LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೌಟುಂಬಿಕ ಕಲಹ ಹಾಗೂ ಹಣದ ದಾಹ: ಪತ್ನಿ ಹತ್ಯೆ, ಮಗು ಕೊಲೆಗೆ ಯತ್ನ

ಮಂಡ್ಯ: ಕೌಟುಂಬಿಕ ಕಲಹ ಹಾಗೂ ಹಣದ ದಾಹಕ್ಕೆ ಬಿದ್ದ ಪತಿಯೊಬ್ಬ ತನ್ನ ಪತ್ನಿಯನ್ನೇ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾನೆ. ಮುದ್ದಾದ ಒಂದೂವರೆ ವರ್ಷದ ಗಂಡು ಮಗುವನ್ನು ಕೂಡ ಕತ್ತು ಹಿಸುಕಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಪಾಂಡವಪುರ ತಾಲೂಕಿನ ಹೊಸ ಯರಗನಹಳ್ಳಿ ಗ್ರಾಮದ ಹೊರವಲಯಲ್ಲಿರುವ ಒಂಟಿ ಮನೆಯಲ್ಲಿ ಈ‌ ಘಟನೆ ನಡೆದಿದೆ. ವರ್ಷಿತಾ(24) ಕೊಲೆಯಾದ ಗೃಹಿಣಿ. ಒಂದೂವರೆ ವರ್ಷದ ಆರ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಆರೋಪಿ ಗೌತಮ್ ಪರಾರಿಯಾಗಿದ್ದಾನೆ.

https://bcsuddi.com/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0-%e0%b2%a8%e0%b3%80%e0%b2%a1%e0%b2%bf%e0%b2%b0%e0%b3%81%e0%b2%b5-%e0%b2%ae%e0%b3%8a%e0%b2%ac%e0%b3%88%e0%b2%b2%e0%b3%8d-%e0%b2%b5/

ಮೂರು ವರ್ಷಗಳ ಹಿಂದೆ ಮದುವೆಯಾಗಿ, ಗೌತಮ್ ಹಾಗೂ ಆತನ ಪತ್ನಿ ವರ್ಷಿತಾ ಗ್ರಾಮದ ಹೊರವಲಯದಲ್ಲಿರುವ ತಮ್ಮದೇ ತೋಟದ ಮನೆಯಲ್ಲಿ ಒಂದೂವರೆ ವರ್ಷದಿಂದ ಬದುಕು ಸಾಗಿಸುತ್ತಿದ್ದರು. ಗೌತಮ್ ಹಣಕಾಸಿನ ವಿಚಾರದಲ್ಲಿ ಪತ್ನಿಯ ಜತೆಗೆ ಜಗಳ ತೆಗೆಯುತ್ತಿದ್ದ. ಆ ಜಗಳ ವಿಕೋಪಕ್ಕೆ ತಿರುಗಿ ಶುಕ್ರವಾರ (ಜು.6) ಆಕೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಮಗ ಆರ್ಯನ ಕತ್ತು ತಿರುಗಿಸಿ ಕೊಲ್ಲಲು ಯತ್ನಿಸಿದ್ದಾನೆ. ಆರೋಪಿ ಗೌತಮ್‌ಗೆ ಯಾವುದೇ ಕೆಲಸ ಇರಲಿಲ್ಲ. ಈತನ ಜತೆ ಮದುವೆಗೆ ವರ್ಷಿತಾಳ ಸಂಬಂಧಿಕರು ಒಪ್ಪಲಿಲ್ಲ. ಆದರೆ ಗೌತಮ್ ಮದುವೆಯಾಗುವುದಿದ್ದರೆ ವರ್ಷಿತಾಳನ್ನೇ ಎಂದು ಹಠಕ್ಕೆ ಬಿದ್ದು ಮದುವೆಯಾಗಿದ್ದ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಅವರ ವಚನ …!ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ನನ್ನ ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ ಪಾಕ್ರಾಮಮಂದಿರ ಉದ್ಘಾಟನೆ ದಿನ ದೇಶದ ಪ್ರತಿಯೊಬ್ಬರು ಮನೆಯಲ್ಲಿ ಜ್ಯೋತಿ ಬೆಳಗಿಸಿ- ಮೋದಿ ಕರೆನಾಲ್ವರ ಕೊಲೆ ಆರೋಪಿ ಚೌಗುಲೆ ಜಾಮೀನು ಅರ್ಜಿ ತಿರಸ್ಕೃತ'ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ': ಸಿಎಂ ವ್ಯಂಗ್ಯ'ರಾಮ ಮಂದಿರ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ'- ಪ್ರಹ್ಲಾದ್ ಜೋಶಿಅಯೋಧ್ಯೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆದಕ್ಷಿಣ ಕನ್ನಡದ ನ್ಯಾಶನಲ್ ಹೈವೇ ಅಭಿವೃದ್ದಿ , 957.39 ಕೋ.ರೂ.ವೆಚ್ಚದ 2 ಯೋಜನೆಗಳಿಗೆ ಅನುಮೋದನೆ..!ಬೆಂಗಳೂರು-ಅಯೋಧ್ಯೆಗೆ ಏರ್ ಇಂಡಿಯಾ ವಿಮಾನ ಸೇವೆ ಜ. 17ರಿಂದ ಆರಂಭಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು :ರಾಜ್ಯದಲ್ಲಿ ಜ.2 ರಿಂದ ಲಸಿಕಾ ಅಭಿಯಾನ