LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರು ಉಲ್ಲೇಖ

ನವದೆಹಲಿ: ಹರಿಯಾಣದ ಫರಿದಾಬಾದ್ ನಲ್ಲಿ ಕೃಷಿ ಭೂಮಿ ಖರೀದಿಸುವಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಾತ್ರವಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಿದೆ.

ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್ ಎಲ್ ಪಹ್ವಾ ಎಂಬುವವರಿಂದ 2006 ರಲ್ಲಿ ಭೂಮಿ ಖರೀದಿ ಮಾಡಿ, ಫೆಬ್ರವರಿ 2010 ರಲ್ಲಿ ಅದೇ ಭೂಮಿಯನ್ನು ಅವರಿಗೆ ಮಾರಾಟ ಮಾಡುವಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ. ಆದರೆ ಪ್ರಿಯಾಂಕ ಅವರನ್ನು ಈ ಪ್ರಕರಣದಲ್ಲಿ ಆರೋಪಿ ಎಂದು ಉಲ್ಲೇಖ ಮಾಡಿಲ್ಲ.

ಭೂಮಿ ಖರೀದಿ ಪ್ರಕ್ರಿಯೆಯಲ್ಲಿ ಪ್ರಿಯಾಂಕಾ ಅವರು ಇದ್ದಾರೆ. ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರು 2005-2006 ರ ಮಧ್ಯೆ 40.08 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ಖರೀದಿ ಮಾಡಿದ್ದಾರೆ. ಡಿಸೆಂಬರ್ 2010 ರಲ್ಲಿ ಖರೀದಿಸಿದ ಅದೇ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಇನ್ನು ಡಿಸೆಂಬರ್ 26 ರಂದು ಜಾರಿ ನಿರ್ದೇಶನಾಲಯವು ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತನ್ನೆಲ್ಲಾ ಸೈನಿಕರನ್ನು ಭಾರತ ಹಿಂದಕ್ಕೆ ಕರೆಸಿಕೊಂಡಿದೆ: ಮಾಲ್ಡೀವ್ಸ್ ಸರ್ಕಾರ'ಖರ್ಗೆ ಅವರ ಆರೋಪ ಗೊಂದಲದ ಆರೋಪ'- ಚುನಾವಣಾ ಆಯೋಗ'ಇಬ್ಬರು ಪತ್ನಿಯರು ಇರುವ ಪುರುಷರಿಗೆ 2 ಲಕ್ಷ ರೂ'.- ಕಾಂಗ್ರೆಸ್‌ ಅಭ್ಯರ್ಥಿ ಗ್ಯಾರಂಟಿಸೈಬರ್ ವಂಚಕರಿಗೆ ಸಿಮ್ ಪೂರೈಸುತ್ತಿದ್ದ ಆರೋಪಿ ಅರೆಸ್ಟ್'ದೇವೇಗೌಡರು CBI ಅನ್ನು ಚೋರ್‌ ಬಚಾವೋ ಸಂಸ್ಥೆ ಎಂದು ಕರೆದಿದ್ದರು'- ಸಿಎಂ'ಉಪ್ಪು ತಿಂದವರು ನೀರು ಕುಡಿಯಲೇಬೇಕು'- ನಿಖಿಲ್ ಕುಮಾರಸ್ವಾಮಿಪೆನ್‌ಡ್ರೈವ್‌ ಪ್ರಕರಣ: ಕಾರ್ತಿಕ್, ದೇವರಾಜೇಗೌಡಗೆ ವಿಚಾರಣೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ಸಿಎಂ ಅರವಿಂದ್​ ಕೇಜ್ರಿವಾಲ್​​ಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನುಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲುಮಂತ್ರಿ ಮಾಲ್ ಗೆ ಮತ್ತೆ ಬಿಗ್ ಶಾಕ್- ಬಿಬಿಎಂಪಿಯಿಂದ ಬೀಗ!