LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೊಲಂಬೊ: ಪಾಕ್ ಬಗ್ಗುಬಡಿದ ಟೀಂ ಇಂಡಿಯಾ: ಭಾರತಕ್ಕೆ 228 ರನ್ ಗಳ ಭರ್ಜರಿ ಗೆಲುವು

ಕೊಲಂಬೊ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 228 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 357ರನ್ ಗಳ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 32 ಓವರ್ ನಲ್ಲಿ 128 ರನ್ ಗಳಿಸಿ 228ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಪಾಕಿಸ್ತಾನದ ಪರ ಆರಂಭಿಕ ಆಟಗಾರ ಫಖರ್ ಜಮಾನ್ ಗಳಿಸಿದ 27 ರನ್ ಗಳೇ ಆ ತಂಡದ ಬ್ಯಾಟರ್ ಗಳಿಸಿದ ಗರಿಷ್ಟ ರನ್ ಆಗಿತ್ತು.

ನಾಯಕ ಬಾಬರ್ ಅಜಂ 10 ರನ್ ಗಳಿಸಿದರೆ, ಅಘಾ ಸಲ್ಮಾನ್ ಮತ್ತು ಇಫ್ತಿಕಾರ್ ಅಹ್ಮದ್ ತಲಾ 23 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ.

128 ರನ್ ಗಳಿಸಿದ್ದ ವೇಳೆ ಫಾಹೀಂ ಅಶ್ರಫ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರು. ಇದು ಪಾಕಿಸ್ತಾನದ 8ನೇ ವಿಕೆಟ್ ಆಗಿತ್ತು. ಆದರೆ ಆ ಬಳಿಕ ಪಾಕಿಸ್ತಾನದ ಬಾಕಿ ಇಬ್ಬರು ಆಟಗಾರರು ಬ್ಯಾಟಿಂಗ್ ಬರಲಿಲ್ಲ. ನಸೀಮ್ ಶಾ ಮತ್ತು ಹ್ಯಾರಿಸ್ ಗಾಯಗೊಂಡಿದ್ದರಿಂದ ಅವರು ಬ್ಯಾಟಿಂಗ್ ಗೆ ಬರಲಿಲ್ಲ. ಹೀಗಾಗಿ ಪಾಕಿಸ್ತಾನ ತಂಡವನ್ನು ಆಲೌಟ್ ಎಂದು ಘೋಷಿಸಿ ಭಾರತ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-----ದಾಸೋಹದ ಸಂಗಣ್ಣ  ಅವರ ವಚನ …!ಅಡುಗೆ ಅನಿಲ ಆಧಾರ್ ಇ-ಕೆವೈಸಿ ಕುರಿತು ಸ್ಪಷ್ಟ ಮಾಹಿತಿ ಇಲ್ಲಿದೆ.!ಮಂಗಳೂರು: ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಕೆನಡಾ: ದೇವಸ್ಥಾನದ ಅಧ್ಯಕ್ಷ್ಯರ ಪುತ್ರನ ಮನೆಯ ಮೇಲೆ ಗುಂಡಿನ ದಾಳಿ - ಖಲಿಸ್ತಾನಿಗಳ ಕೈವಾಡ ಶಂಕೆಕನ್ನಡ ಹೋರಾಟಗಾರರ ಬಂಧನದಿಂದ ದುಃಖ ತಂದಿದೆ : ಬಸವರಾಜ ಬೊಮ್ಮಾಯಿಅತಿಥಿ ಉಪನ್ಯಾಸಕರ ವೇತನ ಹೆಚ್ಚಳ: ರಾಜ್ಯ ಸರ್ಕಾರ ಘೋಷಣೆ'ಲೋಕಾಯುಕ್ತ ವಿಚಾರಣೆಗೆ ಅನುಮತಿ: ವಿಳಂಬ ಸಲ್ಲದು'- ಸಿಎಂ ಕಟ್ಟುನಿಟ್ಟಿನ ಸೂಚನೆಬೆಂಗಳೂರು ಏರ್ ಪೋರ್ಟ್ ಟರ್ಮಿನಲ್ - 2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆಐಫೋನ್ ಹ್ಯಾಕ್ ಆರೋಪವನ್ನು ನಿರಾಕರಿಸಿದ ಸಚಿವ ರಾಜೀವ್ ಚಂದ್ರಶೇಖರ್ಜೆಡಿಯು ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ನೇಮಕ