LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚಾರಣಕ್ಕೆ ತೆರಳಿದ್ದ ಯುವಕನಿಗೆ ಹೃದಯಾಘಾತ: ಸ್ಥಳದಲ್ಲೇ ಸಾವು

ಕೊಡಗು: ಚಾರಣಕ್ಕೆ ತೆರಳಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಕಕ್ಕಬ್ಬೆ ತಡಿಯಂಡಮೋಳು ಬೆಟ್ಟದಲ್ಲಿ ನಡೆದಿದೆ. ಹರಿಯಾಣ ಮೂಲದ ಜತಿನ್ ಕುಮಾರ್ (25) ಮೃತ ದುರ್ದೈವಿ.

ಬೆಂಗಳೂರಿನ ಜೆಪಿ ನಗರದ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್ ಚಾರಣ ಪ್ರಿಯರಾಗಿದ್ದು, ಅತಿ ಎತ್ತರದ ಬೆಟ್ಟವಾದ ತಡಿಯಂಡಮೋಳ್‌ ನೋಡಲು ತನ್ನ ಸ್ನೇಹಿತರ ಜೊತೆ ಆಗಮಿಸಿದ್ದರು.

ಬೆಟ್ಟದ ಮೇಲೆ ತಲುಪಿದಾಗ ತೀವ್ರ ಎದೆನೋವಿಗೆ ಒಳಗಾದ ಜತಿನ್ ಹೃದಯಾಘಾತದಿಂದ ಬೆಟ್ಟದ ಮೇಲೆಯೆ ಕೊನೆಯುಸಿರೆಳೆದರು. ಅವರನ್ನು ಕಾಪಾಡಿಕೊಳ್ಳಲು ಸಹಚಾರಣಿಗರು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಜತಿನ್ ಅವರ ಮೃತದೇಹವನ್ನು ಸಿಬ್ಬಂದಿಗಳು ಹೊತ್ತು ತಂದಿದ್ದಾರೆ. ಘಟನೆ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕ್ಸಲರ ಶರಣಾಗತಿಗೆ ಸರಕಾರ ಪುನರ್ವಸತಿ ಪ್ರೋತ್ಸಾಹಧನ : ಡಾ. ಬಂಜಗೆರೆ ಜಯಪ್ರಕಾಶ್.!ಕರ್ನಾಟಕಕ್ಕೆ ಯೋಗಿಯಂತಹ ಮುಖ್ಯಮಂತ್ರಿ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆಪೆನ್ ಡ್ರೈವ್ ಹಿಂದಿರೋ "ದೊಡ್ಡ ತಿಮಿಂಗಿಲ" ಬಗ್ಗೆ ಕುಮಾರಸ್ವಾಮಿ ಮೊದಲು ದಾಖಲೆ ಕೊಡಲಿಸಿಎಂ ಡಿಸಿಎಂ ಕೈ ಸೇರಿದ ಕಾಂಗ್ರೆಸ್ ಆಂತರಿಕ ಸಮೀಕ್ಷಾ ವರದಿ, 14ರಲ್ಲಿ "ಕೈ" ಮೇಲು!ರುಚಿಕರವಾದ ವೆಜ್ ಬಿರಿಯಾನಿ ಮಾಡುವ ವಿಧಾನಸುಂದರವಾದ ತ್ವಚೆಗೆ ಸಹಕಾರಿ ತುಳಸಿಯ ಈ 5 ವಿಧಾನಗಳು- ಇಲ್ಲಿದೆ ಮಾಹಿತಿ-ಬಸವಣ್ಣ ಅವರ ವಚನ .!ರಾಜಸ್ಥಾನ ಗಣಿಯಲ್ಲಿ ಲಿಫ್ಟ್ ಕುಸಿದು ಹಿರಿಯ ಅಧಿಕಾರಿ ಸಾವು ಅಂಜಲಿ ಕೊಲೆ ಪ್ರಕರಣ : ಗೃಹ ಇಲಾಖೆಯ ವೈಫಲ್ಯತೆಯೇ ಕಾರಣ ನೇಹಾ ತಂದೆ ನಿರಂಜನಯ್ಯ ಕಿಡಿ'ಜನರು ಪ್ರಧಾನಿ ಮೋದಿಯನ್ನು ಕೈಬಿಡಲು ನಿರ್ಧರಿಸಿದ್ದಾರೆ'- ಮಲ್ಲಿಕಾರ್ಜುನ ಖರ್ಗೆ