LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೋವಿಶೀಲ್ಡ್ ಅಡ್ಡಪರಿಣಾಮ: 'ದೇಣಿಗೆಗಾಗಿ ಬಿಜೆಪಿ ಜನರ ಜೀವ ಅಡವಿಟ್ಟಿತು'- ಅಖಿಲೇಶ್ ಯಾದವ್ ಕಿಡಿ

ಲಕ್ನೋ: ಕೊರೊನ ಲಸಿಕೆ ತಯಾರಿಕಾ ಕಂಪನಿಗಳಿಂದ ರಾಜಕೀಯ ದೇಣಿಗೆ ಪಡೆಯಲು ಬಿಜೆಪಿ ಜನರ ಜೀವವನ್ನೇ ಅಡವಿಟ್ಟಿತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮದ ಕುರಿತು ಹರಿದಾಡುತ್ತಿರುವ ವಿವಾದದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ಇಂತಹ ಮಾರಕ ಔಷಧಗಳಿಗೆ ಅನುಮತಿ ನೀಡುವ ಮೂಲಕ ಕೊಲೆ ಸಂಚು ಹೂಡಲಾಗಿದೆ. ಇದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಬರೆದುಕೊಂಡಿದ್ದಾರೆ.

ಇನ್ನು ಸುಮಾರು 80 ಕೋಟಿ ಭಾರತೀಯರಿಗೆ 2 ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಲಸಿಕೆಯಿಂದ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಔಷಧ ತಯಾರಕ ಕಂಪನಿ ಹೇಳಿದೆ. ಲಸಿಕೆಯ ಅಡ್ಡಪರಿಣಾಮದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಹಾಗೂ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಭಯ ವ್ಯಕ್ತಪಡಿಸಿದವರ ಅನುಮಾನಗಳು ಈಗ ನಿಜವೆಂದು ಸಾಬೀತಾಗಿದೆ ಎಂದಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಮಾಜಿಕ ಬದ್ದತೆ ಬರಹಗಾರನಿಗೆ ಇರಬೇಕು: ಡಾ.ಬಂಜಗೆರೆ ಜಯಪ್ರಕಾಶ್.!ವಚನ:    ---ಅಕ್ಕಮ್ಮ.!ಕಲ್ಪನಾ ಮೃತಪಟ್ಟ ಐಬಿಯಲ್ಲಿ ಕಿಲ ಕಿಲ ನಗು, ಗೆಜ್ಜೆ ಸದ್ದು - ಆ ರಾತ್ರಿ ಭಯಾನಕ ಅನುಭವ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರುHSRP ನಂಬರ್‌ ಪ್ಲೇಟ್‌ ಅಳವಡಿಕೆ ಡೆಡ್‌ಲೈನ್‌ ಇಂದಿಗೆ ಮುಕ್ತಾಯ…! ಮುಂದೆನು..?ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ..!'ಜನರ ಶಕ್ತಿ, ಉತ್ಸಾಹ ನಿಜಕ್ಕೂ ಸ್ಪೂರ್ತಿದಾಯಕ' : US ಚುನಾವಣಾ ಜಾಥಾದಲ್ಲಿ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದ ಡಿಕೆಶಿಸಿಎಂ ಹುದ್ದೆಗೆ ರಾಜಿನಾಮೆ ಘೋಷಿಸಿದ ಅರವಿಂದ್ ಕೇಜ್ರಿವಾಲ್ಜೈಲಿನಲ್ಲಿ ದಾಳಿಗೆ ಪೊಲೀಸರ ಮಾಸ್ಟರ್ ಪ್ಲಾನ್ - ಜೈಲು ಅಧಿಕಾರಿಗೆ ಶಾಕ್, ಮೊಬೈಲ್ ಸಿಕ್ಕಿದ್ದು ಇದೆ ಕಾರಣಕ್ಕೆಕೇಸರಿ ಶಾಲು ಹಿಡಿದು ಸಿಎಂ ಬಳಿ ನುಗ್ಗಲು ಯತ್ನಿಸಿದ ಯುವಕ - ಗಣ್ಯರು ಆತಂಕಇಂದು 40,235 ಕಿ.ಮೀ‌. ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹ: ನಾಸಾ ಮಾಹಿತಿ