Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ತಡರಾತ್ರಿ ರಸ್ತೆ ತಡೆ, ಹೈಡ್ರಾಮಾ, ಗೊಂದಲಗಳಿಗೆ ಸಾಕ್ಷಿಯಾದ ಮದ್ದೂರು ಟಿಎಪಿಸಿಎಂಎಸ್ ಚುನಾವಣೆ

ಮಂಡ್ಯ : ಮದ್ದೂರು ತಾಲೂಕಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಟಿಎಪಿಸಿಎಂಎಸ್ ಚುನಾವಣೆ ರಾಜಕೀಯಕ್ಕೆ ಸಿಲುಕಿ ಕೆಲವು ಹೈಡ್ರಾಮಾ, ಗೊಂದಲ ಹಾಗೂ ಪ್ರತಿಭಟನೆಗಳ ಮೂಲಕ ತಡರಾತ್ರಿವರೆಗೂ ಚುನಾವಣಾ ಪ್ರಕ್ರಿಯೆಗಳು ನಡೆದವು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಾಯಕರು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಮುಖಾಮುಖಿ ಏರ್ಪಟ್ಟ ಹಿನ್ನೆಲೆಯಲ್ಲಿ ಭಾನುವಾರ ನಡೆದ ಚುನಾವಣೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಚುನಾವಣೆಗೆ ಸಾಕ್ಷಿಯಾಗಿದೆ.

news_1790579380_1_258.webp

ಕಾಂಗ್ರೆಸ್ ಹಾಗೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದ ಶಾಸಕ ಕೆ.ಎಂ.ಉದಯ್ ಖುದ್ದು ಮತ ಕೇಂದ್ರದ ಬಳಿ ಕೆಲವು ಗಂಟೆಗಳ ಕಾಲ ಮತಯಾಚನೆ ಮಾಡಿದರೇ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಮನ್ ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಧ್ಯಾಹ್ನದಿಂದ ಸಂಜೆವರೆಗೂ ಮತಯಾಚನೆ ಮಾಡಿದರು.

news_1790579379_0_315.webp

ಸುಮಾರು ಮಧ್ಯಾಹ್ನ 12 ಗಂಟೆ ವೇಳೆಗೆ ಟಿಎಪಿಸಿಎಂಎಸ್ ಸಿಬ್ಬಂದಿ ನಕಲಿ ಮತದಾನಕ್ಕೆ ವ್ಯಕ್ತಿಯೋರ್ವನಿಗೆ ಚುನಾವಣೆ ಗುರುತಿನ ಚೀಟಿ ನೀಡುತ್ತಿದ್ದಾರೆಂಬ ಆಯೋಪದ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೋಹನ್ ಎಂಬುವವನು ತರಾಟೆಗೆ ತೆಗೆದುಕೊಂಡು ತಳ್ಳಾಟ ನೂಕಾಟವಾಗಿದೆ. ತಕ್ಷಣವೇ ಮಧ್ಯೆ ಪ್ರವೇಶಿಸಿದ ಪೋಲೀಸರು ಸಮಾಧಾನಗೊಳಿಸಿ ಮೋಹನ್ ಎಂಬುವವನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದುರು.

ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಪರಿಸ್ಥಿತಿಯನ್ನು ತೆಗೆದುಕೊಂಡು ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಟ್ಟು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಖುದ್ದು ಹಾಜರಿದ್ದರು.

news_1790579380_2_550.webp

ಮತದಾನ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಫಲಿತಾಂಶ ಪ್ರಕಟ ಮಾಡದಂತೆ ರಾತ್ರಿ 9.30 ಗಂಟೆಯ ಬಳಿಕ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ಮತದಾನ ಕೇಂದ್ರದ ಮುಂಭಾಗ ರಸ್ತೆ ತಡೆ ನಡೆಸಿ ಚುನಾವಣಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಕೆಲವು ಮತದಾರರು ಕೋರ್ಟ್ ಮೊರೆ ಹೋಗಿದ್ದು, ಫಲಿತಾಂಶಕ್ಕೆ ತಡೆ ತಂದಿದ್ದಾರೆ‌. ಹೀಗಾಗಿ ಪ್ರಕಟ ಮಾಡದಂತೆ ಆಗ್ರಹ ಮಾಡಿದರು. ರಾಜಕೀಯ ಒತ್ತಡಗಳಿಗೆ ಮಣಿದು ಚುನಾವಣಾಧಿಕಾರಿ ಫಲಿತಾಂಶ ಪ್ರಕಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಪ್ರತಿಭಟನೆಯ ನಡುವೆಯೂ ಚುನಾವಣಾಧಿಕಾರಿ ಡಾ.ಶಿವಕುಮಾರ್ ಬಿರಾದಾರ್ ಫಲಿತಾಂಶ ಮಾಡಿದರು. ಇದರಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು.

ಇನ್ನು ಪರಿಶಿಷ್ಟ ಜಾತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವೈ.ಕೆ.ದ್ಯಾವಯ್ಯ ಮತ್ತು ಮರಿದೇವರು ಇಬ್ಬರು ಅಭ್ಯರ್ಥಿಗಳು 870 ಮತಗಳನ್ನು ಸಮಬಲವಾಗಿ ಪಡೆದಿದ್ದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮರಿದೇವರು ಗೆಲುವಿನ ನಗೆ ಬೀರಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡ ಚುನಾವಣೆಯಲ್ಲಿ ಮದ್ದೂರು ನಗರ, ಕಸಬಾ, ಆತಗೂರು, ಕೊಪ್ಪ, ಮತ್ತು ಸಿಎ ಕೆರೆ ವ್ಯಾಪ್ತಿಯ ಮತದಾರರಿಗೆ ಏರ್ಪಡಿಸಿದ್ದ ಪ್ರತ್ಯೇಕ ಬೂತ್ ಗಳಲ್ಲಿ ಮತದಾನ ಜರುಗಿತು.

ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಷೇರುದಾರರು ಸುಡು ಬಿಸಿಲಿನ್ನು ಲೆಕ್ಕಿಸದೆ ತಮ್ಮ ಹಕ್ಕನ್ನು ಚಲಾಯಿಸಿದರು. ವಯೋ ವೃದ್ಧರು, ಅಂಗವಿಕಲರು, ತಮ್ಮ ಸಂಬಂಧಿಕರ ಜೊತೆಗೆ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ದೃಶ್ಯ ಕಂಡು ಬಂದಿತು.

ಚುನಾವಣೆಯಲ್ಲಿ ಒಟ್ಟು 3506 ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ 3225 ಮಂದಿ ಮತದಾನ ಮಾಡುವ ಮೂಲಕ ಶೇ.92.73 ಮತದಾನ ಜರುಗಿತು.

ಒಟ್ಟಾರೆ ಚುನಾವಣೆಯಲ್ಲಿ "ಎ" ತರಗತಿಯಲ್ಲಿ 5 ಸ್ಥಾನಗಳ ಪೈಕಿ ಕಾಂಗ್ರೆಸ್ ನ 5 ಅಭ್ಯರ್ಥಿಗಳು ಭರ್ಜರಿ ಜಯಭೇರಿ ಭಾರಿಸಿದ್ದಾರೆ.

ಇನ್ನು "ಬಿ" ತರಗತಿಯಿಂದ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು 4 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ 3 ಮಂದಿ ಜಯಭೇರಿ ಭಾರಿಸಿದ್ದಾರೆ.

ವರದಿ : ಗಿರೀಶ್ ರಾಜ್, ಮಂಡ್ಯ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಾವಳಿ ನಿಯಂತ್ರಣ ವಲಯ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮವಲಯ ನೀತಿ ಮರು ಪರಿಶೀಲಿಸಿ: ಸಿಎಂ ಡಿ ಕೆ ಶಿವಕುಮಾರ್ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣಪತಿ ಟಿ. ನಾಯ್ಕ ಟ್ರಸ್ಟ್‌ನಿಂದ ಮಹತ್ವದ ಕಾರ್ಯ: ಸಚಿವ ಮಧು ಬಂಗಾರಪ್ಪಸೆ.30ರಂದು ಶಿಕಾರಿಪುರದಲ್ಲಿ ಭಾರತ್ ಜೋಡೋ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪಸೊರಬ ಕ್ಷೇತ್ರದಲ್ಲಿ ₹2.30 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧು ಬಂಗಾರಪ್ಪ ಭೂಮಿಪೂಜೆಈ ದಿನ ಗಣಪತಿಯನ್ನು ಹೀಗೆ ಆರಾಧಿಸಿ: ಇಷ್ಟಾರ್ಥ ಸಿದ್ಧಿ ಗ್ಯಾರಂಟಿಕರ್ನಾಟಕದಲ್ಲಿ LPG ತಪಾಸಣೆ: ಪ್ರತಿ 4 ಸಿಲಿಂಡರ್‌ಗಳಲ್ಲಿ ಒಂದರಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಗ್ಯಾಸ್ ಪತ್ತೆ!ಕೆಪಿವೈಸಿಸಿ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಅಧ್ಯಕ್ಷರಾಗಿ ಭರತ್ ಯಾದವ್ ಜೆ. ನೇಮಕ ನಕಲಿ ಔಷಧ ತಯಾರಿಕೆ ಕೇಸ್: ಅಕ್ಟೋಬರ್.7ರವರೆಗೆ ಕಿಂಗ್ ಪಿನ್ ಪ್ರಶಾಂತ್ ಎಸ್ಐಟಿ ಕಸ್ಟಡಿಗೆWatch Video: 'ಪೌರಕಾರ್ಮಿಕರ ಪಾದಪೂಜೆ' ಮಾಡಿ ಗೌರವ ಸಮರ್ಪಿಸಿದ 'KAS ಅಧಿಕಾರಿ': ವೀಡಿಯೋ ವೈರಲ್ಗರ್ಭಕೋಶ ಶಸ್ತ್ರಚಿಕಿತ್ಸೆ ಯಡವಟ್ಟು ಆರೋಪ: ನಾಳೆ ಸಾಗರದಲ್ಲಿ ತಜ್ಞ ವೈದ್ಯರ ತಂಡದಿಂದ ಡಾ.ನಾಗೇಂದ್ರಪ್ಪ, ಸಂತ್ರಸ್ತೆ ವಿಚಾರಣೆ