LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತನ್ನ ಹೆಸರಲ್ಲಿ ಮೋಸ ಮಾಡಲು ಮುಂದಾದವರಿಗೆ ಖಡಕ್ ಎಚ್ಚರಿಕೆ ನೀಡಿದ ನಟ ಸಲ್ಮಾನ್ ಖಾನ್

ಮುಂಬೈ : ನಟ ಸಲ್ಮಾನ್ ಖಾನ್ ಹೆಸರು ಹೇಳಿ ಈಗಾಗಲೇ ಅನೇಕರು ಮೋಸ ಮಾಡಿದ್ದಾರೆ. ಅದಕ್ಕೆ ಸಲ್ಮಾನ್ ಖಾನ್ ಅನೇಕ ಬಾರಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದೀಗ ಮತ್ತೊಮ್ಮೆ ಮತ್ತೊಮ್ಮೆ ಸಲ್ಲು ಅಮೆರಿಕದಲ್ಲಿ ಪರ್ಫಾರ್ಮ್ ಮಾಡುತ್ತಾರೆ ಎಂದು ಹೇಳಿ ಕೆಲವರು ಮೋಸ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆ ಸಲ್ಮಾನ್ ಖಾನ್ ಅವರು ಸ್ಪಷ್ಟನೆ ನೀಡಿದ್ದು, ಖಡಕ್ ಎಚ್ಚರಿಕೆಯನ್ನೂ ಕೂಡ ನೀಡಿದ್ದಾರೆ.

ಅಕ್ಟೋಬರ್ 5ರಂದು ಅಮೆರಿಕದಲ್ಲಿ ಸಲ್ಮಾನ್ ಖಾನ್ ಅವರು ಪರ್ಫಾರ್ಮೆನ್ಸ್ ಮಾಡುತ್ತಾರೆ ಎನ್ನುವ ಪೋಸ್ಟರ್ ವೈರಲ್ ಆಗಿದೆ. ಜೊತಗೆ ಟಿಕೆಟ್ ಬುಕಿಂಗ್ ಗೂ ಅವಕಾಶ ಕಲ್ಪಿಸಲಾಗಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಲ್ಮಾನ್ ಖಾನ್ 'ಸಲ್ಮಾನ್ ಖಾನ್ ಆಗಲಿ ಅವರ ಯಾವುದೇ ಕಂಪನಿ ಆಗಲಿ ಪ್ರೋಗ್ರಾಂಗಳನ್ನು ಆಯೋಜನೆ ಮಾಡುತ್ತಿಲ್ಲ. ಅವರು ಪರ್ಫಾರ್ಮೆನ್ಸ್ ನೀಡುತ್ತಾರೆ ಎಂದು ವರದಿ ಆಗಿದ್ದರೆ ಅದು ಸಂಪೂರ್ಣವಾಗಿ ಸುಳ್ಳು' ಎಂದು ಸ್ಪಷ್ಟೀಕರಣ ನೀಡಿದ್ದಾರೆ.

'ನನ್ನ ಕಾರ್ಯಕ್ರಮ ಎಂದು ಹೇಳಿ ಮಾಡಲಾಗುತ್ತಿರುವ ಯಾವುದೇ ಇಮೇಲ್, ಮೆಸೇಜ್ ಹಾಗೂ ಜಾಹೀರಾತುಗಳನ್ನು ನಂಬಬೇಡಿ. ಸಲ್ಮಾನ್ ಖಾನ್ ಅವರ ಹೆಸರನ್ನು ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಎಕ್ಸ್ ನಲ್ಲಿ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇನ್ನು ಸಲ್ಮಾನ್ ಖಾನ್ ಅವರ ಮ್ಯಾನೇಜರ್ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೇಕ್ ಬುಕಿಂಗ್ ಸೈಟ್ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೊಗರಿ ಬೆಳೆಗಾರರಿಗೆ ರಾಜ್ಯ ಸರಕಾರದಿಂದ ಖುಷಿ ಸುದ್ದಿ.!ನಾಗಗೊಂಡನಹಳ್ಳಿ ಶ್ರೀ ಚೆಲುಮೇರುದ್ರ ಸ್ವಾಮಿಯ ರಥೋತ್ಸವಸಾಲದಿಂದ ಮುಕ್ತಿಗೆ ಯಂತ್ರ ಮಂತ್ರ ಮತ್ತು ಪರಿಹಾರ ಇಲ್ಲಿದೆ.!ವಚನ: ಸಿದ್ಧರಾಮೇಶ್ವರ .!ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಮಹಿಳೆ..!ಬೆಂಗಳೂರಿಗೆ ಬಿಸಿಲಾತಂಕ : ಫೆಬ್ರವರಿಯಲ್ಲೇ ಬಿಸಿಲು ಧಗೆ ಹೆಚ್ಚಳ - 42 ಡಿ.ಸೆ. ದಾಟುವ ನಿರೀಕ್ಷೆ!ರಾಜ್ಯದಲ್ಲಿ 5 ಹೊಸ ಮಿನಿ ಏರ್‌ಪೋರ್ಟ್‌ ನಿರ್ಮಾಣ..: ಎಲ್ಲೆಲ್ಲಿ ಗೊತ್ತಾ…?ಚುನಾವಣೆಯಲ್ಲಿ ಗೆದ್ದ ಬಿಜೆಪಿ: ದೆಹಲಿ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ'ಜನರ ಆದೇಶವನ್ನ ನಾವು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇವೆ'- ಕೇಜ್ರಿವಾಲ್ನಿಮ್ಮಲ್ಲೇ ನೀವು ಇನ್ನಷ್ಟು ಕಿತ್ತಾಡಿ, ಒಬ್ಬರನ್ನೊಬ್ಬರು ಮುಗಿಸಿಬಿಡಿ!; APP- Congress ನ್ನು ಟ್ರೋಲ್ ಮಾಡಿದ ಒಮರ್ ಅಬ್ದುಲ್ಲಾ