ಬೆಂಗಳೂರು: ಗಾಂಧಿ ಜಯಂತಿ ಹಾಗೂ ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಒಟ್ಟು 150 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಅಧಿಕೃತ ಆದೇಶ ಹೊರಡಿಸಿದೆ.
ಕೆಎಸ್‌ಆರ್‌ಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಕಾರ್ಯಾಚರಣೆ ವ್ಯಾಪ್ತಿಯ ವಿವಿಧ ಜಿಲ್ಲೆಗಳಿಗೆ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣಗಳಿಂದ ಈ ವಿಶೇಷ ಬಸ್‌ಗಳು ಸಂಚರಿಸಲಿವೆ.
ಎಲ್ಲಿಂದ, ಎಷ್ಟೆಷ್ಟು ಬಸ್‌ಗಳ ಸಂಚಾರ?
ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) – ಒಟ್ಟು 100 ಬಸ್‌ಗಳು
(ರಾತ್ರಿ 8:00 ಗಂಟೆಯ ನಂತರ ಕಾರ್ಯಾಚರಣೆ)
- ಶಿವಮೊಗ್ಗ: 20 ಬಸ್‌ಗಳು
- ದಾವಣಗೆರೆ: 10 ಬಸ್‌ಗಳು
- ಚಿತ್ರದುರ್ಗ: 10 ಬಸ್‌ಗಳು
- ಹೊಸದುರ್ಗ: 10 ಬಸ್‌ಗಳು
- ಹೊಸಪೇಟೆ: 5 ಬಸ್‌ಗಳು
- ಬಳ್ಳಾರಿ: 10 ಬಸ್‌ಗಳು
- ಹಾಸನ: 15 ಬಸ್‌ಗಳು
- ಚಿಕ್ಕಮಗಳೂರು: 10 ಬಸ್‌ಗಳು
- ಧರ್ಮಸ್ಥಳ: 10 ಬಸ್‌ಗಳು
ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ – ಒಟ್ಟು 50 ಬಸ್‌ಗಳು
(ಸಂಜೆ 5:00 ಗಂಟೆಯ ನಂತರ ಕಾರ್ಯಾಚರಣೆ)
- ಮೈಸೂರು: 25 ಬಸ್‌ಗಳು
- ಮಳವಳ್ಳಿ / ಕೊಳ್ಳೇಗಾಲ: 25 ಬಸ್‌ಗಳು
ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆಗೆ ಅನುಗುಣವಾಗಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಮನ್ವಯದೊಂದಿಗೆ ಸ್ಥಳದಲ್ಲೇ ಹಾಜರಿದ್ದು ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ರಜೆಯ ಮಜಾ ಕಳೆಯಲು ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಈ ಹೆಚ್ಚುವರಿ ಬಸ್‌ಗಳು ನೆರವಾಗಲಿವೆ.