ಗಾಝಾ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ : 100ಕ್ಕೂ ಹೆಚ್ಚು ಮಂದಿ ಮೃತ್ಯು
ಗಾಜಾ : ಇಸ್ರೇಲ್ ಹಾಗೂ ಗಾಝಾದ ನಡುವಿನ ಸಂಘರ್ಷ ದಿನೇ ದಿನೇ ಮುಂದುವರೆಯುತ್ತಲೆ ಇದೆ. ಇದೀಗ ಗಾಜಾದಿಂದ ಸ್ಥಳಾಂತರಗೊಂಡು ಶಾಲೆಯಲ್ಲಿ ಆಶ್ರಯ ಪಡೆಯುತಿದ್ದವರನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ಮಾಡಿದ ಪರಿಣಾಮ ನೂರಕ್ಕೂ ಅಧಿಕ ಮಂದಿ ಮೃತಪಟ್ಟು ಸಾಕಷ್ಟು ಜನ ಗಾಯಗೊಂಡಿರುವುದಾಗಿ ಪ್ಯಾಲೇಸ್ಟಿನಿಯನ್ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ನಿರಾಶ್ರಿತರು ಶಾಲೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎನ್ನಲಾಗಿದ್ದು ಇದರಿಂದ ಸಾವು ನೋವುಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಇಸ್ರೇಲ್ ಕಳೆದ ವಾರ ಗಾಜಾದಲ್ಲಿರುವ ನಾಲ್ಕು ಶಾಲೆಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿತ್ತು ಎನ್ನಲಾಗಿದ್ದು ಇದೀಗ ಮತ್ತೊಂದು ಶಾಲೆಯ ಮೇಲೆ ದಾಳಿ ನಡೆಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.