LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ ಮಗಳನ್ನ ಸುಟ್ಟುಹಾಕಿದ ತಂದೆ

ಕೋಲಾರ: ಮದುವೆಯಾದ ಮೇಲೆ ಗಂಡನೊಂದಿಗೆ ಸಂಸಾರ ಮಾಡಲೊಪ್ಪದ ಮಗಳನ್ನು ತಂದೆಯೇ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಮುಳಬಾಗಿಲು ತಾಲೂಕು ಮುಸ್ಟೂರು ಗ್ರಾಮದಲ್ಲಿ ನಡೆದಿದೆ. ಅರ್ಚಿತಾ ಮೃತ ಮಗಳು. ತಂದೆ ರವಿ ಕೊಲೆ ಮಾಡಿದ ಆರೋಪಿ.

ಮೇ ತಿಂಗಳ 21ನೇ ತಾರೀಕಿನಂದು ಈ ಭಯಾನಕ ಕೊಲೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ತಂದೆ ರವಿ ಮಗಳಿಗೆ ಬೇರೊಂದು ಹುಡುಗನ ಜೊತೆಗೆ ಮದುವೆ ಮಾಡಿಸಿದ್ದ. ಮದುವೆಯಾದ ಮೇಲೆ ಅರ್ಚಿತಾ ಸಂಸಾರ ಮಾಡಲು ನಿರಾಕರಿಸಿದ್ದಾಳೆ. ಇದಕ್ಕೆ ಕೋಪಗೊಂಡ ತಂದೆ ಮಗಳನ್ನು ಕೊಂದು ಸುಟ್ಟು ಹಾಕಿದ್ದಾನೆ. ಬಳಿಕೆ ತಾನೇ 5 ತಿಂಗಳ ಬಳಿಕ ಪೊಲೀಸ್​ ಠಾಣೆಗೆ ಹೋಗಿ ಮಗಳು ಕಾಣಿಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ.

ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ನಂಗಲಿ ಪೊಲೀಸ್ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾಗ ತಂದೆಯೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಅರ್ಚಿತಾಗೆ ಇನ್ನೂ ಚಿಕ್ಕ ವಯಸ್ಸು. ಆಕೆಯ ತಂದೆ ದುಡ್ಡಿನ ಆಸೆಗೆ 40 ವರ್ಷದ ವ್ಯಕ್ತಿ ಜೊತೆ ಮಗಳನ್ನ ಕೊಟ್ಟು ಮದುವೆ ಮಾಡಿದ್ದ ಎನ್ನಲಾಗಿದೆ. ವರನಿಂದ ಸುಮಾರು 13 ಲಕ್ಷ ಹಣ ಪಡೆದು ಮಗಳಿಗೆ ವಿವಾಹ ಮಾಡಿದ್ದ. ಮಗಳು ಇನ್ನೂ ಓದಬೇಕು, ಗಂಡನ ಜೊತೆ ಸಂಸಾರ ಮಾಡಲ್ಲ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಆಕೆಯನ್ನು ಗಂಡನ ಮನೆಯಿಂದ ಕರೆದುಕೊಂಡು ಬಂದು ಕೂಡಿಹಾಕಿ, ನಂತರ ಅಳಿಯನ ಜೊತೆ ಸೇರಿಕೊಂಡು ಮಗಳಿಗೆ ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಹೇಳಲಾಗಿದೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಸ್ಟೂರು ಗ್ರಾಮದಲ್ಲಿ ಕೊಲೆಯಾದ ಸ್ಥಳದಲ್ಲಿ ಮೃತ ಮಗಳ ಶವದ ಕುರುಹುಗಳಿಗಾಗಿ FSL ತಂಡದಿಂದ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST