LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಟ್ವಿಟರ್​ ಲೋಗೋ ಬದಲಾಯಿಸಲು ಮಸ್ಕ್​ ಪ್ಲ್ಯಾನ್​

ನವದೆಹಲಿ : ವಿಶ್ವದ ನಂ 1 ಶ್ರೀಮಂತ ಟ್ವಿಟರ್​ ಮಾಲೀಕ ಎಲನ್​ ಮಸ್ಕ್​ (ಜುಲೈ 23) ರಂದು ಟ್ವಿಟರ್​ ಜಾಲತಾಣ ವೇದಿಕೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ಟ್ವಿಟರ್​ ಲೋಗೋ ಬದಲಾಯಿಸಿ, ಟ್ವಿಟರ್​ ಬರ್ಡ್​ಗೆ ವಿದಾಯ ಹೇಳುವ ಮೂಲಕ ಇಡೀ ವೇದಿಕೆಯನ್ನು ರೀಬ್ರ್ಯಾಂಡ್​ ಮಾಡಲು ಸಜ್ಜಾಗಿದ್ದಾರೆ. ಟ್ವಿಟರ್ ಬರ್ಡ್​​ ಬದಲು ಎಕ್ಷ್​ (X) ಲೋಗೋ ಮೊರೆ ಹೋಗುವ ಸುಳಿವನ್ನು ವಿಡಿಯೋ ಮೂಲಕ ನೀಡಿದ್ದಾರೆ. ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ವಿದಾಯ ಹೇಳುತ್ತೇವೆ. ಉತ್ತಮವಾದ ಎಕ್ಷ್​ ಲೋಗೋವನ್ನು ಪೋಸ್ಟ್​ ಮಾಡಿದ್ದಲ್ಲಿ, ನಾಳೆಯಿಂದ ಅದೇ ಲೋಗೋದೊಂದಿಗೆ ಮುಂದುವರಿಯಲಿದ್ದೇವೆ ಎಂದು ಮಸ್ಕ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಮಸ್ಕ್ ಹೆಚ್ಚಿನ ಮಾಹಿತಿ ​ ಹಂಚಿಕೊಂಡಿಲ್ಲ. ಮಸ್ಕ್​ ಅವರು ಕಳೆದ ವರ್ಷ ಟ್ವಿಟರ್​ ಅನ್ನು ಖರೀದಿ ಮಾಡಿ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ಬಳಿಕ ಟ್ವಿಟರ್​ ನಿರಂತರವಾಗಿ ತಾಂತ್ರಿಕ ವೈಫಲ್ಯವನ್ನು ಅನುಭವಿಸುತ್ತಿದೆ. ಜಾಹೀರಾತು ಆದಾಯವು ಸ್ಥಿರವಾಗಿ ಕ್ಷೀಣಿಸುತ್ತಿರುವಾಗ ಸಾಮಾಜಿಕ ಜಾಲತಾಣ ಕಂಪನಿಯು ತನ್ನ ವೇದಿಕೆಯನ್ನು ಪುನರುಜ್ಜೀವನಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಈಗಲೂ ಟ್ವಿಟರ್​ ಕಂಪನಿ ಜಾಹೀರಾತಿಗೆ ಪರ್ಯಾಯವಾದ ವ್ಯಾಪಾರ ಮಾದರಿಗಳೊಂದಿಗೆ ಬರಲು ಪ್ರಯತ್ನಿಸುತ್ತಿದೆ. ಟ್ವಿಟರ್​ ಬ್ಲ್ಯೂಟಿಕ್​ ಸಬ್​ಸ್ಕ್ರಿಪ್ಸನ್​ ಪರಿಚಯಿಸಿದೆ. ತಿಂಗಳಿಗೆ 8 ಡಾಲರ್​ ನೀಡಿ ಬ್ಲ್ಯೂಟಿಕ್​ ಪಡೆಯುವ ವ್ಯವಸ್ಥೆ ಇದಾಗಿದೆ. ಈಗಾಗಲೇ ಹಲವರು ಈ ಸೇವೆ ಪಡೆಯುತ್ತಿದ್ದು, ಇದರಿಂದ ಟ್ವಿಟರ್​ಗೆ ಕೊಂಚ ಹಣ ಬರುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾನವ ಕಳ್ಳಸಾಗಣೆ ಶಂಕೆ- 303 ಮಂದಿ ಭಾರತೀಯರಿದ್ದ ವಿಮಾನ ವಶಕ್ಕೆ ಪಡೆದ ಫ್ರಾನ್ಸ್ಮಂಗಳೂರು: ಅನ್ಯಮತೀಯ ಕೇರಳ ಜೋಡಿಗಳ ಮೇಲೆ ನೈತಿಕ ಪೊಲೀಸ್ ಗಿರಿ - ಮೂವರು ಅರೆಸ್ಟ್4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರನಾಲ್ವರು ಉಗ್ರರರಿಂದ ಒಳನುಸುಳಲು ಯತ್ನ: ಓರ್ವ ಉಗ್ರನ ಹತ್ಯೆಜ.6ರಂದು ಸೌರ ಮಿಷನ್ ಆದಿತ್ಯ L1 ಪಾಯಿಂಟ್‌ಗೆ ಪ್ರವೇಶಿಸಲಿದೆ - ಸೋಮನಾಥ್Coconut Rice Recipe : ಚಿತ್ರಾನ್ನದಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್‌ ರೆಸಿಪಿ ಒಮ್ಮೆ ಟ್ರೈ ಮಾಡಿಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ: ಮುಖ್ಯ ಶಿಕ್ಷಕಿಯ ಬಂಧನಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಾಪಸ್- ಬಿಜೆಪಿ ಮುಖಂಡರ ಆಕ್ರೋಶಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ : 3000 ಹುದ್ದೆಗಳಿಗೆ ಅರ್ಜಿ ಆಹ್ವಾನಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ..!