LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಎಕ್ಸ್‌ಪ್ರೆಸ್‌ ರೈಲು; ಬೋಗಿಗಳಲ್ಲಿ ಬೆಂಕಿಯಬ್ಬರ !!!!

ತಮಿಳುನಾಡು: ಮೈಸೂರಿನಿಂದ ದರ್ಭಾಂಗಕ್ಕೆ ಹೋಗುತ್ತಿದ್ದ ಬಾಗ್ಮತಿ ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ನಿನ್ನೆ (ಅ.11) ರಾತ್ರಿ 8.30 ರ ಸುಮಾರಿಗೆ ತಮಿಳುನಾಡಿನ ಕವರೈಪೆಟ್ಟೈ ಎಂಬಲ್ಲಿ ನಡೆದಿದೆ.ಕವರೈಪೆಟ್ಟೈ ನಿಲ್ಧಾಣಕ್ಕೆ ಎಕ್ಸ್‌ಪ್ರೆಸ್ ರೈಲು ಪ್ರವೇಶಿಸುವಾಗ ಹಳಿ ಬದಲಾವಣೆಯಾಗಿ ಲೂಪ್ ಲೈನನ್‌ಗೆ ಸ್ಥಳಾಂತರಗೊಂಡಿದ್ದ ಪರಿಣಾಮದಿಂದಾಗಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ರೈಲಿನ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, 12-13 ಭೋಗಿಗಳು ಹಳಿತಪ್ಪಿದೆ. ಆ ಭಾಗದಲ್ಲಿ ರೈಲು ಸಂಚಾರ ಮುಚ್ಚಲಾಗಿದ್ದು , ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ನಿಗಾ ವಹಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಚೆನ್ನೈನ ಸರ್ಕಾರಿ ಸ್ಟಾನ್ಲಿ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಚಿವ ಅವಧಿ ನೇಸರ್ ಹಾಗೂ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರಿಗೆ ಪ್ರಯಾಣ ಮುಂದುವರೆಸಲು ಮತ್ತೊಂದು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಇಂದು (ಅ.12) ಮುಂಜಾನೆ ಚೆನ್ನೈ ಸೆಂಟ್ರಲ್ ರೈಲು ನಿಲ್ಧಾಣದಿಂದ ಬೆಳಿಗ್ಗೆ 4.45 ರ ಸುಮಾರಿಗೆ ಹೊರಟಿತು. ಪ್ರಯಾಣಿಕರಿಗೆ ಅಹಾರ ಹಾಗೂ ನೀರಿನ್ನು ಒದಗಿಸಲಾಗಿತ್ತು.
ಎನ್‌ಡಿಆರ್‌ಎಫ್ ತಂಡ ಹಾಗೂ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾರಿಷಸ್‌ಗೆ ತೆರಳಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆಅನರ್ಹ ಬಿಪಿಎಲ್ ಫಲಾನುಭವಿಗಳ ಪತ್ತೆಗೆ ಮನೆ ಮನೆ ಪರಿಶೀಲನೆಗೆ ಸರ್ಕಾರ ನಿರ್ಧಾರ: ಸಚಿವ ಮುನಿಯಪ್ಪ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ ಅಂಗೀಕಾರ….!ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕರ್ತವ್ಯ ನಿರ್ವಹಣೆ ಕಡ್ಡಾಯ..!ಐಪಿಎಲ್‌ ಪಂದ್ಯಗಳಲ್ಲಿ ತಂಬಾಕು, ಮದ್ಯದ ಜಾಹೀರಾತಿಗೆ ನಿಷೇಧ : ಕೇಂದ್ರ ಸೂಚನೆಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ - 3 ಮಕ್ಕಳು ಸೇರಿ 5 ಮಂದಿ ಸಜೀವ ದಹನಐಎಎಸ್ ವಿಶಾಖಾ ಯಾದವ್ ಯಶಸ್ಸಿನ ಕಥನನೆಲದ ಮೇಲೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ?ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರಿಗೆ ಉದ್ಯೋಗಾವಕಾಶ.!ಪಡಿತರ ಚೀಟಿ ಪಡೆದುಕೊಂಡವರಿಗೆ ಮಾರ್ಚ್ ತಿಂಗಳಲ್ಲಿ ಪ್ರತಿ ಸದಸ್ಯರಿಗೆ ಇಂತಿಷ್ಟು ಅಕ್ಕಿ.!