LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಸೊಸಿ ಕುಡಿಯಿರಿ.!

 

ಕಲಬುರಗಿ : ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಮೂರು ಜಲಮೂಲಗಳಲ್ಲಿ ಒಂದಾದ ಭೀಮಾ ನದಿಯಿಂದ ಕಲುಷಿತ ನೀರು ಬರುತ್ತಿದ್ದು, ಈ ಕುಡಿಯುವ ನೀರನ್ನು ಶುದ್ಧೀಕರಿಸಿ, ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಆದಗ್ಯೂ ಸಹ ಕಲಬುರಗಿ ನಗರದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಸೊಸಿ ಕುಡಿಯಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್ಎಂಪಿ, ಕೆಯುಐಡಿಎಫ್ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ನಗರದ ಸಾರ್ವಜನಿಕರು ತಮ್ಮ ಮನೆಗಳಿಗೆ ತೆಗೆದುಕೊಂಡ ನಳದ ಜೋಡಣೆಗೆ ತೊಟ್ಟಿಯನ್ನು ಕಡ್ಡಾಯವಾಗಿ ಕೂಡಿಸಿಕೊಳ್ಳಬೇಕು. ನಳದ ತಗ್ಗುಗಳನ್ನು ಮುಚ್ಚಬೇಕು. ಏಕೆಂದರೆ ತಗ್ಗುಗಳಲ್ಲಿ ಕಲುಷಿತ ನೀರು ಸಂಗ್ರಹಣೆಯಾಗಿ ಅದೇ ನೀರು ಮತ್ತೆ ನಳದ ತೊಟ್ಟಿಯಲ್ಲಿ ಸೇರುವ ಮೂಲಕ ಮುಂದಿನ ಗ್ರಾಹಕರಿಗೆ ತಲುಪುತ್ತದೆ. ಇದರಿಂದ ಸಂಕ್ರಾಮಿಕ ರೋಗ ಹರಡುವ ಸಂಭವ ಇರುತ್ತದೆ ಹಾಗೂ ನೀರು ಪೋಲಾಗದಂತೆ ನೋಡಿಕೊಳ್ಳಬಹುದಾಗಿದೆ.

ಕಲಬುರಗಿ ನಗರದ ಸಾರ್ವಜನಿಕರು ಕಲುಷಿತ ನೀರು ಅಥವಾ ಯಾವುದೇ ರೀತಿಯ ಕುಡಿಯುವ ನೀರಿಗೆ ಸಂಬಂಧಪಟ್ಟ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆಗಳಿಗೆ 08472-237247/ 08472-266611 ಗಳಿಗೆ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ. ಕಲಬುರಗಿ ಸಾರ್ವಜನಿಕರು ಮಹಾನಗರಪಾಲಿಕೆ, ಕೆಯುಐಡಿಎಫ್ಸಿ ಹಾಗೂ ಮೆ|| ಎಲ್ ಆಂಡ್ ಟಿ ಲಿಮಿಟೆಡ್ ಇವರೊಂದಿಗೆ ಸಹಕರಿಬೇಕೆಂದು ಅವರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಜಿಎಸ್‌ಟಿ , ಆದಾಯ ತೆರಿಗೆ ನೀಡುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳ ತಿರಸ್ಕಾರ'- ಲಕ್ಷ್ಮೀ ಹೆಬ್ಬಾಳ್ಕರ್‌ಸೆ.1ರಿಂದ ಮೊಬೈಲ್‌ OTP ವ್ಯವಸ್ಥೆ ಬಂದ್‌ ..?ನಾವು ಒಗ್ಗಟ್ಟಾಗಿರಬೇಕು, ಇಲ್ಲದಿದ್ದರೆ ನಮ್ಮನ್ನು ಕತ್ತರಿಸಲಾಗುತ್ತದೆ: ಯೋಗಿ ಆದಿತ್ಯನಾಥ್ ಹೀಗೆ ಹೇಳಲು ಕಾರಣ ಏನು ಗೊತ್ತಾ...?ನಟ ದರ್ಶನ್‌ ಮತ್ತು ಗೃಹ ಸಚಿವ ಅಮಿತ್‌ ಶಾಗೆ ಬೆದರಿಕೆ ಹಾಕಿದ್ದ ಉಗ್ರ ಹಿಂಡಲಗಾ ಜೈಲಿಗೆ ಶಿಫ್ಟ್‌….!ಜಾತ್ರೆ ಪ್ರಸಾದ ಸೇವಿಸಿ ಮೂವರ ದುರ್ಮರಣಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಆ. 30ಕ್ಕೆ ಬಿಜೆಪಿ ಸೇರ್ಪಡೆನಿವೃತ್ತ ನೌಕರರಿಗೆ  ಪಿಂಚಣಿ ಎಷ್ಟು ಸಿಗುತ್ತದೆ?ರಾಜ್ಯದಲ್ಲಿ ಇಂದಿನಿಂದ ಮದ್ಯಕ್ಕೆ ಹೊಸ ದರ : ಫುಲ್ ಬಾಟಲ್ ರಮ್ ವಿಸ್ಕಿಯ ಬೆಲೆ 500-600 ರೂ. ಇಳಿಕೆರೈತರ ಪ್ರತಿಭಟನೆ ಬಾಂಗ್ಲಾ ಮಾದರಿಯ ಹಿಂಸಾಚಾರ ಸೃಷ್ಟಿಸುತ್ತಿತ್ತು - ಕಂಗನಾ ಹೇಳಿಕೆಗೆ ಛೀಮಾರಿ ಹಾಕಿದ ಬಿಜೆಪಿ45,000 ಕೋಟಿ ರೂ ಹಗರಣದ ಆರೋಪಿ ಪರ್ಲ್ಸ್ ಗ್ರೂಪ್‌ನ ನಿರ್ಮಲ್ ಸಿಂಗ್ ಭಂಗೂ ನಿಧನ