LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜಿ-20 ಶೃಂಗಸಭೆ: ಮೋದಿ ಮುಂದೆ ಇಂಡಿಯಾ ಬದಲು ಭಾರತ ನಾಮಫಲಕ

ನವದೆಹಲಿ, ಸೆ 09 (DaijiworldNews/MS): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಎರಡು ದಿನಗಳ ಜಿ-20 ಶೃಂಗಸಭೆ ಆರಂಭವಾಗಿದೆ. ಮಹತ್ವದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಮುಂದಿದ್ದ ನಾಮಫಲಕದಲ್ಲಿ 'ಭಾರತ್' ಎಂದು ಬರೆದಿರುವುದು ಈಗ ದೇಶದ ಗಮನ ಸೆಳೆದಿದೆ.

ಜಿ-20 ಅಧ್ಯಕ್ಷತೆವನ್ನು ಭಾರತ ವಹಿಸಿದ್ದು, ದೆಹಲಿಯ 'ಭಾರತ್' ಮಂಟಪದಲ್ಲಿ ವಾರ್ಷಿಕ ಶೃಂಗಸಭೆ ನಡೆಯುತ್ತಿದೆ. ಈ ಸಭೆಯನ್ನು ಉದ್ದೇಶಿಸಿ ಆರಂಭಿಕ ಮಾತುಗಳನ್ನಾಡಿದ ಪ್ರಧಾನಿ ಮೋದಿ ಅವರ ಮುಂಭಾಗದಲ್ಲಿ 'ಭಾರತ' ಹೆಸರಿನ ಪ್ರದರ್ಶನ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಜಿ20 ನಿಮಿತ್ತ ಗಣ್ಯರಿಗೆ ರಾಷ್ಟ್ರಪತಿಗಳು ಇಂದು ರಾತ್ರಿ ಏರ್ಪಡಿಸಿರುವ ಔತಣಕೂಟದ ಆಹ್ವಾನ ಹೋಗಿದ್ದು, ಅದರಲ್ಲಿ ʼಪ್ರೆಸಿಡೆಂಟ್‌ ಆಫ್‌ ಭಾರತʼ ಎಂದು ಅಚ್ಚು ಹಾಕಿಸಲಾಗಿತ್ತು. ಇದಾದ ಬಳಿಕ ʼಇಂಡಿಯಾʼ - ಭಾರತ್ ವಿಚಾರವಾಗಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ವಿಪಕ್ಷ ಒಕ್ಕೂಟವು ʼಇಂಡಿಯಾʼ ಎಂದು ಹೆಸರಿಟ್ಟುಕೊಂಡ ಬಳಿಕ ಆತಂಕಗೊಂಡಿರುವ ಮೋದಿ ಸರ್ಕಾರ, ಇಂಡಿಯಾ ಬದಲು ಭಾರತ ಎಂದು ಬಳಸಲು ಮುಂದಾಗಿದೆ ಎಂದು ವಿಪಕ್ಷಗಳು ಟೀಕಿಸಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
5 ರೂ ನಾಣ್ಯ ಅದರಿಂದ ಲಕ್ಷಗಟ್ಟಲೆ ಆದಾಯ..!ನಿಮ್ಮಲ್ಲೂ ಇದೆಯೇ ಈ ನಾಣ್ಯ?ಕೇಜ್ರಿವಾಲ್ ಬಂಧನದ ಸುಳುವು ಕೊಟ್ಟ ಎಎಪಿ ನಾಯಕರುಕರ್ನಾಟಕದಲ್ಲಿ 260 ಕೋವಿಡ್ ಪ್ರಕರಣ ದೃಢ - ಓರ್ವ ಮೃತ್ಯುಸ್ತ್ರೀ ಶಾಪ ಯಾವ ರೂಪದಲ್ಲಿ ಅಂಟಿಕೊಳ್ಳುತ್ತದೆ ಸ್ತ್ರೀ ಶಾಪದಿಂದ ಆಗುವಂತಹ ಸಮಸ್ಯೆಗಳನ್ನು ತಿಳಿದುಕೊಳ್ಳಿ ಸ್ತ್ರೀ ಶಾಪಕ್ಕೆ ಒಳಗಾದರೆ ನರಕ ಯಾಚನೆ ಖಂಡಿತ!ಹಸಿ ಕೊಬ್ಬರಿ ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೊಂದು ಲಾಭವ?ಜನವರಿ 13ರಂದು ಕೆ-ಸೆಟ್ ಪರೀಕ್ಷೆ .!ಕಾಲುಂಗುರಕ್ಕೆ ಮುಕ್ತಿ.!ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಖುಷಿ ಸುದ್ದಿ.!ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್‌!ಶುಲ್ಕ ಹೆಚ್ಚಳ ಇಷ್ಟು.!ರೈಲ್ವೆ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.!ಗಿಗ್ ಕಾರ್ಮಿಕರ ವಿಮಾ ಯೋಜನೆ: ನೋಂದಾಯಿಸಲು ಸೂಚನೆ