LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಎಫ್ಐಆರ್ ದಾಖಲು

ಹೈದರಾಬಾದ್‌: ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತರನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪದಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

ಅಮಿತ್ ಶಾ ಅವರೊಂದಿಗೆ ಬಿಜೆಪಿ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧವೂ ಎಫ್‌ಐಆ‌ರ್ ದಾಖಲಾಗಿದೆ.

ಮೇ 1 ರಂದು ಲಾಲ್ದವಾಜಾದಿಂದ ಸುಧಾ ಟಾಕೀಸ್‌ವರೆಗೆ ನಡೆದ ಬಿಜೆಪಿಯ ಚುನಾವಣಾ ರ್ಯಾಲಿ ನಡೆದಿತ್ತು. ಈ ವೇಳೆ ಅಮಿತ್ ಶಾ ಅವರೊಂದಿಗೆ ಕೆಲ ಅಪ್ರಾಪ್ತರು ವೇದಿಕೆ ಹಂಚಿಕೊಂಡಿದ್ದರು ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ನಿರಂಜನ್ ರೆಡ್ಡಿ ಆರೋಪಿಸಿದ್ದು, ಈ ಬಗ್ಗೆ ತೆಲಂಗಾಣ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ.

ಈ ದೂರಿನಲ್ಲಿ ಮಗುವಿನ ಕೈಯಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಇದ್ದಿರುವುದು ಗಮನಕ್ಕೆ ಬಂದಿದೆ. ಇದು ಚುನಾವಣಾ ಆಯೋಗದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ದೂರಿನ ಮೇರೆಗೆ ವಾಸ್ತವತೆಯನ್ನು ಪರಿಶೀಲನೆ ಮಾಡುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ನಗರ ಪೊಲೀಸರಿಗೆ ಪ್ರಕರಣವನ್ನು ರವಾಸಿದ್ದರು. ಬಳಿಕ ಮೊಘಲ್‌ಪುರ ಪೊಲೀಸ್‌ ಠಾಣೆಯಲ್ಲಿ ಅಮಿತ್ ಶಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿರೂರು ಗುಡ್ಡ ಕುಸಿತ: ಮತ್ತೆ ಶವಗಳಿಗೆ ಶೋಧ..!ಸಿನಿಮಾ ಆಸೆ ತೋರಿಸಿ ಹನಿ ಖೆಡ್ಡಾಗೆ ಕೆಡವಿ 40 ಲಕ್ಷ ಪೀಕಿದ ಸುಂದರಿ ಅಂಡ್ ಗ್ಯಾಂಗ್...!ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು..!'ಕಾಂಗ್ರೆಸ್, ರಾಜಕೀಯ ಲಾಭಕ್ಕಾಗಿ ಯುವಕರ ಭವಿಷ್ಯವನ್ನು ಹಾಳುಮಾಡುತ್ತಿವೆ' - ಪ್ರಧಾನಿ ಮೋದಿನ್ಯಾಯಧೀಶರ ಮುಂದೆ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ‌ ಮಾಡಿರೋ ಸಂತ್ರಸ್ತೆ 164 ದಾಖಲುಭಾರತೀಯ ರೈಲ್ವೆ ಇಲಾಖೆಯಲ್ಲಿ ವಿವಿಧ 8 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನವಿವಾದಾತ್ಮಕ ಚಲನಚಿತ್ರ ವಿಚಾರ - ನಟಿ ಕಂಗನಾಗೆ ನೋಟಿಸ್ಆರ್.ಅಶೋಕ್​​ ವಿರುದ್ಧ ಎಫ್‌ಐಆರ್‌ ಕೇಸ್‌: ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ ಸರ್ಕಾರ ವಿರುದ್ದ ಆಕ್ರೋಶ40% ಕಮಿಷನ್‌ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇನ್ನಿಲ್ಲ2040ಕ್ಕೆ ಮಾನವ ಸಹಿತ ಚಂದ್ರಯಾನ- ಅನುದಾನಕ್ಕೆ ಕೇಂದ್ರ ಅನುಮೋದನೆ