E-PAPER
17 Nov 2026, 12:18:35 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಬಸವರಾಜ ಬೊಮ್ಮಾಯಿ

*ಕಾಂಗ್ರೆಸ್ ನ ಕಾನೂನು ಬಾಹಿರ ಜಯ ತಾತ್ಕಾಲಿಕ, ನ್ಯಾಯಾಂಗ ನಿಂದನೆ ವಿರುದ್ದ ಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ: ಬಸವರಾಜ ಬೊಮ್ಮಾಯಿ*

ಗದಗ-೨೮: ಗದಗ ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿಯ ಮೂರು ಜನ ಸದಸ್ಯರನ್ನು ರಾತ್ರಿ 12 ಗಂಟೆಗೆ ಅಮಾನತು ಮಾಡಿ ಅವರನ್ನು ಮತ ಹಾಕದಂತೆ ನೋಡಿಕೊಂಡಿದ್ದಾರೆ. ಅಮಾನತುಗೊಂಡ ಸದಸ್ಯರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟು ಆದೇಶ ನೀಡಿದೆ. ಚುನಾವಣಾಧಿಕಾರಿ ಅದನ್ನು ದಿಕ್ಕರಿಸಿ, ಎಲ್ಲ ಸಂಪರ್ಕ ಬಂದು ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ್ ಅವರ. ನಿರ್ದೇಶನದಂತೆ ಕೆಲಸ ಮಾಡಿದ್ದಾರೆ ಎಂದರು.

*ಜಯ ತಾತ್ಕಾಲಿಕ*
ಹೈಕೋರ್ಟ್ ಆದೇಶವನ್ನು ದಿಕ್ಕರಿಸಿ ಚುನಾವಣೆ ನಡೆಸಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಹೈಕೋರ್ಟ್ ಆದೇಶವನ್ನು ದಿಕ್ಕರಿಸುವ ಉದ್ದಟತನವನ್ನು ಅಸಿಸ್ಟೆಂಟ್ ಕಮಿಷನರ್ ಮಾಡಿದ್ದಾನೆ. ಅಧಿಕಾರಿ ಆಗಲು ಯೋಗ್ಯತೆ ಇಲ್ಲ ಇವರಿಗೆ, ಕಾನೂನು ಪರಿಪಾಲನೆ ಮಾಡುವ ಯೋಗ್ಯತೆ ಇಲ್ಲ. ಇವರು ನ್ಯಾಯಾಂಗ ನಿಂದನೆ ಮಾಡಿದ್ದು, ಅದರ ವಿರುದ್ದ ಕೋರ್ಟ್ ಗೆ ಹೋಗುತ್ತೇವೆ. ಮೂರು ಜನ ಅಮಾಯಕ ಸದಸ್ಯರ ಸದಸ್ಯತ್ವ ಅಮಾನತಿಗೆ ಹುನ್ನಾರ ಮಾಡಿರುವುದರ ವಿರುದ್ದವೂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಇವತ್ತಿನ ಜಯ ತಾತ್ಕಾಲಿಕವಾಗಿದ್ದು, ಅಸಂವಿಧಾನಿಕವಾಗಿದೆ. ಕಾನೂನುಬಾಹಿರವಾಗಿದೆ. ಇದನ್ನು ಜನರೂ ಒಪ್ಪುವುದಿಲ್ಲ ನಾವೂ ಒಪ್ಪುವುದಿಲ್ಲ, ಯಾರೂ ಒಪ್ಪುವುದಿಲ್ಲ. ಈ ಚುನಾವಣೆಗೆ ಧಿಕ್ಕಾರ ಹಾಕಿ ನಾವು ಬಹಿಷ್ಕಾರ ಹಾಕಿದ್ದೇವೆ. ಮತ್ತೆ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಚುನಾವಣೆಯನ್ನು ಬುಧವಾರದವರೆಗೂ ಮುಂದೂಡಿ ಡಿಸಿಯವರಿಗೆ ಸಂಪರ್ಕಿಸುವಂತೆ ಎಜಿಯವರಿಗೆ ಸೂಚಿಸಿದ್ದಾರೆ. ಡಿಸಿಯವರಿಗೂ ಸಂಪರ್ಕಿಸುವುದು ಎಜಿಯವರ ಕೆಲಸ, ಆದರೆ, ಎಲ್ಲ ಸಂಪರ್ಕವನ್ನು ಬಂದ್ ಮಾಡಿಕೊಂಡು ಕುಂತಿದ್ದಾರೆ. ನಮಗೂ ಯಾರನ್ನೂ ಸಂಪರ್ಕ ಮಾಡಲು ಅವಕಾಶ ನೀಡಿಲ್ಲ. ಸರ್ಕಾರ ಚುನಾವಣೆ ವ್ಯವಸ್ಥೆಯನ್ನು ದುರುಯೋಗ ಮಾಡಿಕೊಂಡು ಕೃತಕ ಬಹುಮತ ಪಡೆದುಕೊಂಡು ಚುನಾವಣೆ ನಡೆಸಿದ್ದಾರೆ. ಅಂತಿಮವಾಗಿ ಜಯ ನಮಗೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.