ಗೃಹಲಕ್ಷ್ಮಿಗೆ ಇಕೆವೈಸಿ, ಸ್ಮಾರ್ಟ್ ಕಾರ್ಡ್ ಬಗ್ಗೆ ಸುಳ್ಳು ವದಂತಿಗೆ ಕಿವಿಗೊಡಬೇಡಿ
ದಾವಣಗೆರೆ.: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತುಗಳು ಜಮೆಯಾಗಲು ಸ್ವಲ್ಪ ತಡವಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಸ್ಥಳೀಯ ಆನ್‍ಲೈನ್ ಸೆಂಟರ್‍ನವರು ಇ-ಕೆವೈಸಿ ಮಾಡಿಸಬೇಕು, ಪಿಂಕ್ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಬರುತ್ತದೆ ಎಂಬ ಸುಳ್ಳು ವದಂತಿ ಹರಡುತ್ತಿದ್ದಾರೆ.
ಫಲಾನುಭವಿಗಳನ್ನು ನಂಬಿಸಿ ಅವರಿಂದ ಇಂತಿಷ್ಟು ಹಣ ಪಡೆದುಕೊಂಡು ಎಡಿಟ್ ಮಾಡಿ ಡೂಪ್ಲಿಕೇಟ್ ಪಿಂಕ್ ಸ್ಮಾರ್ಟ್ ಕಾರ್ಡ್ ಮಾಡಿಕೊಟ್ಟು ವಂಚಿಸುತ್ತಿದ್ದಾರೆ. ಆದ್ದರಿಂದ ಇಂತಹ ವಂಚಕರಿಂದ ಜಾಗೃತರಾಗಿರಲು ತಿಳಿಸಿ, ಸರ್ಕಾರ ಇಂತಹ ಕಾರ್ಡ್‍ಗಳಿಗೆ ಯಾವುದೇ ಅಧಿಕೃತ ಆದೇಶ ನೀಡಿರುವುದಿಲ್ಲ ಎಂದು ಚನ್ನಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.