ಜನರಿಗೆ ನಾಟಕ ಬೇಕಿಲ್ಲ, ಸುಸ್ಥಿರತೆ ಬೇಕು - ಮೋದಿ
ನವದೆಹಲಿ: ದೇಶದ ಜನರಿಗೆ ಬೇಕಾಗಿರುವುದು ಘೋಷಣೆಗಳಲ್ಲ, ನಾಟಕವಲ್ಲ, ಬದಲಾಗಿ ಅವರಿಗೆ ಸುಸ್ಥಿರತೆ ಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಜನತೆ ಪ್ರತಿಪಕ್ಷಗಳಿಂದ ಉತ್ತಮ ನಡೆಯನ್ನು ನಿರೀಕ್ಷಿಸುತ್ತಾರೆ. ಪ್ರಜಾಪ್ರಭುತ್ವದ ಘನತೆಯನ್ನ ಕಾಪಾಡುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಕೆಲಸ ಮಾಡಬೇಕು. 18ನೇ ಲೋಕಸಭೆಗೆ ಆಯ್ಕೆಯಾಗಿರುವ ಸಂಸದರು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.