LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಡೇಟಿಂಗ್‌ನಲ್ಲಿರುವ ನಟಿ ಶ್ರುತಿ ಹಾಸನ್‌ ಮದುವೆ ಬಗ್ಗೆ ಹೇಳಿದ್ದೇನು?

ಬೆಂಗಳೂರು: ನಟಿ ಶ್ರುತಿ ಹಾಸನ್ ಅಭಿನಯದ 'ಸಲಾರ್ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಯಶಸ್ಸಿನ ಜೊತೆಗೆ, ಶ್ರುತಿ ಹಾಸನ್ ಅವರ ಮದುವೆಯ ಬಗ್ಗೆ ವದಂತಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ನಾನು ಶೀಘ್ರದಲ್ಲೇ ಮದುವೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಡ್ ನ ಜನಪ್ರಿಯ ಸೆಲೆಬ್ರಿಟಿ ಸ್ನೇಹಿತ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಿದರು. ಈ ಸಮಯದಲ್ಲಿ, ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ‘ಶ್ರುತಿ ಹಾಸನ್​ ಗಂಡನ ಜೊತೆ ನನಗೆ ಸ್ನೇಹ ಇದೆ’ ಎಂದು ಒರಿ ಹೇಳಿದ್ದಾರೆ. ಶ್ರುತಿ ಹಾಸನ್ ಅವರು ತಮ್ಮ ಬಾಯ್​ಫ್ರೆಂಡ್ ಶಾಂತನು ಹಜಾರಿಕಾ ಅವರನ್ನು ರಹಸ್ಯವಾಗಿ ಮದುವೆಯಾಗಿರಬಹುದೆಂದು ಹೇಳಿದ್ದಾರೆ. ಈ ಊಹಾಪೋಹಗಳಿಗೆ ಶ್ರುತಿ ಹಾಸನ್ ಇದೀಗ ತೆರೆ ಎಳೆದಿದ್ದಾರೆ.

ನನಗೆ ಇನ್ನೂ ಮದುವೆಯಾಗಿಲ್ಲ. ಎಲ್ಲದರ ಬಗ್ಗೆ ಎಲ್ಲರಿಗೂ ತಿಳಿಸುವ ನಾನು ನನ್ನ ಮದುವೆಯ ವಿಷಯವನ್ನು ಯಾಕೆ ರಹಸ್ಯವಾಗಿಡುತ್ತೇನೆ? ನಿಮಗೆ ನನ್ನ ಬಗ್ಗೆ ಏನೂ ತಿಳಿದಿಲ್ಲ ಎಂದರೆ ದಯವಿಟ್ಟು ಮೌನವಾಗಿರಿ ಎಂದು ಶ್ರುತಿ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಶಾಂತನು ಹಜಾರಿಕಾ ಜೊತೆಗೆ ನಾನು ಡೇಟಿಂಗ್ ಮಾಡುತ್ತಿದ್ದೇನೆ. ಆದರೆ, ಮದುವೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST