LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೋವಿಡ್​ ಹಗರಣ: ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮ- ಒಬ್ಬ ಅಧಿಕಾರಿ ಅಮಾನತು

ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್​ ಹಗರಣ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಪಿಪಿಇ ಕಿಟ್ ಹಾಗೂ ಇತರೆ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಇಲಾಖೆ ಆರ್ಥಿಕ‌ ಸಲಹೆಗಾರ ಮತ್ತು ಇಲಾಖೆಯ ಜಂಟಿ ನಿಯಂತ್ರಕರೂ ಆಗಿದ್ದ ರಘು ಜಿ.ಪಿ ಎಂಬುವವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಅನ್ನು ನಿಭಾಯಿಸುವಲ್ಲಿ 7,000 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು 2024 ಆಗಸ್ಟ್​ 31 ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿತ್ತು.

ಇದರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ವಿರುದ್ಧ ಅಕ್ರಮ ನಡೆಸಿರುವ ಆರೋಪ ಮಾಡಲಾಗಿತ್ತು. ವೆಂಟಿಲೇಟರ್‌, ನಿರ್ವಹಣೆ ಲೋಪ, ಆಕ್ಸಿಜನ್‌ ಉಪಕರಣಗಳ ಖರೀದಿ, ಕೋವಿಡ್‌-19 ನಿರ್ವಹಣಾ ಉಪಕರಣಗಳು, ರ್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌ ಕಿಟ್‌ಗಳ ಖದೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ ಅಧಿಕಾರಿಯನ್ನು ಅಮಾನತುಗೊಳಿಸಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಲ್ಕತ್ತಾವನ್ನೇ ಬಿಚ್ಚಿ ಬೀಳಿಸಿದ ಡೇ ಕುಟುಂಬದ ಮಿಸ್ಟರಿ ಕೇಸ್‌: ಏನಿದು ಗೊತ್ತಾ ಕೇಸ್‌ …?ಮೈಸೂರು ಚಾಮುಂಡಿ ಬೆಟ್ಟದಲ್ಲಿ ದಿಡೀರ್ ಬೆಂಕಿ'ಗಂಗಾ ನೀರು ಶುದ್ದವಾಗಿದೆ, ಚರ್ಮ ರೋಗಗಳು ಕೂಡ ಬರುವುದಿಲ್ಲ' - ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಅಜಯ್ ಸೋಂಕರ್ಕಾಲ್ ಮರ್ಜಿಂಗ್ ಸ್ಕ್ಯಾಮ್ ಎಂದರೇನು ಗೊತ್ತಾ..?ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಡೊನಾಲ್ಡ್ ಟ್ರಂಪ್‌ ವಿರೋಧಧವನ್‌ ಜತೆ ಕಾಣಿಸಿಕೊಂಡ ವಿದೇಶಿ ಯುವತಿ ಯಾರು?'ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರಿಕರ ಅಭಿವೃದ್ಧಿ ಅಗತ್ಯ'- ಮೋದಿSBI BANK ನಲ್ಲಿ ಭರ್ಜರಿ ಉದ್ಯೋಗವಕಾಶ- ಕೂಡಲೇ ಅಪ್ಲೈ ಮಾಡಿಯೂಟ್ಯೂಬರ್ ರಣವೀರ್ ಅಶ್ಲೀಲ ಹೇಳಿಕೆ ಕೇಸ್- ನಟಿ ರಾಖಿ ಸಾವಂತ್‌ಗೆ ಸಮನ್ಸ್1984ರ ಸಿಖ್ ವಿರೋಧಿ ದಂಗೆ ಕೇಸ್: ಫೆ.25 ರಂದು ಸಜ್ಜನ್ ಕುಮಾರ್‌ಗೆ ಶಿಕ್ಷೆ ಪ್ರಮಾಣ ಪ್ರಕಟ