LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ – ಚುನಾವಣಾಧಿಕಾರಿಗಳ ವಿರುದ್ಧ ಕಿಡಿ

ಪಾಟ್ನಾ: ಬಿಹಾರದ ಸಮಸ್ತಿಪುರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ಸಹ ತಪಾಸಣೆ ನಡೆಸಿದ್ದರು.

ಖರ್ಗೆ ಅವರ ಹೆಲಿಕಾಪ್ಟರ್‌ನ್ನು ತಪಾಸಣೆ ನಡೆಸಿದ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಜೇಶ್ ರಾಥೋರ್ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಪ್ರತಿಪಕ್ಷಗಳ ನಾಯಕರನ್ನು ಚುನಾವಣಾಧಿಕಾರಿಗಳು ಗುರಿಯಾಗಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಎನ್‍ಡಿಎ ನಾಯಕರಿಗೆ ಮಾತ್ರ ಮುಕ್ತವಾಗಿ ತೆರಳಲು ಅವಕಾಶ ನೀಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮೇ 11 ರಂದು ಮಲ್ಲಿಕಾರ್ಜುನ ಖರ್ಗೆಯವರು ಬಿಹಾರದ ಸಮಸ್ತಿಪುರ ಮತ್ತು ಮುಜಾಫರ್‍ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಮಸ್ತಿಪುರದಲ್ಲಿ ಚುನಾವಣಾ ಅಧಿಕಾರಿಗಳು ಖರ್ಗೆಯವರ ಹೆಲಿಕಾಪ್ಟರ್‌ನ್ನು ತಪಾಸಣೆ ನಡೆಸಿದ್ದರು. ಅಲ್ಲದೇ ಹೆಲಿಕಾಪ್ಟರ್ ತಪಾಸಣೆಯ ವೀಡಿಯೋವನ್ನು ಅಧಿಕಾರಿಗಳು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈಲು ಹಳಿಗಳ ಮೇಲೆ ಮರದ ತುಂಡು ಇರಿಸಿ ಹಳಿ ತಪ್ಪಿಸಲು ಯತ್ನಒಂದೇ ಹೆಲಿಕಾಪ್ಟರ್‌ನಲ್ಲಿ ಉಪ ರಾಷ್ಟ್ರಪತಿ , ಮಾಜಿ ಪ್ರಧಾನಿ ಬೆಂಗಳೂರಿಗೆ ಪ್ರಯಾಣಡಾನಾ ಚಂಡಮಾರುತ: ಭಾರೀ ಮಳೆಗೆ 2..80 ಲಕ್ಷ ಎಕರೆ ಪ್ರದೇಶ ಜಲಾವೃತನೈಋತ್ಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಮೂಲ ಕಾಂಗ್ರೆಸ್ಸಿಗರು, ಯೋಗೇಶ್ವರ್ ಬೆಂಬಲಿಗರ ಜೊತೆ ಡಿಕೆ ಸುರೇಶ್ ಸಮನ್ವಯ ಸಭೆ51ರ ವಯಸ್ಸಿನಲ್ಲಿ ಒಂಟಿಯಾದರೂ ಈ ನಟಿ ಕೋಟಿ‌ಕುಳ: ಇವರ ಆಸ್ತಿ, ಐಷಾರಾಮಿ ಕಾರುಗಳು, ಲಕ್ಷುರಿಯಸ್ ಜೀವನದ ಝಲಕ್ ಇಲ್ಲಿದೆಕೆನಡಾದ ಟೊರೊಂಟೊ ಅಪಘಾತ : ನಾಲ್ವರು ಭಾರತೀಯರ ಸಾವು..!ಮುಂಡಾ ಹಗರಣ :2ನೇ ಆರೋಪಿ ಸಿಎಂ ಪತ್ನಿಯಿಂದ ಲೋಕಾಯುಕ್ತ ಗೌಪ್ಯ ಮಾಹಿತಿ ಸಂಗ್ರಹಮೊಹಾಲಿ ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣ : ಲಾರೆನ್ಸ್ ಬಿಷ್ಣೋಯ್‌ ಕೇಸ್ ಖುಲಾಸೆಮಂಗಳೂರು: "ನಿನ್ನನ್ನು 24 ತುಂಡು ಮಾಡುವೆ" ಎಂದು ಯುವತಿಗೆ ಬೆದರಿಕೆ - ಆರೋಪಿ ಶಾರೀಕ್ ಅರೆಸ್ಟ್..!