LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಟ್ರಾಫಿಕ್ ಜಾಮ್‌ ನಿಂದ ತಲೆಕೆಡಿಸಿಕೊಂಡು ನದಿಯಲ್ಲಿ ಥಾರ್ ಓಡಿಸಿದ ಚಾಲಕನಿಗೆ ದಂಡ

ಹಿಮಾಚಲ: ಟ್ರಾಫಿಕ್ ಜಾಮ್ ನಿಂದ ಬೇಸತ್ತು ಮಹಿಂದ್ರಾ ಥಾರ್ ಅನ್ನು ನದಿಯಲ್ಲಿ ಓಡಿಸಿದ ಚಾಲಕನಿಗೆ ಪೊಲೀಸರು ದಂಡ ವಿಧಿಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಇದರಿಂದ ಪಾರಾಗಲು ಚಾಲಕ ತನ್ನ ಮಹಿಂದ್ರಾ ಥಾರ್ ಅನ್ನು ಹಿಮಾಚಲ ಪ್ರದೇಶದಲ್ಲಿನ ಚಂದ್ರ ನದಿಯಲ್ಲಿ ಓಡಿಸಿದ್ದಾನೆ.

ಈ ರೀತಿ ನದಿಯಲ್ಲಿ ಕಾರು ಚಾಲನೆ ಮಾಡುವುದು ಅಪಾಯಕಾರಿಯಾಗಿದ್ದು, ನದಿಯಲ್ಲಿನ ಜಲಚರಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಪೊಲೀಸರು ಚಾಲಕನ ವಿರುದ್ದ ಕ್ರಮಕೈಗೊಂಡು ದಂಡ ವಿಧಿಸಿದ್ದಾರೆ. ಹಾಗೂ ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಮಾತ್ರವಲ್ಲದೆ ಕೆಲವರು ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರಿಗೂ ಟ್ಯಾಗ್ ಮಾಡುತ್ತಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ, ಭೂಕುಸಿತ: 5 ಸಾವು, ಹಲವರಿಗೆ ಗಾಯ2030ರ ವೇಳೆಗೆ ಭಾರತದ ಸೇವೆಗಳ ರಫ್ತು 800 ಬಿಲಿಯನ್ ಡಾಲರ್ ಗೆ ಏರಿಕೆ : ಗೋಲ್ಡ್ಮನ್ ಸ್ಯಾಚ್ಸ್ ವರದಿ'ನೇಹಾ ಹತ್ಯೆ ಪ್ರಕರಣ ಮುಚ್ಚಿಹಾಕುವ ಯತ್ನ'- ಆರ್.ಅಶೋಕ್ಬೇಸಿಗೆಯಲ್ಲಿ ಗ್ಯಾಸ್ಟ್ರಿಕ್‌ನಿಂದಾಗುವ ಸಮಸ್ಯೆಯನ್ನು ನಿವಾರಿಸುವ ಆಹಾರಗಳಿವು‘ಕೋವಿಶೀಲ್ಡ್’ನಿಂದ ಅಡ್ಡಪರಿಣಾಮವಿದೆ’ ಮೊದಲ ಬಾರಿ ಕೋರ್ಟಿನಲ್ಲಿ ಒಪ್ಪಿಕೊಂಡ ಕಂಪೆನಿ..!'ನಾವು ದಿವಾಳಿತನದಿಂದ ತಪ್ಪಿಸಿಕೊಳ್ಳಲು ಭಿಕ್ಷೆ ಬೇಡುತ್ತಿದ್ದೇವೆ'- ಪಾಕ್‌ ನಾಯಕಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್- 32, 8 ಜಿಬಿ ಪೆನ್‌ಡ್ರೈವ್‍ ಗಳು ಎಸ್ಐಟಿ ವಶಕ್ಕೆಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್‌ : ಹೆಚ್‌ಡಿಕೆ ಬಿಎಸ್‌ವೈಗೆ ಕರೆ ಮಾಡಿ ಅಮಿತ್ ಶಾ ಕ್ಲಾಸ್ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದುಬರ ಪರಿಹಾರ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಅಸಮಾಧಾನ