LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೇರಳದಲ್ಲಿ ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ!

ಕೋಯಿಕ್ಕೋಡ್: ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

ಕೇರಳ ರಾಜ್ಯದ ತ್ರಿಶೂರ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ವೆಸ್ಟ್ ನೈಲ್ ಜ್ವರ ಪ್ರಕರಣಗಳು ವರದಿಯಾಗಿವೆ. ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳು ವಾಸವಿರುವ ಮನೆಗಳ ಸುತ್ತ ಬೇರೆ ಯಾರಲ್ಲೂ ಜ್ವರ ಕಂಡುಬಂದಿಲ್ಲ ಎಂದು ಜಿಲ್ಲಾ ಕಣ್ಗಾವಲು ತಂಡದ ಅಧಿಕಾರಿ ಹೇಳಿದ್ದಾರೆ. ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಕಂಡುಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳಿಂದ ಹರಡುವ ವೈರಲ್ ಜ್ವರ ಇದಾಗಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಾಶಪಡಿಸುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ. ಈಗಾಗಲೇ ರೋಗದ ಲಕ್ಷಣ ಕಂಡುಬಂದಿದ್ದವರ ಪ್ರಯೋಗಾಲಯ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈಗ ಅದರ ವರದಿ ಬಂದಿದ್ದು, ಐವರು ವೆಸ್ಟ್ ನೈಲ್ ಫೀವರ್‌ನಿಂದ ಬಳಲುತ್ತಿರುವುದು ಗೊತ್ತಾಗಿದೆ. ಈ ಜ್ವರ ಸೊಳ್ಳೆಗಳಿಂದ ಹರಡುತ್ತದೆ ಎಂದು ಅವರು ಹೇಳಿದ್ದಾರೆ. 1937ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಈ ಜ್ವರ ಪತ್ತೆಯಾಗಿತ್ತು. 2011ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. 2019ರಲ್ಲಿ ಮಲ್ಲಪ್ಪುರಂನಲ್ಲಿ ಒಬ್ಬ ಬಾಲಕ ಜ್ವರದಿಂದ ಮೃತಪಟ್ಟಿದ್ದ. ಮೇ 2022ರಲ್ಲಿ ತ್ರಿಶೂರ್‌ನಲ್ಲಿ 47 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಮ್ಮು & ಕಾಶ್ಮೀರದ ಬುದ್ಗಾಮ್ ಕ್ಷೇತ್ರದಲ್ಲಿ 18,000+ ಮತಗಳಿಂದ ಗೆದ್ದ ಮಾಜಿ ಸಿಎಂ ಒಮರ್ ಅಬ್ದುಲ್ಲಾಹರಿಯಾಣದಲ್ಲಿ ಬಿಜೆಪಿಗೆ 2 ಕ್ಷೇತ್ರದಲ್ಲಿ ಗೆಲುವು, 47 ಕ್ಷೇತ್ರದಲ್ಲಿ ಮುನ್ನಡೆ'ಎಲ್ಲ ಪಿತೂರಿಗಳ ನಡುವೆ ಅದಕ್ಕೆ ತದ್ವಿರುದ್ಧವಾಗಿ ಹರಿಯಾಣದಲ್ಲಿ ಬಿಜೆಪಿ ಮತ್ತೆ ಜಯಭೇರಿ'-ವಿಜಯೇಂದ್ರಕುತೂಹಲ ಮೂಡಿಸಿದ ಸತೀಶ್ ಜಾರಕಿಹೊಳಿ-ಸಿಎಂ ಆಪ್ತ ಡಾ.ಹೆಚ್.ಸಿ ಮಹದೇವಪ್ಪ ದಿಢೀರ್ ಭೇಟಿಜಾತಿ ನಿಂದನೆ ಆರೋಪ; ಹಾಸ್ಯನಟ ಹುಲಿ ಕಾರ್ತಿಕ್‌ ವಿರುದ್ಧ ಎಫ್‌‌ಐಆರ್‌‌ ದಾಖಲು..!'ಬಿಜೆಪಿ ಹ್ಯಾಟ್ರಿಕ್ ಸಾಧಿಸಿ ಅಧಿಕಾರ ಉಳಿಸಿಕೊಳ್ಳಲಿದೆ'- ಹರಿಯಾಣ ಸಿಎಂಹರಿಯಾಣದಲ್ಲಿ ಸೋಲಿನ ಭಯ - ಭಾರತದ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ಗಂಭೀರ ಆರೋಪಕೇಕ್‌ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ: ಬಾಲಕ ಮೃತ್ಯು, ದಂಪತಿ ಗಂಭೀರ13 ಮಂದಿಗೆ ವಿಷ ಹಾಕಿ ಸಾಯಿಸಿದ ಮನೆ ಮಗಳು..! ಕಾರಣ ಇಲ್ಲಿದೆಜಮ್ಮು & ಕಾಶ್ಮೀರದಲ್ಲಿ ಬಹುಮತದ ಗಡಿ ದಾಟಿದ ಕಾಂಗ್ರೆಸ್‌