LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಡಬಲ್ ಮರ್ಡರ್ : ಗಂಡ, ಮಕ್ಕಳನ್ನು ಬಿಟ್ಟು ತನ್ನ ಜೊತೆಗಿದ್ದ ಪ್ರಿಯತಮೆಯನ್ನೇ ಕೊಂದ ಪ್ರಿಯಕರ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ನಿನ್ನೆ ಎರಡು ಕೊಲೆಗೆ ಸಾಕ್ಷಿಯಾಗಿದೆ.

ಒಂದು ಕಡೆ ಮಾಜಿ ರೌಡಿಶೀಟರ್ ನನ್ನ ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಿದ್ರೆ, ಮತ್ತೊಂದೆಡೆ ಗಂಡ ಬಿಟ್ಟು ಬಾಯ್ ಫ್ರೆಂಡ್ ಜೊತೆಗೆ ಬಣ್ಣದ ನಗರಿಗೆ ಬಂದು ಬದುಕು ಕಟ್ಟಿಕೊಂಡ ಮಹಿಳೆ ಪ್ರಿಯಕರನ ಕೈನಿಂದಲೇ ಹೆಣವಾಗಿ ಹೋಗಿದ್ದಾಳೆ.

ಪ್ರಿಯರನಿಂದಲೇ ಹೆಣವಾದಳು ಪ್ರೇಯಸಿ ವಿದ್ಯಾ ಎಂಬ 30 ವರ್ಷದ ಮಹಿಳೆ ರಾಮನಗರ ಜಿಲ್ಲೆಯ ಮಾಗಡಿ ಸಮೀಪದ ಹೊಸದೊಡ್ಡಿ ನಿವಾಸಿ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ 4 ವರ್ಷದ ಹಿಂದೆ ಗಂಡ ಬಿಟ್ಟು ತನ್ನದೇ ಊರಿನ ಶಾಂತಕುಮಾರ್ ಎಂಬುವವರ ಜೊತೆಗೆ ಪ್ರೀತಿ ಹುಟ್ಟಿ ಬೆಂಗಳೂರಿಗೆ ಬಂದು ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದಳು.

ಕೆಲ ದಿನಗಳಿಂದ ಇಬ್ಬರ ಮಧ್ಯೆ ಮನಸ್ತಾಪವೂ ಉಂಟಾಗಿತ್ತು. ಹೀಗಾಗಿ ವಿದ್ಯಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಾ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಸುಂಕದಕಟ್ಟೆಯ ಸೊಲ್ಲಾಪುರಂ ಲೇಔಟ್​ನಲ್ಲಿ ವಾಸವಿದ್ಳು. ಇದು ಅದ್ಯಾಕೊ ಶಾಂತಕುಮಾರ್ ಗೆ ಈಕೆ ಮತ್ತೊಬ್ಬನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ ಅನ್ನೋ ಅನುಮಾನ ಮೂಡಿತ್ತು. ಹಾಗಾಗಿ ವಿದ್ಯಾಳನ್ನು ಭೇಟಿಯಾಗಿ ರಾತ್ರಿ 9.30ಕ್ಕೆ ವಿದ್ಯಾ ಹಾಗೂ ಶಾಂತಕುಮಾರ್ ಇಬ್ಬರೂ ಬಾಡಿಗೆ ಮನೆಗೆ ಬಂದಿದ್ದು ಶಾಂತಕುಮಾರ್ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿ ಆಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಮಾಜಿ ರೌಡಿಶೀಟರ್ ಅಟ್ಟಾಡಿಸಿ ಬರ್ಬರ ಹತ್ಯೆ

ನಿನ್ನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಜಿ ರೌಡಿ ಶೀಟರ್ ಕಾರ್ತಿಕೇಯನ್ ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಂದಿದ್ದಾರೆ. ಅಷ್ಟಕ್ಕೂ ಈ ಕಾರ್ತಿಕೇಯನ್ ಹಲವು ವರ್ಷಗಳಿಂದ ರೌಡಿಶೀಟರ್ ಆಗಿದ್ದವನು. ಇತ್ತೀಚೆಗಷ್ಟೇ ರೌಡಿಶೀಟರ್ ಕ್ಲೋಸ್ ಮಾಡಿಸಿಕೊಂಡಿದ್ದ.

ವಿವಾದಿತ ಜಾಗಗಳಿಗೆ ಬೇಲಿ ಹಾಕುವ ಕೆಲಸ ಮಾಡುತ್ತಿದ್ದ. ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದ್ದ. ಇದೇ ವೇಳೆ ಮೈಕಲ್ ಮಂಜ ಹಾಗೂ ಸಹಚರರ ವಿರೋಧ ಕಟ್ಟಿಕೊಂಡಿದ್ದ. ಕೆಲವರಿಗೆ ಗನ್ ತೋರಿಸಿ ಬೆದರಿಕೆ ಹಾಕುತ್ತಿದ್ದ ಆರೋಪವೂ ಇತ್ತು. ಫ್ರೆಂಡ್ಸ್ ಗಳ ಬಳಿ ಲೈಸೆನ್ಸ್ ಇರೋ ಗನ್ ಪಡೆದುಕೊಂಡು ಬೆದರಿಕೆ ಹಾಕುತ್ತಿದ್ದ. ಇದರಿಂದ ರೋಸಿಹೋಗಿದ್ದ ಮೈಕಲ್ ಮಂಜು ಅಂಡ್ ಗ್ಯಾಂಗ್ ಪ್ಲಾನ್ ಮಾಡಿ ಅಟ್ಟಾಡಿಸಿ ಚಾಕು ಹಾಗೂ ಲಾಂಗ್ ನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು : ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿಶಾಸ್ತ್ರೀಯ ಗಾಯಕಿ ಪಲ್ಲವಿ ಮಿಶ್ರಾ ಐಎಎಸ್ ಅಧಿಕಾರಿಯಾದ ಕಥೆಆಕಾಶವಾಣಿಯಲ್ಲಿ ಉದ್ಘೋಷಕ/ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಜಗದೀಶ್ ವಕೀಲನೇ ಅಲ್ಲ, ಲಾಯರ್ ಲೈಸೆನ್ಸ್ ಕ್ಯಾನ್ಸಲ್..! ಅಸಲಿ ವಿಚಾರ ಬಯಲಿಗೆಸೋರೆಕಾಯಿ ಪಾಯಸ ಮಾಡುವ ವಿಧಾನಹಾಲಿನಲ್ಲಿರುವಷ್ಟೇ ಕ್ಯಾಲ್ಸಿಯಂ ಹೊಂದಿದೆ ಎಲೆಕೋಸುವಿನಲ್ಲಿ..!ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ಶಾಸ್ತ್ರ ಸಂಪ್ರದಾಯಗಳುಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ.! ಸಿಗುತ್ತಾ ಜಾಮೀನು.?ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನದ್ವಿತೀಯ ಪಿಯುಸಿ ಓದುವ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಉಚಿತ ತರಬೇತಿ.!