LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಕೇಜ್ರಿವಾಲ್ ಆಪ್ತ ನನ್ನ ಕೆನ್ನೆಗೆ ಹೊಡೆದು, ಎದೆ, ಹೊಟ್ಟೆ, ಸೊಂಟಕ್ಕೆ ಒದ್ದಿದ್ದಾನೆ'- ಸ್ವಾತಿ ಮಲಿವಾಲ್

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಕನಿಷ್ಠ ಏಳರಿಂದ ಎಂಟು ಬಾರಿ ನನ್ನ ಕೆನ್ನೆಗೆ ಹೊಡೆದಿದ್ದಾನೆ. ಜೊತೆಗೆ ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದಿದ್ದಾನೆ ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಗಂಭೀರವಾಗಿ ಆರೋಪಿಸಿದ್ದಾರೆ.

ಹಲ್ಲೆ ನಡೆಸಿದ ಸಂಬಂಧ ಬಿಭವ್ ಕುಮಾರ್ ವಿರುದ್ಧ ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದೂರು ನೀಡಿದ್ದಾರೆ. ದೂರಿನ ಮೇರೆಗೆ ಬಿಭವ್ ಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸ್ವಾತಿ ಅವರು ಮೇ 13 ರಂದು ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ದೌರ್ಜನ್ಯದ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.

ಮೇ 13 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ಕೇಜ್ರಿವಾಲ್ ಅವರ ಮನೆಯ ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದಾಗ ಬಿಭವ್ ಕುಮಾರ್ ಒಳಗೆ ಬಂದು ಕಾರಣವಿಲ್ಲದೇ ನನ್ನ ವಿರುದ್ಧ ಕಿರುಚಾಡಲು ಹಾಗೂ ನಿಂದಿಸಲು ಪ್ರಾರಂಭಿಸಿದ್ದಾನೆ. ನೀವು ನಮ್ಮ ಮಾತನ್ನು ಯಾಕೆ ಕೇಳುವುದಿಲ್ಲ? ಕೆಟ್ಟ ಮಹಿಳೆ, ನಾವು ನಿಮಗೆ ಪಾಠ ಕಲಿಸುತ್ತೇವೆ ಎಂದೆಲ್ಲಾ ಮನಬಂದಂತೆ ಬೈದಿದ್ದಾನೆ. ಬಳಿಕ ನನಗೆ 7-8 ಕೆನ್ನೆಗೆ ಹೊಡೆದಿದ್ದಾನೆ. ನಾನು ಎಷ್ಟೇ ಮನವಿ ಮಾಡಿಕೊಂಡರೂ ಪದೇ ಪದೇ ನನ್ನ ಹೊಟ್ಟೆ ಮತ್ತು ಸೊಂಟಕ್ಕೆ ಒದ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಣೆಗೆ ತಿಲಕವಿಡುವಾಗ ಯಾವ ಬೆರಳು ಉಪಯೋಗಿಸಬೇಕು ಗೊತ್ತೇ?ನಿಖಿಲ್ ಗೆಲುವಿಗಾಗಿ ದೇವರ ಮೊರೆಹೋದ ದೇವೇಗೌಡರ ಕುಟುಂಬತಿರುಪತಿಯ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್ಅಂತ್ಯ ಸಂಸ್ಕಾರದ ವೇಳೆ ಸಂಬಂಧಿಕರ ಕೈ ಗಟ್ಟಿಯಾಗಿ ಹಿಡಿದ 8 ತಿಂಗಳ ಮಗು!ಜಾತಿ ಹಿಂಸಾಚಾರ ಪ್ರಕರಣ - ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡು ಅಪರಾಧಿಯೋರ್ವ ಸಾವುವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ದರ್ಶನ ಆರಂಭಉಡುಪಿ: ಕರಿಮಣಿ ಮಾಲೀಕ ನೀನಲ್ಲ ಅಂತಾ ಗಂಡನ ಜೊತೆ ರೀಲ್ಸ್ ಮಾಡಿದವಳು ,ಬಾಯ್ ಫ್ರೆಂಡ್ ಜೊತೆ ಸೇರಿ ಕೊಂದೇ ಬಿಟ್ಟಳು.ಬೆಂಗಳೂರು : ಭಾನುವಾರವೂ ಶಾಲೆಗಳು ಓಪನ್ - ಕಡಿತವಾಗಿರುವ ತರಗತಿಗಳನ್ನು ಸರಿದೂಗಿಸುವ ಯತ್ನ!ಅಧಿಕೃತ ನಿವಾಸದಲ್ಲಿ ಅಯೋಧ್ಯೆ ಎಂಡಿಎಂ ನಿಗೂಢವಾಗಿ ಸಾವುಬಾಬಾ ಸಿದ್ದಿಕ್ ಅವರ ಮಗ ಅಜಿತ್ ಪವಾರ್ ತಂಡಕ್ಕೆ ಸೇರ್ಪಡೆ