LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗಾಯಕ, ನಟ ಜೋ ಜೋನಾಸ್ ಮತ್ತು ನಟಿ ಸೋಫಿ ವಿಚ್ಛೇದನಕ್ಕೆ ಸಿದ್ಧತೆ‌ – ಮದುವೆಯಾದ ನಾಲ್ಕೇ ವರ್ಷಕ್ಕೆ ದೂರಾಗ್ತಾರಾ ಹಾಲಿವುಡ್‌ನ ಸ್ಟಾರ್‌ ದಂಪತಿ?

ಅಮೆರಿಕದ ಖ್ಯಾತ ಗಾಯಕ ಮತ್ತು ನಟ ಜೋ ಜೋನಾಸ್ ಮತ್ತು ನಟಿ ಸೋಫಿ ಟರ್ನರ್ ದಂಪತಿಯು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

34ರ ಹರೆಯದ ಜೋ ಅವರು ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 27ರ ಹರೆಯದ ಸೋಫಿಯನ್ನು ವಿವಾಹವಾಗಿದ್ದರು. ಜೋ ಅವರು 2016 ರಲ್ಲಿ ಸೋಫಿ ಅವರನ್ನು ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರಂತೆ. 2019 ರಲ್ಲಿ ಇವರಿಬ್ಬರು ವೆಗಾಸ್‌ನಲ್ಲಿ ಮದುವೆಯಾಗಿದ್ದರು. ಹಾಲಿವುಡ್‌ನ ಈ ಸ್ಟಾರ್‌ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಜೋ ಮತ್ತು ಸೋಫಿ ಇಬ್ಬರೂ ತುಂಬಾನೇ ಖಾಸಗಿ ವ್ಯಕ್ತಿಗಳು. ಹಾಗಾಗಿ, ಇಬ್ಬರೂ ಅವರ ಸಂಬಂಧವನ್ನು ತುಂಬಾ ಜನರಿಗೆ ಗೊತ್ತಾಗದಂತೆ ಇರಿಸಿಕೊಂಡಿದ್ದರು. ಅವರು ಈಗ ತಮ್ಮ ದಾಂಪತ್ಯದಲ್ಲಿ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಇದು ಅವರಿಬ್ಬರ ವಿಚ್ಛೇದನಕ್ಕೆ ಕಾರಣವಾಗಬಹುದು ಎಂದು ಟಿಎಂಝಡ್ ವರದಿ ಮಾಡಿದೆ.

ಈ ದಂಪತಿ ಲಾಸ್ ಏಂಜಲೀಸ್‌ನಲ್ಲಿ ಇಬ್ಬರು ತಮ್ಮ ತಮ್ಮ ವಕೀಲರೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ ಮತ್ತು ಅವರೊಡನೆ ವಿಚ್ಛೇದನದ ಬಗ್ಗೆ ಮಾತುಕತೆ ಸಹ ನಡೆಸಿದ್ದಾರೆ ಎಂದು ಮೂಲವೊಂದು ಔಟ್‌ಲೆಟ್‌ಗೆ ತಿಳಿಸಿದೆ.

ಜೋನಾಸ್ ಅವರು ಸೋಫಿಯೊಂದಿಗಿನ ವಿವಾಹವನ್ನು ಕೊನೆಗೊಳಿಸಲು ವಿಚ್ಛೇದನ ಪಡೆಯಲು, ಅದಕ್ಕೆ ಬೇಕಾದ ದಾಖಲೆಗಳನ್ನು ಸಲ್ಲಿಸುವ ಹಂತದಲ್ಲಿದ್ದಾರೆ ಎಂದು ವರದಿಯೊಂದು ಹೇಳಿಕೊಂಡಿದೆ. ದಂಪತಿಯ ಪುತ್ರಿ ವಿಲ್ಲಾ ಮತ್ತು ಅವಳ ಚಿಕ್ಕ ಸಹೋದರಿ ತಮ್ಮ ತಂದೆ ಜೋನಸ್ ಅವರೊಂದಿಗೆ ಪ್ರವಾಸದಲ್ಲಿದ್ದಾರೆ ಅಂತ ವರದಿಯೊಂದು ತಿಳಿಸಿದೆ.

ಜೋ ಇತ್ತೀಚೆಗೆ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಸಂಗತಿ ಅವರಿಬ್ಬರು ಬೇರ್ಪಟ್ಟಿದ್ದಾರೆ ಎಂಬ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಜೋ ಮತ್ತು ಸೋಫಿ ಇತ್ತೀಚೆಗೆ ಮಿಯಾಮಿಯಲ್ಲಿರುವ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಇದೇ ವರದಿಯು ಹೇಳಿದೆ. ಈ ದಂಪತಿ ಒಂದು ವರ್ಷದ ಹಿಂದೆ ಈ ಮನೆಯನ್ನು ಖರೀದಿಸಿದ್ದರಂತೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆಕೊರೊನಾ ಜೆಎನ್.1 ವೈರಸ್ -ಸಭೆ ನಡೆಸಿ ನಿಯಮ ಪಾಲನೆಯ ನಿರ್ಧಾರ - ದಿನೇಶ್ ಗುಂಡೂರಾವ್ಶಬರಿಮಲೆಯ ಅಯ್ಯಪ್ಪ ಭಕ್ತರಿಗೆ ನೀರು,ಆಹಾರ ಸೌಲಭ್ಯ ಒದಗಿಸುವಂತೆ ಹೈಕೋರ್ಟ್‌ ನಿರ್ದೇಶನದತ್ತಮಾಲೆ ಧರಿಸುವುದಾಗಿ ಘೋಷಣೆ ಮಾಡಿದ್ದ ಹೆಚ್ ಡಿ ಕೆ ಮಾತು ತಪ್ಪಿದ್ರಾ ?ಮನೆಯಲ್ಲಿರುವ ಪಾಲಕ್ ನಲ್ಲಿಯೇ ಮನೆ ಮದ್ದು..!