LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕ್ರಿಕೆಟ್ ಟೂರ್ನಿಗಳಲ್ಲಿ ಅವಕಾಶ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ ಆರೋಪ - ಮಾಜಿ ಆಟಗಾರನ ವಿರುದ್ಧ ಎಫ್ಐಆರ್

ಬೆಂಗಳೂರು : ಕ್ರಿಕೆಟ್ ಟೂರ್ನಿಗಳಲ್ಲಿ ಆಡುವ ಅವಕಾಶ, ತರಬೇತಿ ಮತ್ತು ಅಗತ್ಯ ಸಾಮಗ್ರಿಗಳನ್ನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಡಿ ಇಂಡಿಯಾ ಅಂಡರ್ 19 ಹಾಗೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸಿದ್ದ ಮಾಜಿ ಆಲ್ ರೌಂಡರ್ ಗೌರವ್ ಧಿಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

23 ವರ್ಷದ ಯುವ ಕ್ರಿಕೆಟಿಗನಿಗೆ 12.23 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಆತನ ತಂದೆ ನೀಡಿದ ದೂರಿನನ್ವಯ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪರ ಆಡುತ್ತಿರುವ ಯುವ ಕ್ರಿಕೆಟಿಗನೊಬ್ಬ‌ 2022-23ರಲ್ಲಿ ಗಾಂಧಿನಗರದ ಸಿಎಂಎಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿರುವ ರೋರ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಈ ಸಮಯದಲ್ಲಿ ಅಕಾಡೆಮಿಯ ಕೋಚ್ ಆಗಿದ್ದ ಗೌರವ್ ಧಿಮಾನ್, ಕೆಎಸ್ಸಿಎಯ ಮುಂದಿನ ಕೆಲ ಟೂರ್ನಿಗಳಿಗೆ ಆರಂಭಿಕ ಆಟಗಾರನಾಗಿ ಅವಕಾಶ ಕೊಡಿಸುವುದಾಗಿ ನಂಬಿಸಿದ್ದಾರೆ. ಮತ್ತು ಆತನ ತಂದೆಯನ್ನ ಭೇಟಿಯಾಗಿ ಉತ್ತಮ ತರಬೇತಿ, ಬ್ಯಾಟ್ ಗಳನ್ನ ಕೊಡಿಸುವುದಾಗಿ, ಹಾಗೂ ಇದಕ್ಕಾಗಿ ಪ್ರಸ್ತುತ ಆಡುತ್ತಿರುವ ಕ್ಲಬ್ ಪರ ಆಡಬಾರದು ಎಂದಿದ್ದಾರೆ. ನಂತರ ಬ್ಯಾಟ್ ಮತ್ತಿತರ ಕ್ರಿಕೆಟ್ ಸಾಮಗ್ರಿಗಳನ್ನ ಕೊಡಿಸುವುದಾಗಿ ಹಂತಹಂತವಾಗಿ 12.23 ಲಕ್ಷ ಪಡೆದುಕೊಂಡಿದ್ದಾರೆ. ಆದರೆ ಯಾವುದೇ ಟೂರ್ನಿಗಳಲ್ಲಿ ಅವಕಾಶ ಕೊಡಿಸದೇ ವಂಚಿಸಿದ್ದಾರೆ ಎಂದು ದೂರಲಾಗಿದೆ. ವಂಚನೆಗೊಳಗಾದ ಕ್ರಿಕೆಟಿಗನ ತಂದೆ 2023ರಲ್ಲಿ ಉಪ್ಪಾರಪೇಟೆ ದೂರು ನೀಡಿದ್ದನ್ನ ತಿಳಿದ ಆರೋಪಿಯ ತಂದೆ, ತಮ್ಮನ್ನ ಭೇಟಿಯಾಗಿ ತಾನೊಬ್ಬ ನಿವೃತ್ತ ಕರ್ನಲ್ ಹಾಗೂ ಗೌರವಾನ್ವಿತ ಕುಟುಂಬಕ್ಕೆ ಸೇರಿದ ವ್ಯಕ್ತಿ. ತಮ್ಮ ಮಗ ವಿದೇಶಕ್ಕೆ ತೆರಳಿದ್ದು, ಆತ ಬಂದ ನಂತರ ಹಣ ವಾಪಾಸ್ ಕೊಡಿಸುತ್ತೇನೆ ಎಂದು ಭರವಸೆ ನೀಡಿ ತಮ್ಮ ಮಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಆದರೆ, ಆರೋಪಿ ಗೌರವ್ ಧಿಮಾನ್ ವಿದೇಶದಿಂದ ಮರಳಿದ ಬಳಿಕ ಭೇಟಿಯಾಗಿ ಹಣ ವಾಪಸ್ ಕೇಳಿದಾಗ, ನಿನ್ನ ಮಗನ ಭವಿಷ್ಯ ಹಾಳು ಮಾಡುತ್ತೇನೆ, ನನಗೆ ರೌಡಿಗಳ ಸಂಪರ್ಕವಿದ್ದು, ನಿನ್ನ ಮಗನನ್ನ ಅಪಘಾತ ಮಾಡಿಸಿ ಕೊಲೆ ಮಾಡಿಸುತ್ತೇನೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಲಾಗಿದೆ. ತನ್ನ ತಂದೆ ನಿವೃತ್ತ ಕರ್ನಲ್ ಆಗಿದ್ದು, ಅವರಿಗೆ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪರಿಚಯವಿದೆ ನೀವು ಏನೂ ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕ್ರಿಕೆಟಿಗನ ತಂದೆ ಆರೋಪಿಸಿ ದೂರು ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮ-ಜಾತಿ ಹೆಸರಲ್ಲಿ ಸಮಾಜ ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ : ಸಿ.ಎಂ.ಸಿದ್ದರಾಮಯ್ಯಅನಾಥ ಯುವತಿಗೆ ಧಾರೆಯೆರೆದ ಉಡುಪಿ ಜಿಲ್ಲಾಧಿಕಾರಿ..!ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1,130 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಬೆಳ್ಳಂ ಬೆಳಿಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ದಾಳಿಹಂಸರಾಜ್ ಭಾರದ್ವಾಜ್ ಮಾಡಿದ್ರೆ ತಪ್ಪಲ್ಲ, ದಲಿತ ರಾಜ್ಯಪಾಲ ಗೆಹ್ಲೋಟ್ ಮಾಡಿದ್ರೆ ತಪ್ಪಾ - ಸುನಿಲ್ ಕುಮಾರ್ ಪ್ರಶ್ನೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಸ್ಟಾರ್‌ ಕ್ರಿಕೆಟಿಗ ಶಿಖರ್‌ಧವನ್‌ ನಿವೃತ್ತಿ ಘೋಷಣೆಮಂಗಳೂರಿನಲ್ಲಿ ಭಯಾನಕ ಗ್ಯಾಂಗ್ ರೇಪ್: ಅನ್ಯಕೋಮಿನ ಮೂವರು ಯುವಕರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ..!ರುಚಿಕರವಾದ ಸೋರೆಕಾಯಿ ಪಾಯಸ ಮಾಡುವ ವಿಧಾನಕಿವಿ ಹಣ್ಣಿನ ವಿಶೇಷ ಗುಣಗಳು ನಮ್ಮ ಆರೋಗ್ಯಕ್ಕೆ ಹೇಗೆ ಸಹಾಯಕ ಗೊತ್ತೇ?ಮನೆಯಲ್ಲಿ ಪ್ರತಿಯೊಂದು ಸಣ್ಣ ಸಣ್ಣ ವಿಚಾರಕ್ಕೂ ಕೂಡ ಜಗಳ ಆಗುತ್ತಾ ಇದ್ದರೆ ಈ ರೀತಿಯ ಪರಿಹಾರ ಕ್ರಮವನ್ನ ಅನುಸರಿಸಿ.