ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಿತ್ಯ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಮಗನನ್ನ ತಂದೆಯೇ ಕೈಕಾಲು ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಪುತ್ರ ಆದರ್ಶ್(28) ಮೃತ ಯುವಕ.
https://bcsuddi.com/%e0%b2%85%e0%b2%95%e0%b3%8d%e0%b2%b0%e0%b2%ae-%e0%b2%86%e0%b2%b8%e0%b3%8d%e0%b2%a4%e0%b2%bf-%e0%b2%97%e0%b2%b3%e0%b2%bf%e0%b2%95%e0%b3%86-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3/
ಆದರ್ಶ್ ದಿನವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, ಇತ್ತೀಚೆಗೆ ತಾಯಿಯ ಬಳಿ ಹಣ ಕೇಳಿದಾಗ ಕೊಡಲಿಲ್ಲವೆಂದು ಆಕೆಯ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಬೇಸತ್ತಿದ್ದ ತಂದೆ ಜಯರಾಮಯ್ಯ ಅವರು ಮಗನ ಕೈಕಾಲು ಕಟ್ಟಿಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.