LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಜನರ ಶಕ್ತಿ, ಉತ್ಸಾಹ ನಿಜಕ್ಕೂ ಸ್ಪೂರ್ತಿದಾಯಕ' : US ಚುನಾವಣಾ ಜಾಥಾದಲ್ಲಿ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದ ಡಿಕೆಶಿ

ಬೆಂಗಳೂರು : ಕಮಲಾ ಹ್ಯಾರಿಸ್ ವಿಶೇಷ ಆಹ್ವಾನದ ಮೇರೆಗೆ ಡಿಸಿಎಂ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ ಕುಟುಂಬದೊಂದಿಗೆ ಅಮೆರಿಕ ಪ್ರವಾಸದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಡಿಸಿಎಂ ಅವರು, ನನ್ನ ಇತ್ತೀಚಿನ ಕೌಟುಂಬಿಕ ಪ್ರವಾಸದ ಸಮಯದಲ್ಲಿ US ನಲ್ಲಿ ಚುನಾವಣಾ ರ್‍ಯಾಲಿಯನ್ನು ವೀಕ್ಷಿಸುವ ಅದ್ಭುತ ಅವಕಾಶ ಸಿಕ್ಕಿತು.. ಇದು ಪ್ರಜಾಪ್ರಭುತ್ವದ ಹಬ್ಬವನ್ನು ನೋಡುವ ವಿಸ್ಮಯಕಾರಿ ಹಾಗೂ ವಿಶಿಷ್ಟವಾದ ಅನುಭವ ನನಗೆ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ. ಚುನಾವಣಾ ರ್‍ಯಾಲಿಯನ್ನು ನೋಡಿದ ಮೇಲೆ ನನಗೆ ಕಲಿಯಲು ಸಾಕಷ್ಟು ಇದೆ ಎನಿಸಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಇನ್ನು ಜನರ ಶಕ್ತಿ ಮತ್ತು ಉತ್ಸಾಹವು ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು. ಈ ಮಹತ್ತರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇನ್ನಷ್ಟು ಕಲಿಯಲು ಎದುರು ನೋಡುತ್ತಿದ್ದೇನೆ ಎಂದು ಡಿಕೆಶಿ ತಮ್ಮ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ; ವಿದ್ಯಾರ್ಥಿ ಸಾವುಮಹಾಕುಂಭಮೇಳ ಮಾಘೀ ಪೂರ್ಣಿಮೆಗೆ 'ವಾಹನ ರಹಿತ ವಲಯ' ವಿಶೇಷ ಸಂಚಾರ ಯೋಜನೆದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ: ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಕೃಷಿಗೂ ಬಂತು AI ತಂತ್ರಜ್ಞಾನ- ಬೆಳೆ ನಿರ್ವಹಣೆಗೆ ಬಗ್ಗೆ ನೀಡಲಿದೆ ಮಾಹಿತಿಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರ ಬಂಧನಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್: ಠಾಣೆಗೆ ಕಲ್ಲು ತೂರಾಟ, ಲಾಠಿಚಾರ್ಜ್ – ಓರ್ವನ ಬಂಧನಮೊಡವೆ ಕಾಟ ನಿವಾರಿಸಲು ಬಾಳೆಹಣ್ಣು ಸಿಪ್ಪೆಯನ್ನು ಹೀಗೆ ಬಳಸಿ..!ಆಧಾರ್‌ ಇದ್ರೆ ಸಾಕು 50,000 ರೂ.ಗಳವರೆಗೆ ತ್ವರಿತ ಸಾಲರಾಜ್ಯದಲ್ಲಿ ಭರ್ಜರಿ ಉದ್ಯೋಗ: 40,000 ರೂ. ವೇತನದೆಹಲಿ : ಚುನಾವಣೆಯಲ್ಲಿ ಸೋಲು, INDIA blocನಲ್ಲಿ ಬಿರುಕು ವದಂತಿ…!