LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗ್ರೀಸ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ- ಸ್ವಾಗತಿಸಿದ ಭಾರತೀಯರು

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರ ಆಹ್ವಾನದ ಮೇರೆಗೆ ಇಂದು ಗ್ರೀಸ್‌ಗೆ ಭೇಟಿ ನೀಡಿದ್ದಾರೆ.

ಸುಮಾರು 40 ವರ್ಷಗಳ ಬಳಿಕ ಭಾರತದ ಪ್ರಧಾನಿ ಗ್ರೀಸ್‌ಗೆ ಭೇಟಿ ನೀಡಿದ್ದು, ಗ್ರೀಸ್​ನಲ್ಲಿರುವ ಭಾರತೀಯರೊಂದಿಗೆ ಮೋದಿ ಅವರು ಸಂವಾದ ನಡೆಸಲಿದ್ದಾರೆ.

ಪ್ರಧಾನಿ ಮೋದಿ ಅವರು ಭಾರತ ಮತ್ತು ಗ್ರೀಸ್ ನಾಗರಿಕತೆಯ ಸಂಬಂಧಗಳನ್ನು ಒಗ್ಗೂಡಿಸಲು ಮತ್ತು ಇತ್ತೀಚಿನ ವರ್ಷಗಳಲ್ಲಿ ಸಮುದ್ರ ಸಾರಿಗೆ, ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆಗಳು ಮತ್ತು ಸಮುದಾಯಗಳ ನಡುವಿನ ಸಂಬಂಧವನ್ನು ಬಲಪಡಿಸುವ ಸಲುವಾಗಿ ಈ ಭೇಟಿ ಎನ್ನಲಾಗಿದೆ.

ಪ್ರಧಾನಿ ಮೋದಿ ಅವರು ಆಫ್ರಿಕಾದಿಂದ ಗ್ರೀಸ್​​ನ ಅಥೆನ್ಸ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಗ್ರೀಕ್ ವಿದೇಶಾಂಗ ಸಚಿವ ಜಾರ್ಜ್ ಗೆರಾಪೆಟ್ರಿಟಿಸ್ ಮತ್ತು ಭಾರತೀಯರು ಬರಮಾಡಿಕೊಂಡರು.

ಇನ್ನು ಪ್ರಧಾನಿ ಮೋದಿ ಅವರು ಅಥೆನ್ಸ್‌ ವಿಮಾನ ನಿಲ್ದಾಣದಲ್ಲಿ ಭಾರತೀಯರು ಸ್ವಾಗತಿಸಿದ ಪರಿಯನ್ನು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಭಾರತ-ಗ್ರೀಸ್ ಸ್ನೇಹವನ್ನು ಗಾಢಗೊಳಿಸುವ ಉದ್ದೇಶದಿಂದ ಗ್ರೀಸ್​​ಗೆ ಭೇಟಿ ನೀಡಿದ್ದೇನೆ. ನಾನು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದೇನೆ ಮತ್ತು ಇಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲಿದ್ದೇನೆ ಎಂದು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

ಮೋದಿ ಅಥೆನ್ಸ್‌ನಲ್ಲಿರುವ ಗ್ರಾಂಡೆ ಬ್ರೆಟಾಗ್ನೆ ಹೋಟೆಲ್​​ ನಲ್ಲಿ ಭಾರತೀಯ ಸಮುದಾಯದ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೇ ಭಾರತೀಯ ಮತ್ತು ಗ್ರೀಸ್​​​ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದು, ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ಹೇಳಲಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಸ್‌ಮಸ್‌ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಪಘಾತ; ಇಬ್ಬರು ಯುವಕರ ದುರ್ಮರಣ..!ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆಕೊರೊನಾ ಜೆಎನ್.1 ವೈರಸ್ -ಸಭೆ ನಡೆಸಿ ನಿಯಮ ಪಾಲನೆಯ ನಿರ್ಧಾರ - ದಿನೇಶ್ ಗುಂಡೂರಾವ್ಶಬರಿಮಲೆಯ ಅಯ್ಯಪ್ಪ ಭಕ್ತರಿಗೆ ನೀರು,ಆಹಾರ ಸೌಲಭ್ಯ ಒದಗಿಸುವಂತೆ ಹೈಕೋರ್ಟ್‌ ನಿರ್ದೇಶನದತ್ತಮಾಲೆ ಧರಿಸುವುದಾಗಿ ಘೋಷಣೆ ಮಾಡಿದ್ದ ಹೆಚ್ ಡಿ ಕೆ ಮಾತು ತಪ್ಪಿದ್ರಾ ?