LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕುವೈಟ್‌ನಲ್ಲಿ ಹವಾಯಿ ಚಪ್ಪಲಿಗೆ 1 ಲಕ್ಷ ರೂ.: ವಿಡಿಯೋ ವೈರಲ್

ನವದೆಹಲಿ: ಭಾರತದಲ್ಲಿ ದಶಕಗಳಿಂದ ಜನರು ಧರಿಸುತ್ತಿರುವ ಹವಾಯಿ ಚಪ್ಪಲಿ 400ರ ಗಡಿ ದಾಟಿಲ್ಲ. ಇದೀಗ ಅದೇ ಹವಾಯಿ ರೀತಿಯ ಚಪ್ಪಲಿಗೆ 1 ಲಕ್ಷ ರೂಪಾಯಿ ಆಗಿದೆ. ಆದರೆ ಅದು ನಮ್ಮ ದೇಶದಲ್ಲಿ ಅಲ್ಲ. ಕುವೈಟ್‌ನಲ್ಲಿ.

ಭಾರತದಲ್ಲಿ ದಿನನಿತ್ಯದ ಓಡಾಟಕ್ಕೆ ಬಳಸುವ ಹವಾಯಿ ಚಪ್ಪಲಿಯಂತೆ ಕಾಣುವ ಈ ಚಪ್ಪಲಿಗೆ ಕುವೈಟ್‌ನಲ್ಲಿ 4,590 ರಿಯಾಲ್. ಅಂದರೆ 1 ಲಕ್ಷ ರೂಪಾಯಿ ಆಗಿದೆ. ಆದರೆ ಅದೇ 1 ಲಕ್ಷ ರೂ. ಗೆ ಭಾರತದಲ್ಲಿ ನೂರಾರು ಹವಾಯಿ ಚಪ್ಪಲಿಗಳನ್ನು ಕೊಂಡುಕೊಳ್ಳಬಹುದಾಗಿದೆ ಎಂಬುದು ವಿಪರ್ಯಾಸ. ಇದೀಗ ಈ ಚಪ್ಪಲಿಯ ಬೆಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಚಪ್ಪಲಿಯನ್ನು ಕುವೈಟ್‌ನ ಸ್ಟೋರ್ ಒಂದರಲ್ಲಿ ಮಾರಾಟ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಶೇರ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್ ನಲ್ಲಿ ಕುವೈಟ್‌ನ ಸ್ಟೋರ್ ಒಂದರಲ್ಲಿ ಸುಮಾರು 4,590 ರಿಯಾಲ್ ಗೆ ಚಪ್ಪಲಿಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, 'ಬಾತ್ ರೂಂಗೆ ಹಾಕುವ ಈ ಚಪ್ಪಲಿಗೆ 1 ಲಕ್ಷ ರೂಪಾಯಿ ಕೊಟ್ಟು ಕೊಂಡುಕೊಳ್ಳಬೇಕಾ' ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಒಬ್ಬರು 'ಈ ಚಪ್ಪಲಿಯನ್ನು ಶ್ರೀಮಂತರಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ' ಎಂದು ಹೇಳಿದರೆ, ಇನ್ನೊಬ್ಬರು '4,590 ರಿಯಾಲ್ ಕೊಟ್ಟು ಈ ಚಪ್ಪಲಿಗಳನ್ನು ಒಮ್ಮೆ ಖರೀದಿ ಮಾಡಿದರೆ ಇಡೀ ಜೀವನದುದ್ದಕ್ಕೂ ಶೌಚಾಲಯಕ್ಕೆ ಹೋಗಲು ಅದನ್ನೇ ಬಳಸಬೇಕಾಗುತ್ತದೆ' ಎಂದು ಬರೆದಿದ್ದಾರೆ.

ಇನ್ನು ಕೆಲವರು 'ಇದು ನಮ್ಮ ಕುಟುಂಬದಲ್ಲಿ ಬಾತ್ ರೂಂಗೆ ಹೋಗಲು ಬಳಸುವ ಚಪ್ಪಲಿಗಳು' ಎಂದರೆ, ಮತ್ತೊಬ್ಬರು 'ಭಾರತದಲ್ಲಿ ನಿಮಗೆ ಈ ಚಪ್ಪಲಿಗಳು 60 ರೂಪಾಯಿಗೆ ಸಿಗುತ್ತದೆ', 'ಭಾರತದಲ್ಲಿ ನಾವು ಇದನ್ನು ಹೆಚ್ಚಾಗಿ ಶೌಚಾಲಯಕ್ಕೆ ಹೋಗಲು ಬಳಸುತ್ತೇವೆ' ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ 'ಇದು ನಿಜವಾಗಿಯೂ ತಾಯಂದಿರ ದಿನದ ಅತ್ಯುತ್ತಮ ಉಡುಗೊರೆಯಾಗಿದೆ. ಯಾಕೆಂದರೆ ಎಲ್ಲಾ ತಾಯಂದಿರಿಗೆ ಚಪ್ಪಲಿ ಅತ್ಯುತ್ತಮ ಆಯುಧ' ಎಂದು ಕಮೆಂಟ್ ಗಳನ್ನು ಮಾಡಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆಂಟ್ರಲ್‌ ಬ್ಯಾಂಕ್‌ನಿಂದ ಹುದ್ದೆಗಳಿಗೆ ಅರ್ಜಿ ಆಹ್ವಾನಗೃಹರಕ್ಷಕ ದಳದ ಸಿಬ್ಬಂದಿಯ ಬಂಧನ..!! ಕಾರಣ??ಅಯೋಧ್ಯೆಯಲ್ಲಿ 22 ವರ್ಷದ ಯುವತಿಯ ಅತ್ಯಾಚಾರ, ಕೊಲೆ- ಕಣ್ಣೀರಿಟ್ಟ ಸಂಸದಆಧಾರ ಕಾರ್ಡ್‌ ಮೂಲಕ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯಹಿಂದೂ ಧರ್ಮ ಎಂದರೆ ಯಾರನ್ನೂ ಬಲವಂತವಾಗಿ ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸುವುದಲ್ಲ: ತರೂರ್ಮಹಾ ಕುಂಭ ಮೇಳದಲ್ಲಿ 'ಅಮೃತ ಸ್ನಾನ' ಕ್ಕಾಗಿ 'ಆಪರೇಷನ್ ಇಲೆವೆನ್'ಸಂಗೀತ ಕಾರ್ಯಕ್ರಮದಲ್ಲೇ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲುನ್ಯಾಕ್ ಗ್ರೇಡ್ ಕೊಡಲು ಲಂಚ ಪಡೆದ ವಿವಿ ಪ್ರಾಧ್ಯಾಪಕಿ ಬಂಧನಕಾಲೇಜು ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿ ಶಿಶುವನ್ನು ಕಸದ ಬುಟ್ಟಿಯಲ್ಲಿ ಬಚ್ಚಿಟ್ಟು ಕ್ಲಾಸಿಗೆ ಹಾಜರ್!ವಸಂತ ಪಂಚಮಿಯ ಪವಿತ್ರ ದಿನ- ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ 3ನೇ ಅಮೃತಸ್ನಾನ