LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೇರಳದ ದೇವಾಲಯಕ್ಕೆ ಯಾಂತ್ರಿಕ ಆನೆ ಉಡುಗೊರೆ ಕೊಟ್ಟ ಪ್ರಿಯಾಮಣಿ

ಕೇರಳ: ಬಹುಭಾಷಾ ನಟಿ ಪ್ರಿಯಾಮಣಿ ಅವರು ಕೇರಳದ ದೇವಸ್ಥಾನವೊಂದಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಂದು ಇದು ನಿಜವಾದ ಆನೆಯಲ್ಲ. ಬದಲಾಗಿ ನಿಜವಾದ ಆನೆಯಂತೆಯೇ ಇರುವ ಯಾಂತ್ರಿಕ ಆನೆಯಾಗಿದೆ.

ದಾನ ನೀಡಿರುವ ಆನೆಯ ಹೆಸರು ಮಹದೇವನ್ ಆಗಿದ್ದು, ಕೇರಳದ ಕೊಚ್ಚಿಯಲ್ಲಿನ ತ್ರಿಕಾಯಿಲ್ ಮಹದೇವನ್ ದೇವಾಲಯಕ್ಕೆ ನಟಿ ಪ್ರಿಯಾಮಣಿ ಯಾಂತ್ರಿಕ ಆನೆಯನ್ನು ನೀಡಿದ್ದಾರೆ. ಅವರು ದೇವಸ್ಥಾನಕ್ಕೆ ಆನೆ ನೀಡಿರುವುದು ಯಾವುದೇ ಹರಕೆ ತೀರಿಸಲು ಅಥವಾ ಧಾರ್ಮಿಕ ಕಾರಣಕ್ಕಾಗಿ ಅಲ್ಲ. ಬದಲಾಗಿ ಒಂದು ಪ್ರಬಲವಾದ ಕಾರಣಕ್ಕೆ ಈ ಆನೆಯನ್ನು ದಾನ ನೀಡಿದ್ದಾರೆ.

ಕೊಚ್ಚಿಯ ತ್ರಿಕಾಯಿಲ್ ಮಹದೇವನ್ ದೇವಸ್ಥಾನವು, ಇನ್ನು ಮುಂದೆ ನಾವು ಜೀವಂತ ಆನೆಯನ್ನು ದೇವಾಲಯದ ಯಾವುದೇ ಧಾರ್ಮಿಕ ಅಥವಾ ಇನ್ಯಾವುದೇ ಕಾರ್ಯಗಳಿಗೆ ಬಳಸುವುದಿಲ್ಲ. ಜೀವಂತ ಆನೆಯನ್ನು ಹಾಗೆ ಧಾರ್ಮಿಕ, ಪ್ರದರ್ಶನಕ್ಕಾಗಿ ಬಳಸುವುದು ಕ್ರೂರತೆ ಎಂದು ನಿರ್ಧಾರ ಮಾಡಿದೆ. ಜೊತೆಗೆ ದೇವಸ್ಥಾನದ ಈ ನಿರ್ಧಾರವನ್ನು ಪೇಟಾ ಸಹ ಮೆಚ್ಚಿಕೊಂಡಿದೆ. ಜೊತೆಗೆ ನಟಿ ಪ್ರಿಯಾಮಣಿ ಕೋಡ ದೇವಸ್ಥಾನದ ಈ ನಿರ್ಣಯವನ್ನ ಮೆಚ್ಚಿಕೊಂಡಿದ್ದು, ಇದೀಗ ದೇವಾಲಯಕ್ಕೆ ಕೃತಕ ಆನೆಯನ್ನು ಉಡುಗೊರೆಯನ್ನಾಗಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಪ್ರಿಯಾಮಣಿ ನೀಡಿರುವ ಆನೆಯ ಗಾತ್ರವು ನಿಜವಾದ ಆನೆಯ ಗಾತ್ರವನ್ನು ಹೋಲುತ್ತದೆ. ಜೊತೆಗೆ ಈ ಬೃಹತ್ ಆನೆಯನ್ನು ದೇವಾಲಯದ ಮುಂದೆ ಪ್ರತಿಷ್ಠಾಪಿಸಲಾಗುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ   -ಬಸವಲಿಂಗದೇವಆ.31 ರೊಳಗೆ ರೇಷನ್ ಕಾರ್ಡ್ ‘ಇ-ಕೆವೈಸಿ’ ಮಾಡಿಸುವುದು ಕಡ್ಡಾಯ.! ಇಲ್ಲವಾದಲ್ಲಿ ರೇಷನ್ ಬಂದ್ಅರ್ಹತೆ ಇಲ್ಲದ ಸಿಬ್ಬಂದಿ ಬಳಸಿ ವಿಮಾನಗಳ ನಿರ್ವಹಣೆ: ಏರ್ ಇಂಡಿಯಾಗೆ 90 ಲಕ್ಷ ರೂ. ದಂಡನಾಳೆ ಈ ಹಳ್ಳಿಗಳಲ್ಲಿ ಆಗಸ್ಟ್ 24 ರಿಂದ 27 ರವರೆಗೆ ಕರೆಂಟ್ ಇರಲ್ಲ.!ಪಿಎಂ ಕಿಸಾನ್ ಹಣ ಜಮೆಯಾಗಲು ಕೂಡಲೇ ಈ ಕೆಲಸ ಮಾಡಿಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ತೆರಳಿದ ಸಿಎಂ, ಡಿಸಿಎಂ, ಹೋಂ ಮಿನಿಸ್ಟರ್ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ: ಈ ಯೋಜನೆಯಡಿ 1.5 ಲಕ್ಷ ಸಹಾಯಧನ, ಈಗಲೇ ಅರ್ಜಿ ಸಲ್ಲಿಸಿ ಲಿಂಕ್ ಇಲ್ಲಿದೆಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ..? ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ..? ಸಿಎಂಗೆ HDK ಕೌಂಟರ್ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದೇಶದ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ಸಂಪುಟ ಅಸ್ತು - 500 ಕೋಟಿ ವೆಚ್ಚದಲ್ಲಿ ನಿರ್ಮಾಣರಾಜ್ಯ ಸರ್ಕಾರ V/S ರಾಜ್ಯಪಾಲ ಸಂಘರ್ಷ - 11 ವಿಧೇಯಕ ವಾಪಸ್ ಕಳುಹಿಸಿದ ರಾಜ್ಯಪಾಲರು..!