E-PAPER
17 Nov 2026, 12:20:29 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕ. ಸಾ. ಪ.ಜಿಲ್ಲಾ ಘಟಕದ ವತಿಯಿಂದ ದತ್ತಿ ಕಾರ್ಯಕ್ರಮ -- ಲಾವಣಿ ಮತ್ತು ಗೀಗಿ ಪದಗಳಿಗೆ ತತ್ವ, ಆದರ್ಶಗಳನ್ನು ಬೆಳೆಸುವ ಸತ್ವವಿದೆ-ಡಾ. ಸರಸ್ವತಿ ಕಳಸದ ಅಭಿಮತ

ಲಾವಣಿ ಮತ್ತು ಗೀಗಿ ಪದಗಳಿಗೆ ಮಾನವತೆಗೆ ಬೇಕಾದ ತತ್ವ ಮತ್ತು ಆದರ್ಶಗಳನ್ನು ಬೆಳೆಸುವ ಸತ್ವವಿದೆ. ಸದಾ ಜೀವಂತಿಕೆಯನ್ನು ತೋರ್ಪಡಿಸುವ ಶಕ್ತಿಯನ್ನು ಈ ಗೀಗಿಪದಗಳು ಹೊಂದಿವೆ ಎಂದು ನಿವೃತ್ತ ಪ್ರಾಚಾರ್ಯರು ಮತ್ತು ಸಾಹಿತಿ ಡಾ. ಸರಸ್ವತಿ ಕಳಸದರವರು ಶನಿವಾರ ದಿ. 17 ರಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ದಿ ಮರಿಕಲ್ಲಪ್ಪ ಮಲಶೆಟ್ಟಿ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ದತ್ತಿ ಕಾರ್ಯಕ್ರಮದಲ್ಲಿ 'ಲಾವಣಿ ಮತ್ತು ಗೀಗಿ ಪದಗಳ ಇತಿಹಾಸ ಮತ್ತು ಪ್ರಸ್ತುತತೆ' ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು. ಲಾವಣಿ ಮತ್ತು ಗೀಗಿ ಪದಗಳು ಯಾರಿಗೂ ನಿಲುಕದ ಗ್ರಾಮೀಣ ಕಲೆಯಾಗಿದ್ದು ಯಾವುದೇ ಯಂತ್ರಗಳಿಲ್ಲದೆ ಕೇಳುಗರನ್ನು ಆಕರ್ಷಿಸುವ ಶಕ್ತಿ ಹೊಂದಿವೆ. ಯಾವುದೇ ಘಟನೆ, ಸರ್ಕಾರಿ ಸೌಲಭ್ಯ, ವ್ಯಕ್ತಿ, ವ್ಯಕ್ತಿತ್ವ ಚಿತ್ರಣ ಕುರಿತು ವೈಭವಿಕರಿಸುವ ಮತ್ತು ಅದರ ಒಳಿತು ಮತ್ತು ಕೆಡಕುಗಳನ್ನು ತಿಳಿಯಪಡಿಸುವ ಮತ್ತು ಎಲ್ಲರನ್ನೂ ತನ್ನತ್ತ ಸೆಳೆಯುವ ಶಕ್ತಿ ಈ ಗೀಗಿ ಮತ್ತು ಲಾವಣಿ ಪದಗಳಲ್ಲಿದೆ .ಆ ವಿಶಿಷ್ಟ ಕಲೆಯನ್ನು ಉಳಿಸಿ ಯಾಂತ್ರಿಕವಾಗಿರುವ ಈ ಜಗತ್ತಿನಲ್ಲಿ ಅದರ ಸತ್ವವನ್ನು ಎಲ್ಲರಿಗೂ ತೋರಿಸಬೇಕಾಗಿರುವ ಅಗತ್ಯತೆ ಇದೆ ಎಂದರು.ಇದೇ ಸಂದರ್ಭದಲ್ಲಿ ವರದಾ ಹೆಗಡೆ, ಸಾವಿತ್ರಿ ಭಟ್,ಪ್ರಭಾವತಿ ಗುರವ ಮತ್ತು ತಂಡದವರು ಗೀಗಿ ಮತ್ತು ಲಾವಣಿ ಪದಗಳನ್ನು ಪ್ರಸ್ತುತಪಡಿಸಿ ಕೇಳುಗರನ್ನು ಮಂತ್ರಮುಗ್ದಗೊಳಿಸಿದರು. ಸಾಹಿತಿ ಯ. ರು. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾಚೀನ ಕಲೆಗಳನ್ನು ನಾವು ಉಳಿಸಿ ಬೆಳೆಸಬೇಕಿದೆ ಮತ್ತು ಅವರ ಮಹತ್ವವನ್ನು ಮುಂದಿನ ಪೀಳಿಗೆಗೆ ಪಸರಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಜ್ಯೋತಿ ಬದಾಮಿ, ಜಿ.ಬಿ. ಕುರಬೇಟ, ಸುನೀತಾ ನಂದೇನ್ನವರ, ಅ. ಬ. ಇಟಗಿ, ದಾನಮ್ಮ ಅಂಗಡಿ ಅಕ್ಕಮಹಾದೇವಿ ತೆಗ್ಗಿ, ಬಿ.ಬಿ ಮಠಪತಿ, ಡಾ . ಸುನೀಲ ಪರೀಟ, ಸುಮನ ಪರೀಟ, ಉಮೇಶ್ ಹಾರೂಗೊಪ್ಪ, ಸಿ.ಎಸ್ ಕಟಾಪುರಿ ಮಠ, ಗುರುಸಿದ್ದಪ್ಪ ರೇವಣ್ಣವರ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಮ್ ವೈ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಾ. ಅನ್ನಪೂರ್ಣಾ ಹಿರೇಮಠ ನಿರೂಪಿಸಿದರು ಆರ್ ಬಿ ಬನಶಂಕರಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.