LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಚೈತ್ರಾ ಕುಂದಾಪುರ ಪ್ರಕರಣ ಮಿಕ್ಸಪ್ ಮಾಡಬೇಡಿ' -ಗೃಹಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಪ್ರಕರಣಕ್ಕೂ ಹಿಂದೂ ಸಂಘಟನೆಗೂ ಮಿಕ್ಸಪ್ ಮಾಡುವುದು ಬೇಡ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಹಿಂದೂ ಸಂಘಟನೆಗೆ ಈ ಪ್ರಕರಣವನ್ನು ಬೆರೆಸಿ ನೋಡುವುದು ಸರಿಯಲ್ಲ ನನಗೆ ಬಂದ ಮಾಹಿತಿ ಪ್ರಕಾರ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದಿದ್ದಾರೆ. 3.5 ಕೋಟಿ ರೂಪಾಯಿ ಹಣ ಪಡೆದಿರುವ ಬಗ್ಗೆ ಕಂಪ್ಲೆಂಟ್ ಆಗಿದೆ. ಸಿಸಿಬಿ ಪೊಲೀಸರ ತನಿಖೆ ಬಳಿಕ ಉಳಿದ ವಿಚಾರ ಗೊತ್ತಾಗಲಿದೆ. ಕೇಸ್​​ನಲ್ಲಿ ಸ್ವಾಮೀಜಿ ಭಾಗಿಯಾಗಿದ್ದರೆ ಅವರ ಬಂಧನವೂ ಆಗುತ್ತದೆ. ಪೊಲೀಸರು ಸುಮೊಟೋ ಕೇಸ್​ ದಾಖಲಿಸಿಲ್ಲ. ಕಂಪ್ಲೆಂಟ್ ಆಧಾರದ ಮೇಲೆ ಚೈತ್ರಾ ಕುಂದಾಪುರ ಬಂಧನ ಆಗಿದೆ ಎಂದು ಹೇಳಿದ್ದಾರೆ.

ಯಾರೇ ತಪ್ಪು ಮಾಡಿದರೂ ಕೂಡ ಕಾನೂನಿನಡಿ ಕ್ರಮ ಆಗಲಿದೆ. ಚೈತ್ರಾ ಕುಂದಾಪುರ ಹಿಂದೂ ಪರವಾಗಿ ಭಾಷಣ ಮಾಡಿದ್ದಾರೆ. ಈ ಪ್ರಕರಣವನ್ನು ಅದಕ್ಕೆ ಮಿಕ್ಸಪ್ ಮಾಡುವುದು ಬೇಡ ಎಂದಿದ್ದಾರೆ.

ಇಂದಿರಾ ಕ್ಯಾಂಟಿನ್ ಬಿಲ್ ಗಾಗಿ ಈ ಪ್ಲಾನ್ ಮಾಡಲಾಗಿದೆ ಎಂಬ ಆರೋಪಕ್ಕೂ ಇದಕ್ಕೂ ವಂಚನೆ ಕೇಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಡೆದ ಹಿಮ್ಮಡಿ ಪಾದ ಸರಿಪಡಿಸಲು ಇಲ್ಲಿದೆ ಮನೆಮದ್ದು...!'ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಸೇರಿದ್ದಾನೆ' - ಫಾರೂಕ್ ಅಬ್ದುಲ್ಲಾಕಣ್ಣೂರಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಯುವತಿ ಮೃತ್ಯು: ನಕ್ಸಲ್‌ರಿಂದ ಪ್ರತೀಕಾರದ ಪೋಸ್ಟರ್ಭಯೋತ್ಪಾದಕ ಪಟ್ಟಿಗೆ ಕೆನಡಾದ ಲಖ್‍ಬೀರ್ ಸಿಂಗ್ ಲಾಂಡಾ ಸೇರ್ಪಡೆಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಯುವಕ ಮೃತ್ಯುಉದ್ಯೋಗ ಮೇಳ ಸಿದ್ಧತೆಗೆ ಸಚಿವರ ತಂಡ ರಚನೆ : ಸಿಎಂ ಸಿದ್ದರಾಮಯ್ಯಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ದಿಗೆ 1 ಸಾವಿರ ಕೋಟಿ ರೂ. ಅನುದಾನ -ಸಿದ್ದರಾಮಯ್ಯಸುಕನ್ಯಾ ಸಮೃದ್ಧಿ, ಅಂಚೆ ಎಫ್‌ಡಿ ಬಡ್ಡಿದರ ಏರಿಕೆಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನ.!ಪಿಎಂ ಆವಾಸ್ ಯೋಜನೆಯಡಿ 4 ಕೋಟಿಗೂ ಅಧಿಕ ಮನೆಗಳ ನಿರ್ಮಾಣ: ಪ್ರಹ್ಲಾದ್ ಜೋಶಿ