LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತನ್ನೆಲ್ಲಾ ಸೈನಿಕರನ್ನು ಭಾರತ ಹಿಂದಕ್ಕೆ ಕರೆಸಿಕೊಂಡಿದೆ: ಮಾಲ್ಡೀವ್ಸ್ ಸರ್ಕಾರ

ಮಾಲೆ: ಮಾಲ್ಡೀವ್ಸ್ ನಿಂದ ಭಾರತವು ತನ್ನ ಎಲ್ಲಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ಮಾಲ್ಡೀವ್ಸ್ ಸರ್ಕಾರ ತಿಳಿಸಿದೆ.

ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಮೇ 10ರೊಳಗೆ ಭಾರತವು ತನ್ನ ಸಂಪೂರ್ಣ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಗಡುವು ನೀಡಿದ್ದರು. ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆ ವೇಳೆ ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂದಕ್ಕೆ ಕಳುಹಿಸುವುದಾಗಿ ಅವರು ಭರವಸೆ ನೀಡಿದ್ದರು.

ಇದೀಗ ಮಾಲ್ಡೀವ್ಸ್ ನಲ್ಲಿದ್ದ ಭಾರತೀಯ ಸೈನಿಕರ ಕೊನೇ ತಂಡವನ್ನು ಹಿಂತಿರುಗಿ ಕಳುಹಿಸಲಾಗಿದೆ. ದೇಶದಲ್ಲಿ ಎಷ್ಟು ಮಂದಿ ಭಾರತೀಯ ಸೇನೆಯ ಯೋಧರು ನೆಲೆಯೂರಿದ್ದರು ಎಂಬ ವಿವರವನ್ನು ನಂತರ ಬಹಿರಂಗಪಡಿಸಲಾಗುವುದು ಎಂದು ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಾಲೀದ್ ಅವರು ಸನ್.ಎಂವಿ ತಿಳಿಸಿದ್ದಾರೆ.

ಭಾರತವು ತನ್ನ 51 ಯೋಧರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ವರದಿಯಾಗಿತ್ತು. ಈ ಯೋಧರು ಭಾರತ ಸರ್ಕಾರ ಈ ಹಿಂದೆ ಉಡುಗೊರೆಯಾಗಿ ನೀಡಿದ್ದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ಯುದ್ಧ ವಿಮಾನಗಳ ನಿರ್ವಹಣೆ ಸಲುವಾಗಿ ಮಾಲ್ಡೀವ್ಸ್ ನಲ್ಲಿ ಉಳಿದುಕೊಂಡಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
10th ಪಾಸಾದವರಿಗೆ ಕೇಂದ್ರ ಸರ್ಕಾರಿ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿನಟ ದರ್ಶನ್‌ಗೆ ಮತ್ತೆ ನಿರಾಶೆ : ಬೇಲ್‌ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ'ಡ್ರಗ್ ಮುಕ್ತ ಭಾರತಕ್ಕೆ ಮೋದಿ ಸರ್ಕಾರ ಬದ್ಧ' - ಕೇಂದ್ರ ಗೃಹ ಸಚಿವ ಅಮಿತ್ ಶಾ'ಕಳ್ಳರು ತಮ್ಮ ರಕ್ಷಣೆಗಾಗಿ ಒಂದು ಕೂಟವನ್ನು ರಚಿಸಿಕೊಂಡಿದ್ದಾರೆ'- ಸ್ನೇಹಮಯಿ ಕೃಷ್ಣಪಿಎಂ ಕಿಸಾನ್‌‌ ಸಮ್ಮಾನ್ ಯೋಜನೆಯ 18ನೇ ಕಂತಿನ ಹಣ ಬಿಡುಗಡೆಸಿದ್ದರಾಮಯ್ಯಗೆ ಮುಡಾ, ಇಡಿ ತನಿಖೆ ಎಫೆಕ್ಟ್ - ಅ.15ಕ್ಕೆ ಬೆಂಗಳೂರಿಗೆ ಕೆಸಿ ವೇಣುಗೋಪಾಲ್ ಭೇಟಿಸಾಲು ಸಾಲು ರಜೆ: ನವರಾತ್ರಿಗೆ ಬಸ್ ಟಿಕೆಟ್ ದರ ಹೆಚ್ಚಳ ಕಂಗಾಲಾದ ಪ್ರಯಾಣಿಕರು!ದಸರಾ ರಜೆ: ಕೆಲ ಖಾಸಗಿ ಶಾಲೆಗಳು ಇನ್ನೂ ರಜೆ ನೀಡಿಲ್ಲ, ಪೋಷಕರ ಆಕ್ರೋಶ'ದಸರಾ ಒಳಗಡೆಯೇ ಮಹಿಳೆಯರ ಖಾತೆಗೆ ಹಣ ಜಮೆ'- ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ..!