E-PAPER
17 Nov 2026, 12:23:05 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟಿಸಿದ; ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ-23 : ನಗರದ ಕೃಷ್ಣ ದೇವರಾಯ ಸರ್ಕಲ್ ಬಳಿ ಡಾ.ಲಕ್ಷ್ಮಣ ಜಂಬಗಿ ಅವರ ನೂತನ ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು.
ರವಿವಾರ ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿಯೇ ಬೆಳಗಾವಿ ದೊಡ್ಡ ಜಿಲ್ಲಾ ಹಾಗೂ ಎರಡನೇಯ ರಾಜ್ಯಧಾನಿ, ದಿನನಿತ್ಯ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ, ಪ್ರದ್ಮಶ್ರೀ ಡಾ. ಪ್ರಭಾಕರ್ ಕೋರೆ ಅವರು ಸಾಕಷ್ಟ್ರು ಅನುಭವದ ಮಾತುಗಳನ್ನು ಹಂಚಿಕೊಂಡು ಮೊದಲು ಬೆಳಗಾವಿ ಯಾವ ರೀತಿ ಇತ್ತು ಇದೀಗ ಯಾರ ರೀತಿಯಲ್ಲಿ ಬೆಳದಿದೆ ಎಂದು ನಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ ಎಂದರು.
ಕೆಎಲ್ ಇ ಸಂಸ್ಥೆಯು ಒಂದು ಆಲದ ಮರ ಆ ಮರದ ಕೆಲಗಡೆ ಎಲ್ಲರು ಕುಳಿತು ಕೊಳ್ಳುತ್ತಿದ್ದಾರೆ. ಗಟ್ಟಿ ಯಾಗಿರುವುದರಿಂದ ಇವತ್ತು ಆರೋಗ್ಯ ದೃಷ್ಟಿ ಹೆಚ್ಚಾಗುತ್ತಿದೆ, ಆರೋಗ್ಯಕ್ಕೆ ವಿಶ್ವಾಸ ಎಂದು ಬೆಳಗಾವಿ ವೈಧ್ಯರು ಹಾಗೂ ವೈಧ್ಯಕೀಯ ಕ್ಷೇತ್ರ ಅದೇ ರೀತಿಯಲ್ಲಿ ಜಂಬಗಿ ಆಸ್ಪತ್ರೆಯು ದೊಡ್ಡ ಮಟ್ಟದಲ್ಲಿ ಬೇಳೆಯಲಿದೆ ಎಂದು ಭರವಸೆ ತುಂಬಿದರು.
ಈ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆಗೆ ಜರ್ಮನಿ ಜಪಾನ್ ನಿಂದ ಚಿಕಿತ್ಸೆಗೆ ಬೇಕಾಗಿರುವ ಸಲಹಕರಣೆಗಳನ್ನು ತರಿಸಿದ್ದಾರೆ. ಈ ಆಸ್ಪತ್ರೆಯೂ ದೊಡ್ಡ ಮಟ್ಟದಲ್ಲಿ ಬೇಳೆದು ರಾಜ್ಯಾಧ್ಯಾಂತ ವಿಸ್ತರಿಸಬೇಕೆಂದು ಲಕ್ಷ್ಮೀ ಹೆಬ್ಬಾಳಕ್ಕರ್ ಹೇಳಿದರು.
ಇದೇ ವೇಳೆ ಡಾ. ಪ್ರಭಾಕರ್ ಕೋರೆ ಅವರು ಮಾತನಾಡಿ, ಕಳೆದ ನಾಲ್ವತು ವರ್ಷಗಳ ಹಿಂದೆ ಬೆಳಗಾವಿ ಯಾವ ರೀತಿ ಇತ್ತು, ಇದೀಗ ಯಾವ ರೀತಿ ಯಾಗಿ ಬೆಳಗಾವಿ ಬದಲಾವಣೆ ಯಾಗಿದೆಯೂ ಅದೇ ರೀತಿ ನಮ್ಮ ವೈಧ್ಯಕೀಯವೂ ನೂತನ ತಂತ್ರಜ್ಞಾನಗಳೊಂದಿಗೆ ಬದಲಾವಣೆಯಾಗುತ್ತಿದೆ. ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ನೋಡಿದರೆ ಒಂದು ಫೈಸ್ಟಾರ್ ಹೋಟೆಲ್ ರೀತಿ ಕಾಣುತ್ತಿದೆ, ಅಷ್ಟು ಸುಂದರವಾಗಿ ಕಟ್ಟದವನ್ನು ನಿರ್ಮಾಣ ಮಾಡಿದ್ದಾರೆ. ಜಂಬಗಿ ಆಸ್ಪತ್ರೆಯು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯ ಹಾಗೂ ದೇಶ ವ್ಯಾಪ್ತಿಯಲ್ಲಿ ಬೆಳದು ಜನತೆಯಸೇವೆ ಮಾಡಬೇಕು ಎಂದರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಂಸ್ಥಾಪಕ ಲಕ್ಷ್ಮಣ ಜಂಬಗಿ ಮಾತನಾ̧ಡಿ ಕಳೆದ ಮೂವತ್ತು ವರ್ಷಗಳಿಂದ ವೈಧ್ಯಕೀಯ ಕ್ಷೇತ್ರದಲ್ಲಿ ಜನತೆಯ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇವೆ, ಮೋದಲು ರಾಯಭಾಗ ತಾಲೂಕಿನ ಹಾರೊಗೇರಿಯಲ್ಲಿ ಸಣ್ಣ ಆಸ್ಪತ್ರೆಯನ್ನು ಪ್ರಾರಂಭ ಮಾಡಿ ಸತವಾಗಿ ಜನತೆಯ ಸೇವೆ ಮಾಡಿಕೊಂಡು ಬಂದು ಇದೀಗ ಬೆಳಗಾವಿಯ ಕೇಂದ್ರ ಬಿಂದುವಿನಲ್ಲಿ ದೊಡ್ಡ ಮಟ್ಟದಲ್ಲಿ ಜನತೆಯ ಸೇವೆ ಮಾಡಬೇಕೆಂದು ಈ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಇನ್ನು ಈ ಸಂಸ್ಥೆ, ಒಂದೇ ಸೂರಿನಡಿ ಸಂಪೂರ್ಣ ಕಣ್ಣಿನ ಚಿಕಿತ್ಸೆಯನ್ನು ಒದಗಿಸುತ್ತದೆ. ಇದರಲ್ಲಿ ಕಣ್ಣಿನ ಮೋತಿ ಬಿಂದು, ಕ್ಯಾಟರಾಕ್ಟ್, ಕಾರ್ನಿಯಾ, ರೆಟಿನಾ, ಗ್ಲಕೋಮಾ, ಮಕ್ಕಳ ನೇತ್ರಚಿಕಿತ್ಸೆ, ಒಕ್ಕುಲೋಪ್ಲಾಸ್ಟಿ, ನ್ಯೂರೋ-ಆಫ್ತಾಲ್ಮಾಲಜಿ, ರಿಫ್ರಾಕ್ಟಿವ್ ಶಸ್ತ್ರಚಿಕಿತ್ಸೆ ಸೇರಿದಂತೆ ವಿಶೇಷ ಡ್ರೈ ಐ ಹಾಗೂ ಕಾಂಟ್ಯಾಕ್ಸ್ ಲೆನ್ಸ್ ಕ್ಲಿನಿಕ್ ಕೂಡ ಸೇರಿದೆ, ಮತ್ತು ಬಾರಿಗೆ ರೋಬೋಟಿಕ್ 4) ಫ್ಯಾಕೋ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ಮುಕ್ತಿಗಾಗಿ ಜೈಸ್ಟ್ MEL 90 ಎಕ್ಸೆಮರ್ ಲೇಸರ್ ತಂತ್ರಜ್ಞಾನವನ್ನು ಹೆಚ್ಚಿನ ನಿಖರತೆ, ಸುರಕ್ಷತೆ ಮತ್ತು ವೇಗವಾದ ಗುಣಮುಖತೆಯನ್ನುಪಡೆದುಕೊಳ್ಳಲಿದೆ ಜನತೆಯು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಡಾ.ಪ್ರಭಾಕರ ಕೋರೆ, ಡಾ. ಲಕ್ಷ್ಮಣ ಜಂಬಗಿ, ಡಾ. ವರ್ಷಾ ಜಂಬಗಿ, ಡಾ.ಅಮೋಘ ಜಂಬಗಿ, ಡಾ.ಪ್ರೇರಣಾ ಜಂಬಗಿ, ಡಾ. ಹಿತಾ ಹೆಬ್ಬಾಳ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.