LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸ್, ವಾಹನಗಳ ಮೇಲಿನ ಡಿ ಬಾಸ್ ಸ್ಟಿಕ್ಕರ್ ಕಿತ್ತು ಹಾಕುತ್ತಿರೋ ಫ್ಯಾನ್ಸ್

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ನಟ ದರ್ಶನ್ ಕರಾಳ ಮುಖ ಬಯಲಾದ ಹಿನ್ನೆಲೆ ಡಿ ಬಾಸ್ ಫ್ಯಾನ್ಸ್ ಬೇಸರಗೊಂಡು ವಾಹನಗಳ ಮೇಲಿನ ಡಿ ಬಾಸ್ ಸ್ಟಿಕ್ಕರ್ ಕಿತ್ತು ಹಾಕುತ್ತಿರೋ ದೃಶ್ಯ ವೈರಲ್ ಆಗಿದೆ. ರೇಡಿಯಂ ಸ್ಟಿಕ್ಕರ್ ತೆಗೆದುಹಾಕಿ ಡಿ ಬಾಸ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಡಿ ಬಾಸ್ ಹೆಸರು ಸ್ಕ್ರ್ಯಾಚ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್, ಕಾರ್ ಗಳ ಮೇಲಿನ ಡಿ ಬಾಸ್ ಸ್ಟಿಕ್ಕರ್ ಗಳನ್ನ ಅಭಿಮಾನಿಗಳು ಕಿತ್ತು ಹಾಕ್ತಿದ್ದಾರೆ. ದರ್ಶನ್ ಹೆಸರು ಹಾಕಿಕೊಂಡು ಬೈಕ್ ಓಡಿಸೋಕೆ ಬೇಸರ ಉಂಟಾಗಿ ಡಿ ಬಾಸ್ ಹೆಸರನ್ನು ಚಾಕುವಿನಿಂದ ರಿಮೂವ್ ಮಾಡ್ತಿದ್ದಾರೆ.

ಬೆಂಗಳೂರಲ್ಲಿ ಆಟೋ ಚಾಲಕರ ಬಹುಪಾಲು ವಾಹನಗಳ ಮೇಲೆ ದರ್ಶನ್ ಅಭಿಮಾನ ರಾರಾಜಿಸುತ್ತಿರುತ್ತದೆ. ಡಿ ಬಾಸ್, ದಚ್ಚು, ದರ್ಶನ್, ಕರಿಯ ಎಂಬಿತ್ಯಾದಿ ಬರಹಗಳು ಸ್ಟಿಕ್ಕರ್ ಮಾಡಿ ಅಂಟಿಸಲಾಗಿರುತ್ತದೆ. ಇದೀಗ ಕೊಲೆ ಪ್ರಕರಣದಲ್ಲಿ ಬಂಧನವಾದ ಬಳಿಕ ಆಟೋ ಚಾಲಕರು, ಅಭಿಮಾನಿಗಳು ತಾವು ಅಭಿಮಾನದಿಂದ ಹಾಕಿರುವ ದರ್ಶನ್ ಸ್ಟಿಕ್ಕರ್‌ಗಳನ್ನು ತೆರವು ಮಾಡಲು ಮುಂದಾಗಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST