ್ಯತೆ ಮತ್ತು ನಿರೂಪಣಾ ಕ್ರಮ ಸರಿಯಾಗಿಲ್ಲದಿರುವ ಕಾರಣ ಚಾರಿತ್ರಿಕ ನಿಜವಾದ ಸ್ಥಳೀಯ ನಾಯಕರ ಕುರಿತಾದ ಮಾಹಿತಿ ತಡವಾಗಿ ಬೆಳಕಿಗೆ ತರಲಾಗಿದೆ. ರಾಣಿ ಚನ್ನಮ್ಮಗೆ ಸಾಮ್ರಾಜ್ಯ ಶಾಹಿ ಮನೋಭಾವನೆ ಇರಲಿಲ್ಲ. ಸಮಾಧಿಯ ಮೇಲೆ ಭಾರತೀಯ ಹೆಣ್ಣುಮಗಳು ಸಾಮ್ರಾಜ್ಯ ಸ್ಥಾಪನೆ ಮಾಡಿದ ಉದಾಹರಣೆಗಳು ಚರಿತ್ರೆಯಲ್ಲಿಯೇ ಇಲ್ಲ. ಮನೆತನದ ಗೌರವಕ್ಕೆ ಧಕ್ಕೆ , ಸ್ವಾಭಿಮಾನಕ್ಕೆ ಅಪಾಯ ಬಂದಾಗ ಮುಂದಾಳುತ್ವವನ್ನು ವಹಿಸಿಕೊಂಡಿದ್ದಾಳೆ. ಬ್ರಿಟಿಷ ಸಾಮ್ರಾಜ್ಯ ಶಾಹಿತ್ವವನ್ನು ಸದೆ ಬಡಿದು ವಿಜಯ ಪಡೆದು 200 ವರ್ಷಗಳು ಗತಿಸಿವೆ . ಈ ಸಂಭ್ರಮಾಚರಣೆ ಸಂದರ್ಭದಲ್ಲಿ ಮಹಿಳೆಯರ ಬೌದ್ಧಿಕ ಮತ್ತು ಮಾನಸಿಕ ಮಟ್ಟವನ್ನು ಉನ್ನತೀಕರಿಸುವ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮರ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಎಸ್.ಎಂ. ಗಂಗಾಧರಯ್ಯ ನಿರ್ದೇಶಕರು ರಾಣಿ ಚನ್ನಮ್ಮ ಅಧ್ಯಯನ ಪೀಠ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ರವರು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಭೂಮಿಯ ಮೇಲೆ ಕೋಟಿ ಕೋಟಿ ಜನ ಬದುಕಿದರು ಆದರೆ ಎಲ್ಲರೂ ಇತಿಹಾಸ ಸೃಷ್ಟಿಸಲಿಲ್ಲ . ಇತಿಹಾಸ ಸೃಷ್ಟಿಸಿದ ಕೆಲವೆ ಕೆಲವರಲ್ಲಿ ರಾಣಿ ಚನ್ನಮ್ಮ ಅಗ್ರ ಗಣ್ಯಳು. ರಾಣಿ ಚನ್ನಮ್ಮಳ ಇತಿಹಾಸ ಹಾಗೂ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರಶಿಕ್ಷರ್ಣಾಥಿ ಕು. ಪೂಜಾ ಪೂಜೇರಿ ತಂಡ ಪ್ರಾರ್ಥಿಸಿದರು, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ ರವರು ಸ್ವಾಗತಿಸಿದರು. ಡಾ. ಮಹೇಶ ಗಾಜಪ್ಪನವರ ಸಂಯೋಜಕರು ರಾಣಿ ಚನ್ನಮ್ಮ ಅಧ್ಯಯನ ಪೀಠ ರವರು ಪ್ರಸ್ತಾವಿಕ ಹಾಗೂ ಉಪನ್ಯಾಸಕರ ಪರಿಚಯ ಮಾಡಿದರು. ಡಾ. ಎಸ್. ವಿ. ವಾಲಿ ಶೆಟ್ಟಿ ಸಹಾಯಕ ಪ್ರಾಧ್ಯಾಪಕರು ವಂದಿಸಿದರು. ಪ್ರೊ.ಮಂಜುನಾಥ ಕಲಾಲ ಹಾಗೂ ಪ್ರೊ.ಸೋನಲ ಚಿನಿವಾಲ ಸಹಾಯಕ ಪ್ರಾಧ್ಯಾಪಕರು ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.