LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜಾತ್ರೆ ಪ್ರಸಾದ ಸೇವಿಸಿ ಮೂವರ ದುರ್ಮರಣ

ತುಮಕೂರು : ಜಾತ್ರೆಗಾಗಿ ಮಾಡಿದ್ದ ಊಟ ಸೇವನೆಯಿಂದ ವಾಂತಿಭೇದಿಯಾಗಿ ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ಮಧುಗಿರಿ ತಾಲ್ಲೂಕು ಬುಳ್ಳಸಂದ್ರ ಗ್ರಾಮದಲ್ಲಿ ನಡೆದಿದೆ. ಶನಿವಾರ ಗ್ರಾಮದಲ್ಲಿ ಮುತ್ತು ರಾಯಸ್ವಾಮಿ,ಕರಿಯಮ್ಮ ದೇವಿಗೆ ಹರಿಸೇವೆ ಮಾಡಲಾಗಿತ್ತು. ಊಟ ಮಾಡಿದ ಬಳಿಕ ಗ್ರಾಮದಲ್ಲಿ ಕೆಲವರಿಗೆ ವಾಂತಿಭೇದಿ ಕಾಣಿಸಿಕೊಂಡಿದೆ.‌ ಶನಿವಾರ ಬುಳ್ಳುಸಂದ್ರ ಗ್ರಾಮದಲ್ಲಿ ತಿಮ್ಮಕ್ಕ(85) ಸಾವನ್ನಪ್ಪಿದ್ದು, ಬಳಿಕ ಭಾನುವಾರ ಗಿರಿಯಮ್ಮ(90), ಕಾಟಮ್ಮ(45) ಮೃತಪಟ್ಟಿದ್ದಾರೆ. ತಿಮ್ಮಕ್ಕ ಹಾಗೂ ಗಿರಿಯಮ್ಮ ಈ ಇಬ್ಬರು ವಯೋಸಹಜ ಕಾಯಿಲೆಯಿಂದ ಸಾವನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆಯಾದರೂ ಈ ಇಬ್ಬರ ಸಾವಿನ‌ ಬಗ್ಗೆ ಸಾರ್ವಜ‌ನಿಕ ವಲಯದಲ್ಲಿ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಅಸ್ವಸ್ಥಗೊಂಡವರಿಗೆ ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಮುಂದುವರೆದಿದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST