ಬೆಂಗಳೂರು : ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ನಿನಾಸಂ ಅಶ್ವತ್ಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ರೋಹಿತ್ ಎಂಬುವವರಿಂದ ನಟ ನೀನಾಸಂ ಅಶ್ವಥ್ ಹಸುಗಳನ್ನು ಖರೀದಿ ಮಾಡಿ 1.5 ಲಕ್ಷ ಚೆಕ್ ನೀಡಿದ್ದರು.
ಆದರೆ ಚೆಕ್ ಬೌನ್ಸ್ ಆಗಿತ್ತು, ನಾಲ್ಕು ಬಾರಿ ಅರೆಸ್ಟ್ ವಾರಂಟ್ ನ್ನು ಕೋರ್ಟ್ ಹೊರಡಿಸಿದರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆ ಐದನೇ ಬಾರಿ ಅರೆಸ್ಟ್ ವಾರಂಟ್ ಹೊರಡಿಸಿದರೂ ಕೂಡ ವಿಚಾರಣೆಗೆ ಬರಲಿಲ್ಲ. ಈ ಹಿನ್ನೆಲೆ ಪೊಲೀಸರು ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ನಂತರ ನಟ ಅಶ್ವಥ್ ತಪ್ಪೊಪ್ಪಿಕೊಂಡು ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ. ಬಾಕಿ ಹಣ ನೀಡಲು ಕಾಲಾವಕಾಶ ಕೇಳಿ ಕೋರ್ಟ್ ನಿಂದ ಬಿಡುಗಡೆ ಆಗಿದ್ದಾರೆ ಎಂದು ತಿಳಿದು ಬಂದಿದೆ.
https://bcsuddi.com/%e0%b2%b9%e0%b2%bf%e0%b2%ae%e0%b2%be%e0%b2%9a%e0%b2%b2-%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ad%e0%b2%be%e0%b2%b0%e0%b2%bf/
ಸ್ಯಾಂಡಲ್ ವುಡ್ ನಟ ನಿನಾಸಂ ಅಶ್ವತ್ಥ್ ಮುಂಗಾರು ಮಳೆ, ಪ್ರೇಮಿಸಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಇದರ ಜೊತೆಗೆ ಹೈನುಗಾರಿಕೆ ಕೂಡ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.