ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಸಮೀಪದ ಆಲದಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ಮಲೆಮಹದೇಶ್ವರ ವನ್ಯಜೀವಿ ವಲಯದ ಆಲದ ಕೆರೆ ಅರಣ್ಯ ಪ್ರದೇಶಕ್ಕೆ ಪೊರಕೆ ಕಡ್ಡಿ ಸಂಗ್ರಹಕ್ಕೆಂದು ಹೋಗಿದ್ದ ತಂದೆ-ಮಗನ ಮೇಲೆ ಆನೆ ದಾಳಿ ಮಾಡಿದೆ. ಆನೆ ದಾಳಿಯಿಂದ ತಂದೆ ಸಾವನ್ನಪ್ಪಿದ್ದರೆ. ಆದರೆ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
https://bcsuddi.com/%e0%b2%9a%e0%b2%be%e0%b2%ae%e0%b2%b0%e0%b2%be%e0%b2%9c%e0%b2%a8%e0%b2%97%e0%b2%b0-%e0%b2%95%e0%b2%be%e0%b2%a1%e0%b2%be%e0%b2%a8%e0%b3%86-%e0%b2%a6%e0%b2%be%e0%b2%b3%e0%b2%bf%e0%b2%97%e0%b3%86/
ಪೊರಕೆ ಕಡ್ಡಿ ಸಂಗ್ರಹಕ್ಕೆಂದು ಪುತ್ರ ಚಂದ್ರು ಜೊತೆ ಹೋಗಿದ್ದ ಪ್ರಭುಲಿಂಗಸ್ವಾಮಿ ಮೇಲೆ ಕಾಡಾನೆ ದಾಳಿ ಮಾಡಿದೆ. ಪ್ರಭು ಲಿಂಗಸ್ವಾಮಿಯ ಮೃತ ದೇಹವನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.