ಬೆಳಗಾವಿ: ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾಗಿದ್ದ ಜೈನಮುನಿಗಳ ಮೃತದೇಹ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಟಕಬಾವಿ ಗದ್ದೆಯ ಕೊಳವೆ ಬಾವಿಯಲ್ಲಿ ಶ್ರೀಗಳ ಮೃತದೇಹ ಕತ್ತರಿಸಿ ಮೂಟೆಕಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
https://bcsuddi.com/%e0%b2%89%e0%b2%a1%e0%b3%81%e0%b2%aa%e0%b2%bf-%e0%b2%ae%e0%b2%b9%e0%b2%be%e0%b2%ae%e0%b2%b3%e0%b3%86%e0%b2%97%e0%b3%86-7-%e0%b2%9c%e0%b2%a8%e0%b2%b0%e0%b3%81-%e0%b2%b8%e0%b2%be%e0%b2%b5%e0%b3%81/
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ನಂದಿಪರ್ವತ ಆಶ್ರಮ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಶ್ರೀಗಳನ್ನು ಹಣದ ವಿಚಾರವಾಗಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಕೊಳವೆಬಾವಿಗೆ ಮೃತದೇಹ ಎಸೆದಿದ್ದರು.ಪ್ರಕರಣ ಸಂಬಂಧ ನಿನ್ನೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಶ್ರೀಗಳನ್ನು ವಿದ್ಯುತ್ ಶಾಕ್ ಕೊಟ್ಟು ಕೊಲೆಗೈದು ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಮಾಡಿ ಖಟಕಬಾವಿ ಗದ್ದೆ ಬಳಿ ಕೊಳವೆಬಾವಿಗೆ ಎಸೆದಿರುವುದಾಗಿ ಬಾಯ್ಬಿಟ್ಟಿದ್ದರು ಎನ್ನಲಾಗಿದೆ.