LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜೆಡಿಎಸ್‌ ಜೊತೆ ಬಿಜೆಪಿ ಮೈತ್ರಿ ಪ್ರಾಥಮಿಕ ಹಂತದಲ್ಲಿದೆ: ಬಸವರಾಜ ಬೊಮ್ಮಾಯಿ..!

ಜೆಡಿಸ್ ಜೊತೆಗಿನ ಮೈತ್ರಿ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಳ್ಳಾರಿ; ಜೆಡಿಸ್ ಜೊತೆಗಿನ ಮೈತ್ರಿ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏನು ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ.

ಕರ್ನಾಟಕದಲ್ಲಿ ನಾಲ್ಕು ತಿಂಗಳ ಆಡಳಿತ ನೋಡಿದರೆ. ಎಲ್ಲರೂ ಸೇರಿ ಕಾಂಗ್ರೆಸ್ ವಿರೋಧ ಮಾಡುವ ಅವಶ್ಯಕತೆ ಇದೆ.

ಕುಮಾರಸ್ವಾಮಿ ಅವರ ಹೇಳಿಕೆ ಗಮನಿಸಿದರೆ, ಮೈತ್ರಿ ಮಾಡಿಕೊಳ್ಳುವ ವಿಚಾರ ಸುದೀರ್ಘ ಚೆರ್ಚೆ ಆಗಬೇಕು. ಮೈತ್ರಿ ವಿಚಾರ ಇನ್ನೂ ಅಂತಿಮ ಹಂತದ ನಿರ್ಧಾರ ಆಗಿಲ್ಲ. ಪ್ರಾಥಮಿಕ ಹಂತದಲ್ಲಿದೆ ಎಂದರು.

ಸಿಎಂ ಅಸಹಾಯಕರಾಗಿದ್ದಾರೆ :
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು 2013 ರಲ್ಲಿ ಒಂದು ರೀತಿಯಲ್ಲಿ ಇದ್ದರು,

ಈಗ ಇರುವ ಸಿದ್ದರಾಮಯ್ಯ ಬೇರೆ. ಸಿದ್ದರಾಮಯ್ಯ ಅವರನ್ನು ಎರಡು ರೂಪದಲ್ಲಿ ನಾ ನೋಡಿರುವೆ.

ಸಿದ್ದರಾಮಯ್ಯ ಮೇಲೆ ಕೆಲ ಕಾಂಗ್ರೆಸ್ ನಾಯಕರ ಪ್ರಭಾವ ಇದೆ.. ಅವರ ಆಡಳಿತ ಮೇಲೂ ಇದೆ, ರಾಜಕೀಯ ವಿಚಾರದಲ್ಲೂ ಇದೆ. ಈ ವಿಚಾರ ಆಂತರಿಕವಾಗಿ ಎಲ್ಲರಿಗೂ ಗೆತ್ತಾಗಿದೆ, ಈ ಕುರಿತು ಬೇಗುದಿ ಕೂಡಾ ಇದೆ.

ಸಿದ್ದರಾಮಯ್ಯ ಅವರ ಮೇಲೆ ಆಂತರಿಕ ಒತ್ತಡ ಇದೆ. ಅದರ ಒಂದು ಭಾಗ ಹರಿಪ್ರಸಾದ ಅವರು ಮಾತನಾಡಿದ್ದಾರೆ.

ಅವರು ಸಂಪೂರ್ಣವಾಗಿ ಮಾತನಾಡಿದರೂ ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲಾ, ಇದರಿಂದ ಒಂದು ಗೊತ್ತಾಗುತ್ತದೆ. ಹರಿ ಪ್ರಸಾದ್ ಅವರು ಪ್ರಭಾವ ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟರು.

ಸಿದ್ದರಾಮಯ್ಯ ಅವರು ಬಹಳ ಇಂಡಿಪೆಂಡೆಂಟ್ ಆಡಳಿತ ಮಾಡಿದವರು. ಆದರೆ ಅವರು ಈಗ ಒತ್ತಡದಲ್ಲಿ ಆಡಳಿತ ಮಾಡುತಿದ್ದಾರೆ‌. ಆಂತರಿಕವಾಗಿ ಬಹಳ ಅಡೆತಡೆಯಲ್ಲಿ ಸಿ ಎಂ ಕೆಲಸ ಮಾಡುತಿದ್ದಾರೆ‌.

ಸಿ ಎಂ ಅವರು ಆಡಳಿತದ ಮೇಲೆ ಹಿಡಿತ ಕಳೆದು ಕೊಂಡಿದ್ದಾರೆ. ವರ್ಗಾವಣೆ ದಂದೆ ಅವರ ಮೂಗಿನ ನೇರಕ್ಕೆ ನಡೆದರೂ ಅವರು ಅಸಹಾಯಕರಾಗಿದ್ದಾರೆ.

ರಾಜ್ಯದ ಆರ್ಥಿಕ ದಿವಾಳಿ ಆದರೂ ಅವರು ಏನು ಮಾಡದ ಪರಿಸ್ಥಿತಿಯಲ್ಲಿ ಇದ್ದಾರೆ. ವರ್ಗಾವಣೆ ಸಿ ಎಂ ಕಚೇರಿಯಲ್ಲಿ ನಡೆಯುತ್ತಿದೆ.

ಅದನ್ನು ತಡೆಯುವಲ್ಲಿ ಸಿ ಎಂ ಅಸಹಾಯಕ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಅವರ ಶಾಸಕರು ಅವರ ಆಡಳಿತದ ಬಗ್ಗೆ ಮಾತನಾಡುತ್ತಾರೆ.

ಇದು ಸಿದ್ದರಾಮಯ್ಯ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
5500 ದೈಹಿಕ ಶಿಕ್ಷಕರು ಸೇರಿದಂತೆ 40,000 ಶಿಕ್ಷಕರನ್ನು ನೇಮಕಕ್ಕೆ ನಿರ್ಧಾರ..!ರೈತರ ಸಾಲಮನ್ನಾ ಯೋಜನೆಯ ಫಲನುಭವಿಗಳ ಪಟ್ಟಿ ಬಿಡುಗಡೆ..!ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆಸೌರ ಮೇಲ್ಛಾವಣಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ..!ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ - ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆವಿದೇಶದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿ: 43 ಶಂಕಿತರ ಗುರುತಿಸಿದ ಎನ್ಐಎಅಕ್ರಮ ಮರ ಕಡಿತ ಪ್ರಕರಣ – ಬಿಜೆಸಿ ಸಂಸದ ಪ್ರತಾಪ್ ಸಿಂಹ ಸಹೋದರನಿಗೆ ಜಾಮೀನು ಮಂಜೂರುರಾಮಜನ್ಮಭೂಮಿ ಮತ ಪಡೆಯುವ ವಿಚಾರವಲ್ಲ, ಇದು ಸಾಂಸ್ಕೃತಿಕ ವಿಷಯವಾಗಿದೆ - ರಾಜನಾಥ್ ಸಿಂಗ್ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಹಾಗೂ ಪ್ರಿಯಕರನಿಂದ ಪತಿಯ ಹತ್ಯೆಡಿಸಿಎಂ ಡಿಕೆಶಿ ಹೂಡಿಕೆ ಮಾಡಿದ ಕೇರಳದ ಜೈಹಿಂದ್ ಚಾನಲ್​ಗೆ ಸಿಬಿಐ ನೋಟಿಸ್