LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಡೆಲಿವರಿ ಬಾಯ್​​ಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಮಹಿಳೆ

ವಿಳಾಸ ಕೇಳುವ ನೆಪದಲ್ಲಿ ಡೆಲಿವರಿ ಬಾಯ್​​ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.

ಶುಕ್ರವಾರದಂದು ದ್ವಾರಕಾದ ಸೆಕ್ಟರ್ 23ರಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಪೊಲೀಸರ ಪ್ರಕಾರ, ಮಹಿಳೆ ಚಾಕುವಿನಿಂದ ಡೆಲಿವರಿ ಬಾಯ್ ಮೇಲೆ ಮೂರ್ನಾಲ್ಕು ಬಾರಿ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ. ವೀಡಿಯೋದಲ್ಲಿ, ಮಹಿಳೆಯು ಡೆಲಿವರಿ ಬಾಯ್​​ಯೊಂದಿಗೆ ಮಾತನಾಡಲು ಅವನ ಹಿಂದೆ ಹೋಗುತ್ತಿರುವುದನ್ನು ವೀಡಿಯೋದಲ್ಲಿ ಸೆರೆಯಾಗಿದೆ.  ಆತ ಮಾತನಾಡಲು ಹಿಂದೆ ತಿರುಗಿದಾಗ, ಆಕೆ ವೇಗವಾಗಿ ಆತನ ಕುತ್ತಿಗೆಗೆ ಚಾಕುವಿನಿಂದ ಇರಿಯುತ್ತಾಳೆ. ಅಲ್ಲದೇ ಡೆಲಿವರಿ ಬಾಯ್ ಸ್ಕೂಟರ್‌ ಕೀಯನ್ನು ಪೊದೆಗೆ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ.

ಈ ಘಟನೆಯನ್ನು ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಡೆಲಿವರಿ ಬಾಯ್​ನ್ನು ನೆಲಕ್ಕೆ ತಳ್ಳಿ ಸ್ಕೂಟಿಯ ಟೈರ್​​ನ್ನು ಚಾಕುವಿನಿಂದ ಕತ್ತರಿಸಲು ಪ್ರಯತ್ನಿಸುತ್ತಾಳೆ. ಇಷ್ಟೇ ಅಲ್ಲದೇ ಸ್ಥಳಕ್ಕೆ ಬಂದ ಸ್ಥಳೀಯರಿಗೆ ಚಾಕು ತೋರಿಸಿ ಭಯಪಡಿಸಲು ಮುಂದಾಗುತ್ತಾಳೆ. ತಕ್ಷಣ ಸ್ಥಳೀಯರು ಪೊಲೀಸರಿ ವಿಚಾರ ತಿಳಿಸುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯಿಂದ ಚಾಕನ್ನು ಕಸಿದುಕೊಳ್ಳುತ್ತಾರೆ.

ಈ ವೇಳೆ ಮಹಿಳೆ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಕೋಲು ಎತ್ತಿಕೊಂಡು ಪೊಲೀಸರ ಮತ್ತು ಸ್ಥಳೀಯರ ಕಾರುಗಳ ಮೇಲೆ ದಾಳಿ ಮಾಡುತ್ತಾಳೆ. ಬಳಿಕ ಮಹಿಳಾ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

42 ವರ್ಷದ ಈ ಮಹಿಳೆ ಡಿಡಿಎ ಫ್ಲಾಟ್‌ನಲ್ಲಿ ಬಾಡಿಗೆದಾರರಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದರು ಮತ್ತು ತನ್ನ ನೆರೆಹೊರೆಯವರೊಂದಿಗೆ ಇಂತಹ ಅನೇಕ ಜಗಳಗಳನ್ನು ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಈಕೆಯ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಡೆಲಿವರಿ ಬಾಯ್​​ನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಡೆಲಿವರಿ ಬಾಯ್​​ಯಿಂದ ಮಾಹಿತಿಯನ್ನು ಪಡೆದು, ತನಿಖೆಗೆ ಪೊಲೀಸ್‌ ಮುಂದಾಗಿದೆ. ಮಹಿಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್​​ ಅಧಿಕಾರಿಗಳು ಹೇಳಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ಮಾತ್ರ ಎಂದಿಗೂ ಮರೆಯಬಾರದು..!ಹೆತ್ತ ತಾಯಿಯನ್ನೇ ಹಿಗ್ಗಾಮುಗ್ಗಾ ಥಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಪಾಪಿ ಪುತ್ರಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗಿ ಶ್ರೀಮಂತರಾಗುವ ಯೋಗ ಬರುತ್ತದೆ!ಸರ್ಕಾರ ಜಾತಿ ಗಣತಿಯ ಅಂಕಿ-ಅಂಶ ಬಿಡುಗಡೆ ಮಾಡಬಾರದು: ಶಾಮನೂರು ಶಿವಶಂಕರಪ್ಪ.!ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ : ಜಗದೀಶ್ ಶೆಟ್ಟರ್.!ರಾಜ್ಯಾಧ್ಯಂತ ಮುಂದಿನ ಎರಡು ದಿನಗಳಲ್ಲಿ ಭಯಂಕರ ಚಳಿ: ಹವಾಮಾನ ಇಲಾಖೆ.!ಕ್ರಿಸ್​ಮಸ್ ಹಬ್ಬ ಹಿನ್ನೆಲೆ: ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ.!ಒನಕೆ ಓಬವ್ವ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆ: ಪ್ರತಿಭಟನೆ.!-ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ ಅವರ ವಚನ …!ಯುವಕರು, ಬಡವರು, ಮಹಿಳೆಯರು ಮತ್ತು ರೈತರ ಮೇಲೆ ಕೇಂದ್ರೀಕರಿಸಲು ಬಿಜೆಪಿ ಅಭಿಯಾನ : ಪ್ರಧಾನಿ ಮೋದಿ