LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚಹಾದಂಗಡಿಗೆ ನುಗ್ಗಿದ ಟ್ರಕ್: 5 ಮಂದಿ ದುರ್ಮರಣ, ಹಲವರಿಗೆ ಗಾಯ

ಚೆನ್ನೈ: ನಿಯಂತ್ರಣ ತಪ್ಪಿ ಟ್ರಕ್‌ ವೊಂದು ಚಹಾದಂಗಡಿ ಹಾಗೂ ಇತರೆ ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟು, 19 ಮಂದಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಮೃತಪಟ್ಟವರನ್ನು ಮಧುರವಾಯಲ್‌ನ ಸುರೇಶ್ (39), ಗೋಕುಲಕೃಷ್ಣನ್ (25) ತಿರುವಳ್ಳೂರಿನ ಸತೀಶ್(25), ಅಮಿಂಜಿಕರೈ, ಜೆಗನಾಥನ್ (60) ಶಾಂತಿ(55) ಎಂದು ಗುರುತಿಸಲಾಗಿದೆ.

ಟ್ರಕ್‌ ಅರಿಯಲೂರಿನಿಂದ ಶಿವಗಂಗೈಗೆ ಸಿಮೆಂಟ್‌ ಚೀಲಗಳನ್ನು ಹೊತ್ತುಕೊಂಡು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಅಪಘಾತ ವೇಳೆ ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಟ್ರಕ್ ನಿಯಂತ್ರಣ ತಪ್ಪಿ ಚಹಾದಂಗಡಿ ಹಾಗೂ ಪಕ್ಕದಲ್ಲಿದ್ದ ವಾಹನಗಳಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇನ್ನು ಅಪಘಾತದ ಸಂದರ್ಭದಲ್ಲಿ ಅಂಗಡಿಯಲ್ಲಿ ಹಲವಾರು ಶಬರಿಮಲೆ ಯಾತ್ರಾರ್ಥಿಗಳು ಟೀ ಸೇವಿಸುತ್ತಿದ್ದರು. ಅಂಗಡಿ ಬಳಿ ನಿಲ್ಲಿಸಿದ್ದ ಕಾರು ಹಾಗೂ ಇತರೆ ದ್ವಿಚಕ್ರ ವಾಹನಗಳಿಗೂ ಅಪಘಾತದಿಂದ ಹಾನಿ ಉಂಟಾಗಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕ್ಸಲರ ಶರಣಾಗತಿಗೆ ಸರಕಾರ ಪುನರ್ವಸತಿ ಪ್ರೋತ್ಸಾಹಧನ : ಡಾ. ಬಂಜಗೆರೆ ಜಯಪ್ರಕಾಶ್.!ಕರ್ನಾಟಕಕ್ಕೆ ಯೋಗಿಯಂತಹ ಮುಖ್ಯಮಂತ್ರಿ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆಪೆನ್ ಡ್ರೈವ್ ಹಿಂದಿರೋ "ದೊಡ್ಡ ತಿಮಿಂಗಿಲ" ಬಗ್ಗೆ ಕುಮಾರಸ್ವಾಮಿ ಮೊದಲು ದಾಖಲೆ ಕೊಡಲಿಸಿಎಂ ಡಿಸಿಎಂ ಕೈ ಸೇರಿದ ಕಾಂಗ್ರೆಸ್ ಆಂತರಿಕ ಸಮೀಕ್ಷಾ ವರದಿ, 14ರಲ್ಲಿ "ಕೈ" ಮೇಲು!ರುಚಿಕರವಾದ ವೆಜ್ ಬಿರಿಯಾನಿ ಮಾಡುವ ವಿಧಾನಸುಂದರವಾದ ತ್ವಚೆಗೆ ಸಹಕಾರಿ ತುಳಸಿಯ ಈ 5 ವಿಧಾನಗಳು- ಇಲ್ಲಿದೆ ಮಾಹಿತಿ-ಬಸವಣ್ಣ ಅವರ ವಚನ .!ರಾಜಸ್ಥಾನ ಗಣಿಯಲ್ಲಿ ಲಿಫ್ಟ್ ಕುಸಿದು ಹಿರಿಯ ಅಧಿಕಾರಿ ಸಾವು ಅಂಜಲಿ ಕೊಲೆ ಪ್ರಕರಣ : ಗೃಹ ಇಲಾಖೆಯ ವೈಫಲ್ಯತೆಯೇ ಕಾರಣ ನೇಹಾ ತಂದೆ ನಿರಂಜನಯ್ಯ ಕಿಡಿ'ಜನರು ಪ್ರಧಾನಿ ಮೋದಿಯನ್ನು ಕೈಬಿಡಲು ನಿರ್ಧರಿಸಿದ್ದಾರೆ'- ಮಲ್ಲಿಕಾರ್ಜುನ ಖರ್ಗೆ