LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗೋಬಿ ಮಂಚೂರಿ, ಬಾಂಬೇ ಮಿಠಾಯಿ ಬಳಿಕ ರಂಗು ರಂಗಿನ ಕಬಾಬ್‌ಗೂ ನಿಷೇಧ..!

ಬೆಂಗಳೂರು : ರಾಜ್ಯಾದ್ಯಂತ ವೆಜ್‌ ಕಬಾಬ್‌, ಕೋಳಿ ಹಾಗೂ ಮೀನಿನ ಕಬಾಬ್‌ ತಯಾರಿಗೆ ಕೃತಕ ಬಣ್ಣ ಉಪಯೋಗಿಸುವುದನ್ನು ನಿಷೇಧಿಸಿ ರಾಜ್ಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ ಜೀವಾವಧಿವರೆಗೆ ಜೈಲು ಶಿಕ್ಷೆಯ ಎಚ್ಚರಿಕೆಯನ್ನೂ ನೀಡಲಾಗಿದೆ. ಚಿಕನ್ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬೆರೆಸುವಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪರೀಕ್ಷೆಗೊಳಪಡಿಸಿ, ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 38 ಕಬಾಬ್‌ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ಪೈಕಿ 8 ಕಬಾಬ್‌ ಮಾದರಿಗಳು ಕೃತಕ ಬಣ್ಣಗಳಿಂದ ಕೂಡಿರುವುದು ಪತ್ತೆಯಾಗಿದೆ. ಆಹಾರ ಸುರಕ್ಷೆ ಹಾಗೂ ಗುಣಮಟ್ಟದ ಕಾಯ್ದೆ 2011ರ ಅನ್ವಯ ಕಬಾಬ್‌ ತಯಾರಿಯಲ್ಲಿ ಯಾವುದೇ ಕೃತಕ ಬಣ್ಣವನ್ನು ಉಪಯೋಗಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಬಣ್ಣಗಳ ಬಳಕೆ ಮಾಡಿದ್ದಲ್ಲಿ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ಕನಿಷ್ಠ 7 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತ ಕಾರ್ಯಕ್ರಮದಲ್ಲೇ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲುನ್ಯಾಕ್ ಗ್ರೇಡ್ ಕೊಡಲು ಲಂಚ ಪಡೆದ ವಿವಿ ಪ್ರಾಧ್ಯಾಪಕಿ ಬಂಧನಕಾಲೇಜು ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿ ಶಿಶುವನ್ನು ಕಸದ ಬುಟ್ಟಿಯಲ್ಲಿ ಬಚ್ಚಿಟ್ಟು ಕ್ಲಾಸಿಗೆ ಹಾಜರ್!ವಸಂತ ಪಂಚಮಿಯ ಪವಿತ್ರ ದಿನ- ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ 3ನೇ ಅಮೃತಸ್ನಾನಐರ್ಲೆಂಡ್‌ನಲ್ಲಿ ಕಾರು ಅಪಘಾತದಲ್ಲಿ ಇಬ್ಬರು ಭಾರತೀಯರು ಸಾವು.!ಉಡುಪಿ: ಶರಣಾದ ನಕ್ಸಲ್ ಲಕ್ಷ್ಮೀ ತೊಂಬಟ್ಟುಗೆ ವೈದ್ಯಕೀಯ ಪರೀಕ್ಷೆ , ನ್ಯಾಯಾಂಗ ಬಂಧನಐಎಎಸ್ ಅಧಿಕಾರಿ ಮುದ್ರಾ ಗೈರೋಲಾ ಯಶಸ್ಸಿನ ಪಯಣದ ಕಥನಕಲ್ಲಂಗಡಿ ಬೀಜದಲ್ಲಿ ಆರೋಗ್ಯ ಪ್ರಯೋಜನಗಳು ಅಡಗಿದೆ- ಬೀಜಗಳನ್ನ ಎಸೆಯುವ ಮುನ್ನ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ!!ವಚನ—ಕಲಕೇತಯ್ಯ !'ಕನ್ನಡಿಗರ ಋಣ ತೀರಿಸಲು ನಿರ್ಮಲಾ ಸೀತಾರಾಮನ್ ವಿಶೇಷ ಪ್ಯಾಕೇಜ್ ಘೋಷಿಸಲಿ'- ಪ್ರಿಯಾಂಕ್ ಖರ್ಗೆ