LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಕೊಲೆಗಡುಕನನ್ನು ಮೋದಿ ಅಪ್ಪಿಕೊಂಡಿದ್ದಾರೆ' - ರಷ್ಯಾ ಭೇಟಿಗೆ ಉಕ್ರೇನ್‌ ಅಧ್ಯಕ್ಷ ಅಸಮಾಧಾನ

ಉಕ್ರೇನ್‌: ಪ್ರಧಾನಿ ಮೋದಿ ರಷ್ಯಾ ಪ್ರವಾಸದ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅಸಮಾಧಾನ ಹೊರ ಹಾಕಿದ್ದಾರೆ. ಭಾರತದ ಪ್ರಧಾನಿ ಪ್ರಪಂಚದ ಅತಿದೊಡ್ಡ ಕೊಲೆಗಡುಕನನ್ನು ಆಲಂಗಿಸಿಕೊಂಡಿದ್ದಾರೆ ಎಂದು ಪುಟಿನ್‌ ವಿರುದ್ಧ ಕಿಡಿಕಾರಿದ್ದಾರೆ. ಮೋದಿಯವರ ಮಾಸ್ಕೋ ಭೇಟಿ ನಿರಾಶದಾಯಕ ಮತ್ತು ಶಾಂತಿ ಪ್ರಯತ್ನಗಳ ಮೇಲಿನ ಬಹುದೊಡ್ಡ ಹೊಡೆತ ಎಂದು ಕರೆದಿದ್ದಾರೆ. ನಿನ್ನೆ ಪ್ರಧಾನಿ ಮೋದಿ ರಷ್ಯಾಗೆ ತೆರಳಿದ್ದು, ಅಲ್ಲಿ ಪುಟಿನ್‌ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದ್ದರು. ಈ ಫೊಟೋ ಸಾಮಾಜಿಕ ಜಾಲತಾಣ ವೈರಲ್‌ ಆಗಿತ್ತು. ಇನ್ನು ಮೋದಿ ಭೇಟಿಗೂ ಕೆಲವೇ ಗಂಟೆ ಮುನ್ನ, ಅಂದರೆ ಸೋಮವಾರ ಮುಂಜಾನೆ ರಷ್ಯಾದ ಕ್ಷಿಪಣಿಗಳು ಉಕ್ರೇನಿಯನ್ ನಗರಗಳ ಮೇಲೆ ದಾಳಿ ಮಾಡಿದ್ದು, ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ ಮತ್ತು 170 ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಝೆಲೆನ್ಸ್ಕಿ, ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡು ಪುಟಿನ್ ಅವರನ್ನು ಕೊಲೆಗಾರ ಎಂದು ಕರೆದಿದ್ದಾರೆ. “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ಮಾಸ್ಕೋದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿಯನ್ನು ಅಪ್ಪಿಕೊಳ್ಳುವುದನ್ನು ನೋಡುವುದು ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು : 'ವ್ಯಾಲೆಂಟೈನ್ಸ್‌ ಡೇ'ಗೆ ಬಾಯ್ ಫ್ರೆಂಡ್ ಬೇಕಾ..? - ಬಾಡಿಗೆಗೆ ಸಿಕ್ತಾರೆ ಬಾಯ್ ಫ್ರೆಂಡ್!ಐಪಿಎಸ್ ಮಂಜರಿ ಜರೂರ್ ಯಶಸ್ಸಿನ ಕಥನಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿ ಈ ಮೂರು ಬಗೆಯ ಸೊಪ್ಪುಗಳುಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆದೇಶ ಜಾರಿ.! ಮುಖ್ಯಾಂಶಗಳುಚಿತ್ರದುರ್ಗ: ಫೆ.15 ರಿಂದ 17 ರವರೆಗೆ ಫಲ-ಪುಷ್ಪ ಪ್ರದರ್ಶನ.!ಹೆಣ್ಣು ಮಕ್ಕಳು ಈ ತಪ್ಪುಗಳನ್ನು ಮಾಡಿದರೆ ಮಾಂಗಲ್ಯದೋಷ ಕಂಕಣ ದೋಷಕ್ಕೆ ಈಡಾಗುತ್ತೀರಿ ಎಚ್ಚರ!-ಅಲ್ಲಮಪ್ರಭುದೇವರು ಅವರ ವಚನ…ಅಮೆರಿಕ ಪ್ರವಾಸದಲ್ಲಿ ತುಳಸಿ ಗಬ್ಬಾರ್ಡ್‌ರನ್ನು ಭೇಟಿಯಾದ ಪ್ರಧಾನಿ ಮೋದಿಹೆಂಡತಿಯ ಕಣ್ಣುಗುಡ್ಡೆಗಳನ್ನೇ ಕಿತ್ತು ವಿಕೃತ ಅಟ್ಟಹಾಸ ಮೆರೆದ ಪತಿ ಮಹಾಶಯಮೊಳಕಾಲ್ಮೂರು: ಜೆ.ಬಿ.ಹಳ್ಳಿ ಪಿಡಿಒ ಹೆಚ್.ಸುರೇಶ್ ಸೇವೆಯಿಂದ ಅಮಾನತು.!