E-PAPER
17 Nov 2026, 12:18:34 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಿಂತಾಮಣರಾವ್‌ ಪ್ರೌಢಶಾಲೆಯ ಶತಮಾನೋತ್ಸವ: ಇತಿಹಾಸ ತೆರೆದಿಟ್ಟಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ

ಬೆಳಗಾವಿ-25: ಬೆಳಗಾವಿ ಶಹಾಪುರದಲ್ಲಿರುವ ಚಿಂತಾಮಣರಾವ್ ಪ್ರೌಢಶಾಲೆಯ ಶತಮಾನೋತ್ಸವದ ಸಮಾರೋಪ ಸಮಾರಂಭ ಡಿ.27 ಹಾಗೂ 28ರಂದು ಅದ್ಧೂರಿಯಾಗಿ ನಡೆಯಲಿದೆ. ಇದೇ ವೇಳೆ ಶ್ರಿಮಂತ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಪ್ರತಿಮೆ ಕೂಡ ಲೋಕಾರ್ಪಣೆ ಮಾಡಲಾಗುವುದು' ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

'27ರಂದು ಶಾಲೆಯ ಮೈದಾನದಲ್ಲಿ ಸಭೆ ನಡೆಯಲಿದೆ. ನಂತರ ಹಳೆಯ ವಿದ್ಯಾರ್ಥಿಗಳ ಬ್ಯಾಚ್‌ವಾರು ತರಗತಿಗಳು ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 28ರಂದು ಬೆಳಿಗ್ಗೆ 10ಕ್ಕೆ ಮಹಾರಾಜರ ಪ್ರತಿಮೆ ಅನಾವರಣ ಮಾಡಿ, ನಂತರ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ' ಎಂದು ಅವರು ಶಾಲೆಯಲ್ಲಿ ಬುಧವಾರ ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿ ದರು.

'ನಾನು ಕೂಡ ಇದೇ ಶಾಲೆಯ ವಿದ್ಯಾರ್ಥಿ. 1985ರ ಬ್ಯಾಚ್‌ನ ವಿದ್ಯಾರ್ಥಿಗಳ ಒಂದು ವಿಶೇಷ ತರಗತಿ ಕೂಡ ನಡೆಸಲಿದ್ದೇವೆ. ಆಗಿನ ವಿದ್ಯಾರ್ಥಿಗಳು, ಅದೇ ಕೊಠಡಿ, ಅದೇ ಶಿಕ್ಷಕರಿಂದ ಮತ್ತೆ ಅದೇ ಪಾಠ ಕಲಿಯುವಂಥ ವಿಶೇಷ ಕಾರ್ಯಕ್ರಮವಿದು. ಉಳಿದಂತೆ ಬೇರೆ ಬೇರೆ ಬ್ಯಾಚ್‌ನ ವಿದ್ಯಾರ್ಥಿಗಳೊಂದಿಗೂ ಸಂವಾದ- ಸನ್ಮಾನ ನಡೆಯಲಿದೆ. ಈವರೆಗೆ 3,000ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದೇವೆ' ಎಂದರು.

ಶಾಲೆಯ ಇತಿಹಾಸ: 'ಇತಿಹಾಸದಲ್ಲಿ ಬೆಳಗಾವಿ ನಗರವನ್ನು ಸಾಂಗ್ಲಿಯ ಶ್ರೀಮಂತ ರಾಜಸಾಹೇಬ ಚಿಂತಾಮಣರಾವ್ ಪಟವರ್ಧನ ಹಾಗೂ ರಾಣಿ ಸರಸ್ವತಿ ದೇವಿ ಪಟವರ್ಧನ ಅವರು ಆಳುತ್ತಿದ್ದರು. ತಮ್ಮ ಪ್ರಜೆಗಳಿಗೆ ಶಿಕ್ಷಣ ಕೊಡಬೇಕು ಎಂಬ ಉದ್ದೇಶದಿಂದ ಕ್ರಿ.ಶ 1914ರಲ್ಲಿ ಚಿಂತಾಮಣರಾವ್ ಶಾಲೆಯನ್ನು ಗಂಡುಮಕ್ಕಳಿಗೆ, ಸರಸ್ವತಿ ಶಾಲೆಯನ್ನು ಹೆಣ್ಣುಮಕ್ಕಳಿಗಾಗಿ ಆರಂಭಿಸಿದರು. 1ರಿಂದ 5ನೇ ತರಗತಿ ಹೊಂದಿದ್ದ ಶಾಲೆ, 1920-21ರಲ್ಲಿ ಪ್ರೌಢಶಾಲೆ ಆಗಿ ಅಸ್ತಿತ್ವಕ್ಕೆ ಬಂದಿತು' ಎಂದು ಅಭಯ ಪಾಟೀಲ ಮಾಹಿತಿ ನೀಡಿದರು.

1945-46ರಲ್ಲಿ ಈ ಸಂಸ್ಥೆಯ ಬೆಳ್ಳಿ ಹಬ್ಬ ಆಚರಿಸಲಾಗಿದೆ. ಅದರ ನೆನಪಿಗಾಗಿ ಸಭಾಭವನ ನಿರ್ಮಿಸಿದ್ದು, ಆಗ ಕಟ್ಟಡಕ್ಕೆ ₹25 ಸಾವಿರ ದೇಣಿಗೆ ನೀಡಿದ ದಾಮೋದರ ರಾಮಣ್ಣ ಅನಗೋಳಕರೆ ಅವರ ಹೆಸರನ್ನೇ ಇಡಲಾಗಿದೆ. 1957ರಲ್ಲಿ ಈ ಶಾಲೆ ಮುಂಬೈ ಸರ್ಕಾರದ ವಶಕ್ಕೆ ಸೇರಿತ್ತು. 8.5.1965ರಂದು ಸಂಸ್ಥೆಯನ್ನು ಆಗಿನ ಮೈಸೂರು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಅಂದಿನಿಂದ ಸರ್ಕಾರಿ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. 1995-96 ರಲ್ಲಿ ಅಮೃತ ಮಹೊತ್ಸವ ಆಚರಿಸಲಾಗಿದೆ. 1973ರಲ್ಲಿ ಪದವಿಪೂರ್ವ ಕಾಲೇಜು ಆಗಿದೆ' ಎಂದರು.

ಬೆಳಗಾವಿ ನಗರ ಶೈಕ್ಷಣಿಕ ಸಮಿತಿಯ ಪದಾಧಿಕಾರಿಗಳು, ಶಾಲೆ ಸಿಬ್ಬಂದಿ ಇದ್ದರು.

'ಅಧಿವೇಶನವೋ ಯಲ್ಲಮ್ಮನ ಜಾತ್ರೆಯೋ'

'ಈ ಬಾರಿ ನಡೆದ ಚಳಿಗಾಲದ ಅಧಿವೇಶನವು ಸದನ ಕಲಾಪವೋ ಯಲ್ಲಮ್ಮನಗುಡ್ಡದ ಜಾತ್ರೆಯೋ ಎಂಬಂತೆ ನಡೆಯಿತು' ಎಂದು ಅಭಯ ಪಾಟೀಲ ಟೀಕಾಪ್ರಹಾರ ನಡೆಸಿದರು.

'ಹತ್ತು ದಿನ ಕಲಾಪಗಳಿಗೆ ನಿಗದಿ ಮಾಡಿ ಬಂದರು. ಮೊದಲ ದಿನ ಬರೀ ಶ್ರದ್ಧಾಂಜಲಿ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಕಾರಣ ಮತ್ತೊಂದು ದಿನ ರದ್ದಾಯಿತು. ಎರಡು ದಿನ ಸರ್ಕಾರಿ ರಜೆ. ಎಲ್ಲವೂ ಸೇರು ಆರು ದಿನ ಮಾತ್ರ ಸದನ ನಡೆಯಿತು. ಈ ಬಾರಿಯೂ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ತೋರಲಿಲ್ಲ. ಇದರಿಂದ ಚಳಿಗಾಲದ ಅಧಿವೇಶನದ ಉದ್ದೇಶವೇ ಈಡೇರುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

₹8 ಕೋಟಿಯ ಹೈಟೆಕ್ ಸಭಾಂಗಣ

'ಚಿಂತಾಮಣರಾವ್‌ ಸರ್ಕಾರಿ ಪ್ರೌಢಶಾಲೆಗೆ

ಅತ್ಯಾಧುನಿಕ ಸೌಕರ್ಯ ಹೊಂದಿದ ಹೈಟೆಕ್ ಸಭಾಂಗಣ ನಿರ್ಮಿಸಲಾಗಿದ್ದು, ಇದಕ್ಕೆ ₹8 ಕೋಟಿ ವೆಚ್ಚ ಮಾಡಲಾಗಿದೆ. ಸ್ಮಾರ್ಟ್‌ಕ್ಲಾಸ್‌ಗಳನ್ನೂ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ನಿರ್ಮಿಸಲಾಗಿದೆ. ಉತ್ತರ ಕರ್ನಾಟಕದಲ್ಲಿಯೇ ಸರ್ಕಾರಿ ಶಾಲೆಗಳಲ್ಲಿ ಎಲ್ಲೂ ಇರದಂಥ ಬೃಹತ್ ಎಲ್‌ಇಡಿ ಪರದೆ ಕೂಡ ಅಳವಡಿಸಲಾಗಿದೆ' ಎಂದು ಅಭಯ ಪಾಟೀಲ ತಿಳಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.