E-PAPER
17 Nov 2026, 12:21:54 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗೋಪಾಲ ಜಿನಗೌಡಾ ಫೌಂಡೇಶನ ವತಿಯಿಂದ ಸುವಿಧಾಶ್ರಮ ಪ್ರಾರಂಭ

ಬೆಳಗಾವಿ-೨೦: ಬೆಳಗಾವಿ ತಾಲೂಕಿನಲ್ಲಿ ಶೈಕ್ಷಣೀಕ ಕ್ಷೇತ್ರದಲ್ಲಿ ಹೆಸರು ಮಾಡಿದ ಹಾಗೂ ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಗೋಪಾಲ ಜಿನಗೌಡಾ ಫೌಂಡೇಶನ ಇದೀಗ ಗೋಪಾಲ ಜಿನಗೌಡಾ ಸುವಿಧಾಶ್ರಮವನ್ನು ಪ್ರಾರಂಭಿಸುವ ಮೂಲಕ ಸಮಾಜ ಸೇವೆಯಲ್ಲಿ ಮತ್ತೊಂದು ದಾಖಲೆ ಮಾಡಿದೆ ಎಂದು ಪೌಂಡೇಶನ ಅಧ್ಯಕ್ಷ ಗೊಪಾಲ ಜಿನಗೌಡಾ ಅವರು ಇಂದಿಲ್ಲಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಫೌಂಡೇಶನ ಮತ್ತು ಗೋಪಾಲ ಜಿನಗೌಡ ಎಜ್ಯುಕೇಶನ ಟ್ರಸ್ಟ ಇಂದು ಹೆಮ್ಮರವಾಗಿ ಬೆಳೆಯುವುದಲ್ಲದೇ ಶೈಕ್ಷಣೀಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಿದೆ. ಸನ್ 2000 ನೇ ಸಾಲಿನಲ್ಲಿ ಶಿಂದೊಳ್ಳಿಯಲ್ಲಿ ಸ್ವಂತ ಜಾಗೆಯಲ್ಲಿ ತಂದೆಯವರ ಹೆಸರಿನಲ್ಲಿ ದೇವೇಂದ್ರ ಜಿನಗೌಡಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಲಾಗಿದೆ. ಇಂದಿನ ಶೈಕ್ಷಣಿಕ ವ್ಯಾಪಾರಿಕರಣದಲ್ಲಿ ಡೋನೇಷನ ರಹಿತ ಪ್ರವೇಶ ನೀಡುವ ಮೂಲಕ ಇಂದು ತಾಲೂಕಿನ 21 ಗ್ರಾಮದ ಸುಮಾರು 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡಲಾಗುತ್ತದೆ. ಅದೇ ಆವರಣದಲ್ಲಿ ಪಿಯುಸಿ ಮಹಾವಿದ್ಯಾಲಯಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದರು.
ಈಗಾಗಲೇ ವ್ಯಯಕ್ತಿಕವಾಗಿ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ದಾನವನ್ನು ನೀಡುವ ಮೂಲಕ ಬೆಳಗಾವಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಸಹಾಯ ಮಾಡಲಾಗಿದೆ. ಮಜಗಾಂವದಲ್ಲಿ ಗೋಮಟೇಶ ವಿದ್ಯಾಪೀಠದ ಗೋಪಾಲ ಜಿನಗೌಡಾ ಕನ್ನಡ, ಮರಾಠಿ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು 1200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಂತೆ ಉದ್ಯಮಬಾಗದಲ್ಲಿರುವ ಜಿತೋ ಗೋಪಾಲ ಜಿನಗೌಡಾ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬೃಹತ್ ದಾನ ನೀಡಿರುವುದು ಪ್ರಮುಖವಾಗಿವೆ ಎಂದು ಅವರು ತಿಳಿಸಿದರು.
ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಚಿಂತನೆ ನಡೆಸಿ ಇದೀಗ ಹಿರಿಯ ನಾಗರಿಕರಿಗಾಗಿ ಸುವಿಧಾಶ್ರಮವನ್ನು ಪ್ರಾರಂಭಿಸಲಾಗಿದೆ. ಈ ಸುವಿಧಾಶ್ರಮವು ಒಂದು ಎಕರೆ ಜಾಗದಲ್ಲಿ ಸಕಲ ಸೌಲಭ್ಯಗಳ ಪೂರೈಕೆ, ಸುಸಜ್ಜಿತ ಕೊಠಡಿಗಳು,
ಪ್ರಾರ್ಥನೆಗಾಗಿ ಶ್ರೀ ಗಣೇಶ ಮಂದಿರ, ಹಸಿರು ಮಡಿಲಲ್ಲಿ ಯೋಗಾಸನ,
ಕರ್ಣಮಧುರ ಸಂಗೀತ, ದೂರದರ್ಶನ ಸಭಾಂಗಣ,
ವ್ಯಾಯಾಮ ಮತ್ತು ಕ್ರೀಡಾ ಸಾಮಗ್ರಿಗಳ ಪರಿಕರಗಳು, ಶುದ್ಧ ಗಾಳಿ, ಬೆಳಕು, ಪರಿಶುದ್ಧ ನೀರು,ಸಮತೋಲನ ಸಸ್ಯಾಹಾರ ಉಟೋಪಚಾರ ಏಕರೂಪ ಊಟದ ವ್ಯವಸ್ಥೆ,
ಶಾರೀರಿಕ ಸಮಸ್ಯೆಗಳಿಗಾಗಿ ಪರಿಣಿತ ವೈದ್ಯರ ಸೇವೆ, ಮಾನಸಿಕ ಆರೋಗ್ಯದ ಕಾಳಜಿ,
ಕಡಿಮೆ ವೆಚ್ಚದಲ್ಲಿ ಸುರಕ್ಷತೆ, ಆರೈಕೆ ಅನುಭವಿಕ ವ್ಯಕತಿಗಳಿಂದ ಉಪನ್ಯಾಸ
ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳ ಆಚರಣೆ , ಸೇವೆಗೆ ಸದಾ ಲಭ್ಯವಿರುವ ಸಿಬ್ಬಂದಿ,
ಸುಸಜ್ಜಿತ ಗ್ರ‍್ರಂಥಾಲಯದ ವ್ಯವಸ್ಥೆ, ವಾಯುವಿಹಾರಕ್ಕಾಗಿ ಉದ್ಯಾನವನ,
ಹೀಗೆ ಹಲವಾರು ಸೌಲಭ್ಯ – ಆಕರ್ಷಣೆಗಳಿಂದ ಕೂಡಿರುವ ಈ ಸುವಿಧಾಶ್ರಮ ಜೀವನದ ಇಳಿವಯಸ್ಸಿನ ಹಿರಿಯರಿಗೆ ನೆಮ್ಮದಿಯ ಆಗರವಾಗಿ ಕಾರ್ಯನಿರ್ವಹಿಸಲಿದೆ. ಅವರ ಬದುಕಿನ ಸಂದ್ಯಾಕಾಲದಲ್ಲಿ ಬೆಳಕಿನ ಬೀಜವನ್ನು ಬಿತ್ತಿ ಅವರು ಸ್ವತಂತ್ರವಾಗಿ ಸರ್ವದಾ ಸಂತೋಷದಿಂದ ಇರುವಂತೆ ನೋಡಿಕೊಳ್ಳಲಿದೆ. ಈ ಸುವಿಧಾಶ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಪ್ರವೇಶ ಪಡೆಯಲು, 9448578387, 9845442871, 9590541008 ಇವರನ್ನು ಸಂಪರ್ಕಿಸಬಹುದು ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಪೌಂಡೇಶನ ನಿದೇರ್ಶಕರಾದ ಸಂತೋಷ ಜಿನಗೌಡಾ, ಅಭಯ ಅವಲಕ್ಕಿ , ಕುಂತುಸಾಗರ ಹರದಿ ವಿಕ್ರಮ ಜೈನ ಸೇರಿದಂತೆ ಮೊದಲಾದವರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.